/newsfirstlive-kannada/media/post_attachments/wp-content/uploads/2023/11/ROHIT_BABAR-2.jpg)
ಅಮೆರಿಕದ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಟೀಮ್ ಇಂಡಿಯಾ- ಪಾಕಿಸ್ತಾನ ಮಧ್ಯೆ ಹೈವೋಲ್ಟೇಜ್ ಪಂದ್ಯ ನಾಳೆ ನಡೆಯಲಿದೆ. ಇದಕ್ಕಾಗಿ 2 ಕಡೆಯ ಆಟಗಾರರು ನೆಟ್ಸ್​ನಲ್ಲಿ ಸಖತ್ ತಯಾರಿ ನಡೆಸುತ್ತಿದ್ದಾರೆ. ಭಾರತ ತಂಡವು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿನ್ ಆಗಿದ್ದು T20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಅತ್ತ ಪಾಕ್ ಪಡೆಯು ಅಮೆರಿಕ ವಿರುದ್ಧ ಹೀನಾಯವಾಗಿ ಸೋತಿರುವುದು ಬಾಬರ್​ ಸೇನೆಗೆ ಭಾರೀ ಮುಖಭಂಗವಾಗಿದೆ. 2007ರಿಂದ ನಡೆದ T20 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ- ಪಾಕ್​ ನಡುವಿನ ಸೋಲು, ಗೆಲುವಿನ ಇತಿಹಾಸ ಈ ರೀತಿ ಇದೆ.
ಇದನ್ನೂ ಓದಿ: IND vs PAK: ಭಾರತ-ಪಾಕ್​ ಹೈವೋಲ್ಟೇಜ್ ಪಂದ್ಯ ರದ್ದಾಗುತ್ತಾ? ನಾಳೆ ಮ್ಯಾಚ್ ನಡೆಯದಿದ್ರೆ ಏನ್ ಆಗುತ್ತೆ?
ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ 2007ರಿಂದ ಇಲ್ಲಿವರೆಗಿನ T20 ವಿಶ್ವಕಪ್ ಟೂರ್ನಿಗಳಲ್ಲಿ ಒಟ್ಟು 12 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತವೇ ಹೆಚ್ಚು ಬಾರಿ ಮೇಲುಗೈ ಸಾಧಿಸಿದೆ. ಅಂದರೆ ಭಾರತ 8 ಬಾರಿ ಪಾಕಿಸ್ತಾನ ವಿರುದ್ಧ ಪಂದ್ಯ ಗೆದ್ದುಕೊಂಡಿದೆ. ಅದೇ ರೀತಿ ಪಾಕಿಸ್ತಾನ ಕೇವಲ 3 ಬಾರಿ ಮಾತ್ರ ಭಾರತ ವಿರುದ್ಧ ಗೆದ್ದಿದೆ. ಒಮ್ಮೆ ಒಂದು ಪಂದ್ಯ ಡ್ರಾ ಆಗಿತ್ತು. ಈ ವೇಳೆ ಬಾಲ್​ ಔಟ್ ಆಡಿಸಲಾಗಿತ್ತು. ಇದರಲ್ಲಿ ಭಾರತ ಅಮೋಘವಾಗಿ ಗೆಲುವು ಸಾಧಿಸಿತ್ತು. ಇನ್ನು ಭಾರತ-ಪಾಕ್​ ನಡುವಿನ ಕಳೆದ 5 ಮ್ಯಾಚ್​ಗಳ ರಿಸಲ್ಟ್​ ನೋಡುವುದಾದ್ರೆ, 3 ಪಂದ್ಯಗಳಲ್ಲಿ ಭಾರತ ಗೆದ್ದಿದ್ರೆ, 2 ಮ್ಯಾಚ್​ಗಳನ್ನ ಪಾಕ್ ಗೆದ್ದುಕೊಡಿದೆ.
ಇದನ್ನೂ ಓದಿ:ನಾಳೆ ರೋಹಿತ್ ಶರ್ಮಾ ಮೈದಾನಕ್ಕೆ ಇಳಿಯದಿದ್ರೆ ಕ್ಯಾಪ್ಟನ್ ಯಾರು.. ಪಾಂಡ್ಯನಾ, ವಿರಾಟ್ ಕೊಹ್ಲಿನಾ?
/newsfirstlive-kannada/media/post_attachments/wp-content/uploads/2024/06/ROHIT_VIRAT_PANDYA.jpg)
2007ರಲ್ಲಿ ಮೊಟ್ಟ ಮೊದಲ T20 ವಿಶ್ವಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದು ಟ್ರೋಫಿಗೆ ಮುತ್ತಿಕ್ಕಿತ್ತು. ಇದೊಂದು ಐತಿಹಾಸಿಕ ಕ್ಷಣವಾಗಿತ್ತು. ಈ ವೇಳೆ ಟೀಮ್​ ಇಂಡಿಯಾದ ನಾಯಕ ಎಂ.ಎಸ್ ಧೋನಿ ಆಗಿದ್ದರು. 2012ರಲ್ಲಿ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧದ ಭಾರತದ ಅತ್ಯಧಿಕ ರನ್ ಎಂದರೆ 5 ವಿಕೆಟ್​​ಗೆ 192 ರನ್​ಗಳು ಗಳಿಸಿರುವುದು ಇಲ್ಲಿವರೆಗೆ ದಾಖಲೆಯಾಗಿದೆ. ಅಷ್ಟೇ ಅಲ್ಲದೇ 2012ರಲ್ಲಿ ಬೆಂಗಳೂರು ಸ್ಟೇಡಿಯಂನಲ್ಲಿ ಪಾಕ್ ವಿರುದ್ಧ ಭಾರತ 9 ವಿಕೆಟ್​ಗೆ 133 ರನ್​ಗಳಿಸಿರುವುದು ಅತಿ ಕಡಿಮೆ ರನ್ ಆಗಿದೆ. ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us