Advertisment

ಮಾಜಿ ಕ್ರಿಕೆಟರ್​​ನಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಹೀಗೊಂದು ಮನವಿ.. ಆ ಸೇವೆ ಪುನಾರಂಭಿಸಿ ಎಂದ ಸುನಿಲ್ ಜೋಶಿ

author-image
Bheemappa
Updated On
ಮಾಜಿ ಕ್ರಿಕೆಟರ್​​ನಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ಹೀಗೊಂದು ಮನವಿ.. ಆ ಸೇವೆ ಪುನಾರಂಭಿಸಿ ಎಂದ ಸುನಿಲ್ ಜೋಶಿ
Advertisment
  • ಕ್ರಿಕೆಟಿಗ ಸುನಿಲ್ ಜೋಶಿ ಮನವಿಗೆ ಸ್ಪಂದಿಸಿದ್ದ ಆಗಿನ ಸರ್ಕಾರ
  • ಕಾರಣ ನೀಡದೇ ಸರ್ಕಾರ ಆ ಸೇವೆಯನ್ನು ರದ್ದು ಮಾಡಿದ್ದೇಕೆ?
  • ಸುನಿಲ್ ಜೋಶಿ ಮನವಿ ಮಾಡಿರುವುದು ಯಾರು ಯಾರಿಗೆ..?

ಬೆಂಗಳೂರು: ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಸ್ಥಗಿತ ಮಾಡಿರುವುದನ್ನ ಪುನಃ ಆರಂಭಿಸಬೇಕು ಎಂದು ಸಿಎಂ ಸಿದ್ದರಾಮಯ್ಯ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಟೀಂ ಇಂಡಿಯಾದ ಮಾಜಿ ಪ್ಲೇಯರ್​ ಸುನಿಲ್ ಜೋಶಿ ಮನವಿ ಮಾಡಿದ್ದಾರೆ.

Advertisment

ಇದನ್ನೂ ಓದಿ: KL ರಾಹುಲ್​ಗೆ ಮೋಸವಾಗುತ್ತಾ..? ಪಾಂಡ್ಯ ಖರೀದಿಗೆ ಕೋಟಿ ಕೋಟಿ ಹಣ ಸುರಿಯಲು​ ಮುಂದಾದ RCB

ಟೀಂ ಇಂಡಿಯಾದ ಮಾಜಿ ಪ್ಲೇಯರ್​ ಸುನಿಲ್ ಜೋಶಿ ತಮ್ಮ ಎಕ್ಸ್​ ಖಾತೆಯಲ್ಲಿ ಸರಣಿ ಪೋಸ್ಟ್​ಗಳನ್ನು ಶೇರ್ ಮಾಡಿದ್ದಾರೆ. ಬೆಂಗಳೂರಿನಿಂದ ಗದಗಕ್ಕೆ ಪ್ರಯಾಣಿಸುವ ವೋಲ್ವೋ ಬಸ್ ಸೇವೆಗೆ ಯಾವುದೇ ಕಾರಣ ನೀಡದೇ ರದ್ದುಗೊಳಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ತಕ್ಷಣ ಇದಕ್ಕೆ ಸ್ಪಂದಿಸಬೇಕು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಹೆಚ್​.ಕೆ ಪಾಟೀಲ್ ಶುರು ಮಾಡಲು ಅನುಮತಿಸಬೇಕು. ನಿಮ್ಮ ಸಹಕಾರ ತುಂಬಾ ಮೆಚ್ಚುಗೆಯಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: RCB ಮಾಜಿ ಪ್ಲೇಯರ್​ ಸ್ಫೋಟಕ ಬ್ಯಾಟಿಂಗ್​.. 48 ಎಸೆತದಲ್ಲಿ 9 ಸಿಕ್ಸರ್​, 124 ರನ್ಸ್​

Advertisment


">August 18, 2024

ಈ ಹಿಂದೆಯು ಗದಗ ಟು ಬೆಂಗಳೂರು ವೋಲ್ವೋ ಬಸ್ ಸೇವೆ ಸ್ಥಗಿತ ಮಾಡಲಾಗಿತ್ತು. ಹೀಗಾಗಿ ಸುನಿಲ್ ಜೋಶಿಯವರು 2023 ರಲ್ಲಿ ಟ್ವೀಟ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ್ದ ಆಗಿನ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಬಸ್ ಸೇವೆ ಪುನಃ ಆರಂಭಿಸಿದ್ದರು. ಆದ್ರೆ, ಕೆಲವು ದಿನಗಳಿಂದ ಸಾರಿಗೆ ಇಲಾಖೆ ಸೇವೆ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಎಕ್ಸ್​ ಖಾತೆ ಮೂಲಕ ವೋಲ್ವೋ ಬಸ್ ಸೇವೆಯನ್ನು ಮತ್ತೆ ಆರಂಭಿಸಬೇಕು ಎಂದು ಸರ್ಕಾರಕ್ಕೆ ಸುನಿಲ್ ಜೋಶಿ ಮನವಿ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment