newsfirstkannada.com

6.5 ಅಡಿ ಎತ್ತರ..! ಟೀಂ ಇಂಡಿಯಾಗೆ ನೀಳಕಾಯದ ಬೌಲರ್​ ಎಂಟ್ರಿ.. ಬಾಂಗ್ಲಾಗೆ ಪುಕಪುಕ..!

Share :

Published September 17, 2024 at 10:59am

Update September 18, 2024 at 8:40am

    ಬಾಂಗ್ಲಾ ಅಸ್ತ್ರಕ್ಕೆ ಕ್ಯಾಪ್ಟನ್ ರೋಹಿತ್​ ಶರ್ಮಾ ಪ್ರತ್ಯಸ್ತ್ರ..!

    ಟೀಮ್ ಇಂಡಿಯಾಗೆ 6.5 ಅಡಿ ಎತ್ತರದ ಬೌಲರ್ ಎಂಟ್ರಿ..!

    ಪಂಜಾಬ್​​​ ಎಕ್ಸ್​ಪ್ರೆಸ್​​ ಟೀಮ್ ಇಂಡಿಯಾ ಕ್ಯಾಂಪ್ ಸೇರಿದ್ದೇಕೆ?

ಮುಂಬರೋ ಬಾಂಗ್ಲಾದೇಶ ಟೆಸ್ಟ್​ ಸರಣಿಯನ್ನ ಟೀಮ್ ಇಂಡಿಯಾ ಹಗುರುವಾಗಿ ಪರಿಗಣಿಸಿಲ್ಲ. ಪ್ರತಿ ಸರಣಿಯಂತೆ ಗಂಭೀರವಾಗಿ ತೆಗೆದುಕೊಂಡಿದ್ದು, ಎಲ್ಲಾ ಆಯಾದಲ್ಲೂ ತಂಡವನ್ನ ಬಲಿಷ್ಠಗೊಳಿಸೋ ಚಿಂತನೆಯಲ್ಲಿದೆ. ಅದಕ್ಕಾಗಿ ಟೀಮ್​ ಇಂಡಿಯಾ ಕ್ಯಾಂಪ್​​ಗೆ ಸ್ಪೆಷಲ್​ ಪರ್ಸನ್​ ಎಂಟ್ರಿಕೊಟ್ಟಿದ್ದಾನೆ. ಈತನ ಎಂಟ್ರಿಯಿಂದ ಬಾಂಗ್ಲಾಗೆ ಪುಕ ಪುಕ ಶುರುವಾಗಿದೆ.

6.5 ಅಡಿ ಎತ್ತರದ ಬೌಲರ್ ಎಂಟ್ರಿ

ಇಂಡೋ-ಬಾಂಗ್ಲಾ ರೆಡ್​ ಬಾಲ್​ ACTIONಗೆ ಕೌಂಟ್​ಡೌನ್​​​ ಶುರುವಾಗಿದೆ. ಪಾಕ್​ ಮಣಿಸಿದ ಬಾಂಗ್ಲಾದೇಶ ತಂಡ ಅತೀವ ಹುಮ್ಮಸ್ಸಿನಲ್ಲಿದೆ. ಆದರೆ ಭಾರತ ತಂಡದಲ್ಲಿ ಸ್ವದೇಶದಲ್ಲಿ ಹುಲಿ. ಎಂತಹ ಬಲಿಷ್ಠ ತಂಡ ಬಂದ್ರೂ ಬೇಟೆಯಾಡದೇ ಕಳಿಸಿಲ್ಲ. ಸದ್ಯ ಭಾರತದ ಬೇಟೆಗೆ ಬಂದಿರೋ ಬಾಂಗ್ಲಾವನ್ನ ಮಟ್ಟಹಾಕಲು ಟೀಮ್ ಇಂಡಿಯಾ ಕ್ಯಾಂಪ್​​ಗೆ 6.5 ಅಡಿ ಎತ್ತರದ ನೆಟ್​ ಬೌಲರ್​​ ಎಂಟ್ರಿಕೊಟ್ಟಿದ್ದಾನೆ. ಈ ನೀಳಕಾಯದ ಬೌಲರ್​​ ಎಂಟ್ರಿ ಪ್ರವಾಸಿ ಬಾಂಗ್ಲಾ ತಂಡದ ನಿದ್ದೆಗೆಡಿಸಿದೆ. ಅಷ್ಟಕ್ಕೂ 6.5 ಅಡಿಯ ಆ ಕಟೌಟ್​​ ಮತ್ಯಾರು ಅಲ್ಲ, ಅವನೇ ಗುರ್​​​​​​ನೂರ್​​​​​​​ ಬ್ರಾರ್​​​​..!

ಇದನ್ನೂ ಓದಿ:Sunita Williams ಬಗ್ಗೆ ಅಪ್​ಡೇಟ್ಸ್​; ಭೂಮಿಗೆ ಕರೆ ತರಲು ಹೋಗ್ತಿರುವ ಗಗನಯಾನಿಗಳ ಹೆಸರು ಬಹಿರಂಗ

ಚೆಪಾಕ್​​​ನಲ್ಲಿ ಭಾರತ ತಂಡ ನಾಲ್ಕು ದಿನಗಳ ಕ್ಯಾಂಪ್ ಆಯೋಜಿಸಿದ್ದು, ನೆಟ್​ ಬೌಲರ್​​​ ಗುರ್​​ನೂರ್​​​​​​​ ರೋಹಿತ್​ ಬಳಗವನ್ನ ಸೇರಿಕೊಂಡಿದ್ದಾರೆ. ಬಾಂಗ್ಲಾ ಸ್ಪಿನ್​​​​​ ಪಡೆಯನ್ನ ಛಿದ್ರಗೊಳಿಸಲು ಹೀಗಾಗ್ಲೇ ಮಿಸ್ಟ್ರಿ ಸ್ಪಿನ್ನರ್​ ಹಿಮಾಂಶು ಸಿಂಗ್​ರನ್ನ ನೆಟ್ ಬೌಲರ್​ ಆಗಿ ಬಳಸಿಕೊಳ್ತಿದೆ. ಇದೀಗ 6.5 ಅಡಿ ಎತ್ತರದ ಗುರ್​ನೂರ್​​​ ಬ್ರಾರ್ ತಂಡಕ್ಕೆ ಎಂಟ್ರಿಕೊಟ್ಟಿದ್ದು, ಬಾಂಗ್ಲಾ ಪಡೆಯಲ್ಲಿ ಭೀತಿ ಹುಟ್ಟಿಸಿದೆ.

ಯಾರು ಈ ಗುರ್​ನೂರ್ ಬ್ರಾರ್​​..?

24 ವರ್ಷದ ಗುರ್​ನೂರ್ ಬ್ರಾರ್​ ಪಂಜಾಬ್​ ರಾಜ್ಯದವರು. ಇವರು ಬೇಸಿಕಲಿ ರೈಟ್​​​​​​​​ ಆರ್ಮ್​ ಫಾಸ್ಟ್ ಬೌಲರ್ ಆಗಿದ್ದಾರೆ. ಐದು ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳನ್ನ ಆಡಿದ್ದು, 7 ವಿಕೆಟ್​ ಪಡೆದಿದ್ದಾರೆ. 2023ರ ಐಪಿಎಲ್​ನಲ್ಲಿ ಪಂಜಾಬ್​ ಕಿಂಗ್ಸ್​​ ಪರ ಒಂದು ಪಂದ್ಯವನ್ನಾಡಿದ್ರು. ಕಳೆದ ಸೀಸನ್​ನಲ್ಲಿ ಗುರ್​​ನೂರ್​​​ ಗುಜರಾತ್ ಟೈಟನ್ಸ್ ಸೇರಿಕೊಂಡಿದ್ರು. ಆದರೆ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ.

6.5 ಅಡಿ ಎತ್ತರದ ಗುರ್​​ನೂರ್​​ ರೋಹಿತ್​​​ ಕ್ಯಾಂಪ್​​ ಸೇರಿದ್ದೇಕೆ?

ಸರ್​ಪ್ರೈಸ್ ಎಲಿಮೆಂಟ್​ ಆಗಿ ಗುರ್​​ನೂರ್ ಬ್ರಾರ್ ರನ್ನ​ ನೆಟ್​ಬೌಲರ್​​ ಆಗಿ ಟೀಮ್ ಇಂಡಿಯಾ ಕರೆಸಿಕೊಂಡಿದೆ. ತಂಡದಲ್ಲಿ ಕ್ವಾಲಿಟಿ ಬೌಲರ್​ಗಳಿದ್ದು, ಈ ನೀಳಕಾಯದ ವೇಗಿಗೆ ಮಣೆ ಹಾಕಲು ಪ್ರಮುಖ ಕಾರಣವಿದೆ. ಅದೇನಂದ್ರೆ ಬಾಂಗ್ಲಾ ತಂಡದಲ್ಲಿ 6.5 ಅಡಿ ಎತ್ತರದ ನಹಿದ್​​ ರಾಣ ಅನ್ನೋ ಬೌಲರ್​​​ ಇದ್ದಾನೆ. ಇತ್ತೀಚೆಗೆ ಮುಗಿದ ಪಾಕ್​ ಎದುರಿನ ಸರಣಿಯಲ್ಲಿ ಡೆಡ್ಲಿ ಸ್ಪೆಲ್ ನಡೆಸಿದ್ರು. 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ನಹಿದ್​​ ರಾಣ ಭಾರತಕ್ಕೆ ಥ್ರೆಟ್ ಆಗಬಲ್ಲರು. ಈ ಯಂಗ್​ ಬೌಲರ್​​​ನನ್ನ ಎದುರಿಸಲು ಪ್ರತಿಯಾಗಿ ಭಾರತ ತಂಡ ಗುರ್​ನೂರ್​ ಬ್ರಾರ್​​ರನ್ನ ಕರೆಸಿಕೊಂಡಿದೆ.

ಇದನ್ನೂ ಓದಿ: ಸ್ಪೆಷಲ್ ಟ್ಯಾಲೆಂಟ್ ಹುಡುಗನಿಗೆ ಚಾನ್ಸ್ ಕೊಡಲು ಗಂಭೀರ್ ಕಸರತ್ತು​.. 8 ವೇಗಿಗಳು ಅಸಮಾಧಾನ..!

ಗುರ್​ನೂರ್​​ ಬ್ರಾರ್​​​​​​ ಎಂಟ್ರಿಯಿಂದ ಭಾರತಕ್ಕೆ ಲಾಭವೇನು?
ಗುರ್​ನೂರ್​ ಬ್ರಾರ್ ಕರೆಸಿಕೊಂಡಿದ್ದರ ಹಿಂದೆ ಭಾರತಕ್ಕೆ ಅನೇಕ ಲಾಭಗಳಿವೆ. ಅದೇನಂದ್ರೆ ಗುರ್​ನೂರ್​​​ ಬ್ರಾರ್ ಹೇಳಿಕೇಳಿ 6.5 ಅಡಿ ಎತ್ತರದ ಬೌಲರ್​. ನಿರಂತವಾಗಿ ಬೌನ್ಸ್ ಹಾಗೂ ಪೇಸ್ ಮಾಡಬಲ್ಲರು. ಇಂಡಿಯನ್ ಬ್ಯಾಟರ್ಸ್​ ನೆಟ್ಸ್​ನಲ್ಲಿ ಇವರನ್ನ ಎದುರಿಸಿರೋದ್ರಿಂದ ಹೈ ಆರ್ಮ್​ ಆಕ್ಷನ್​​​​​​​​​ಅನ್ನ ಸರಿಯಾಗಿ ಜಡ್ಜ್​ ಮಾಡಬಹುದು. ಜೊತೆಗೆ ಅವರಿಗೆ ಸ್ವಿಂಗ್ ಮಾಡುವ ಕೆಪಾಸಿಟಿ ಇದೆ. ಇವರನ್ನ ರೋಹಿತ್​​ ಬಾಯ್ಸ್​ ಸಮರ್ಥವಾಗಿ ಎದುರಿಸಿದ್ರೆ ಮೊದಲ ಟೆಸ್ಟ್​​ನಲ್ಲಿ ಬಾಂಗ್ಲಾದ ನಹಿದ್​ ರಾಣರನ್ನ ಎದುರಿಸೋದು ಈಸಿಯಾಗಲಿದೆ.

ಒಟ್ಟಿನಲ್ಲಿ ಬಾಂಗ್ಲಾದೇಶದ ನಹಿದ್​​​​​​ ರಾಣರನ್ನ ಎದುರಿಸಲು ಟೀಮ್ ಇಂಡಿಯಾ ಅವರಷ್ಟೇ ಎತ್ತರವಿರೋ ಗುರ್​ನೂರ್ ಬ್ರಾರ್​ರನ್ನ ನೆಟ್​​ಬೌಲರ್​ ಆಗಿ ಕರೆಸಿಕೊಂಡು ಚೆನ್ನೈನ ಚೆಪಾಕ್​​ ಮೈದಾನದಲ್ಲಿ ಅಭ್ಯಾಸ ನಡೆಸಿದೆ. ಕ್ಯಾಪ್ಟನ್ ರೋಹಿತ್​ ಹಾಗೂ ಹೆಡ್​ಕೋಚ್​​ ಗಂಭೀರ್​​​​​ ಅವರ ಈ ಸ್ಟ್ರಾಟಜಿ ವರ್ಕ್​ ಆಗುತ್ತಾ ? ಇಲ್ವ ಅನ್ನೋದನ್ನ ಕಾದುನೋಡೋಣ.

ಇದನ್ನೂ ಓದಿ: 4 ಪಂದ್ಯ.. ಕಿತ್ತಿರೋದು 30 ವಿಕೆಟ್.. ಚೆಪಾಕ್​​ನಲ್ಲಿ ಇವ್ರಿಗೆ ಸಾಟಿಯೇ ಇಲ್ಲ.. ಬಾಂಗ್ಲಾಗೆ ಢವಢವ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

6.5 ಅಡಿ ಎತ್ತರ..! ಟೀಂ ಇಂಡಿಯಾಗೆ ನೀಳಕಾಯದ ಬೌಲರ್​ ಎಂಟ್ರಿ.. ಬಾಂಗ್ಲಾಗೆ ಪುಕಪುಕ..!

https://newsfirstlive.com/wp-content/uploads/2024/09/gurnoor-brar.jpg

Load More