/newsfirstlive-kannada/media/post_attachments/wp-content/uploads/2024/05/RCB-VS-CSK-2.jpg)
ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಆರ್​ಸಿಬಿ 47 ರನ್​ಗಳಿಂದ ಸೋಲಿಸುವ ಮೂಲಕ ಬೆಂಗಳೂರು ರಾಯಲ್ ಚಾಲೆಂಜರ್ಸ್​​ 2024ರ ಪ್ಲೇ-ಆಫ್​ ಪ್ರವೇಶದತ್ತ ದಾಪುಗಾಲು ಇಟ್ಟಿದೆ. ಪ್ಲೇ-ಆಫ್​ನ ಡಿಸೈಡರ್ ಪಂದ್ಯದಲ್ಲಿ ಆರ್​ಸಿಬಿ ಸಿಎಸ್​​ಕೆಯನ್ನು ಎದುರಿಸಲಿದೆ. ಮೇ 18 ರಂದು ನಡೆಯುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ ಸಿಎಸ್​ಕೆಯನ್ನು 18 ರನ್​ಗಳ ಅಂತರದಿಂದ ಅಥವಾ 18.1 ಓವರ್​​ಗಳಲ್ಲಿ ಗುರಿಯನ್ನು ಮುಟ್ಟಬೇಕಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಈ ಪಂದ್ಯಕ್ಕೆ ಮಳೆಯ ಆತಂಕ ಶುರುವಾಗಿದೆ. ಹವಾಮಾನ ಇಲಾಖೆ ಮೇ 18 ರಂದು ಬೆಂಗಳೂರಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಸೂಚನೆ ನೀಡಿದೆ. ಹೀಗಾಗಿ ಗೆಲ್ಲಲೇಬೇಕಾದ ಪಂದ್ಯವು ಏನಾಗಲಿದೆಯೋ ಎಂಬ ಆತಂಕ ಎರಡು ತಂಡಗಳಿಗೆ, ಹಾಗೂ ಅಭಿಮಾನಿಗಳಿಗೆ ಕಾಡಲು ಶುರುವಾಗಿದೆ.
ಇದನ್ನೂ ಓದಿ:ಬೇಸರದಲ್ಲೇ ವಿಮಾನ ಹತ್ತಿದ RCB ವಿಲ್ ಜಾಕ್ಸ್.. ಈ ಆಟಗಾರನ ಸಹಾಯ ಸ್ಮರಿಸಿ ಜಾಕ್ಸ್ ಭಾವುಕ
/newsfirstlive-kannada/media/post_attachments/wp-content/uploads/2024/05/RCB-won-match.jpg)
ಹವಾಮಾನ ಇಲಾಖೆ ಹೇಳಿದ್ದೇನು?
ಮೇ 18 ರಂದು ಬೆಂಗಳೂರಲ್ಲಿ ಪಂದ್ಯ ನಡೆಸಲು ಆಶಾದಾಯಕವಾಗಿಲ್ಲ. 90 ಪ್ರತಿಶತ ಮಳೆ ಬೀಳುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಒಂದು ವೇಳೆ ಮಳೆಯಿಂದಾಗಿ ಅವತ್ತಿನ ಪಂದ್ಯ ವಾಶ್ ಔಟ್ ಆದರೆ ಆರ್​ಸಿಬಿ, ಈ ಬಾರಿಯ ಟೂರ್ನಿಯಿಂದ ಹೊರ ಬೀಳಲಿದೆ. ಮಳೆ ಬಂದು ರದ್ದಾದರೆ ಎರಡು ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಈಗಾಗಲೇ 14 ಅಂಕಗಳಿಸಿರುವ ಸಿಎಸ್​ಕೆ 15 ಪಾಯಿಂಟ್ಸ್​ನೊಂದಿಗೆ ಪ್ಲೇ-ಆಫ್ರ ಪ್ರವೇಶ ಮಾಡಲಿದೆ.
ನಮ್ಮ ಆರ್​​ಸಿಬಿ 13 ಅಂಕಗಳೊಂದಿಗೆ ಟೂರ್ನಿಯಿಂದ ಹೊರ ಬೀಳಲಿದೆ. ಜೊತೆಗೆ ಎಲ್​​ಎಸ್​ಜಿ ಅಥವಾ ಎಸ್​ಆರ್​ಹೆಚ್​ ಈ ಎರಡು ತಂಡಗಳಲ್ಲಿ ಯಾವುದಾದರೂ ಒಂದು ಪ್ಲೇ ಆಫ್​ಗೆ ಪ್ರವೇಶ ಪಡೆಯಲಿವೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಭೀಕರ ಅಪಘಾತ.. 6 ಮಂದಿ ಸಜೀವ ದಹನ.. 32 ಪ್ರಯಾಣಿಕರಿಗೆ ಗಾಯ.. ಮತ್ತಷ್ಟು ಸಾವು ನೋವಿನ ಆತಂಕ
/newsfirstlive-kannada/media/post_attachments/wp-content/uploads/2024/05/RCB-42.jpg)
ಮುಂಬೈ ವಿರುದ್ಧ ಎಲ್​ಎಸ್​ಜಿ ಸೋತರೆ ಸನ್ ರೈಸರ್ಸ್​ ಹೈದರಾಬಾದ್ ತಂಡ ಪ್ಲೇ-ಆಫ್​​ಗೆ ಹೋಗೋದು ಖಚಿತವಾಗಲಿದೆ. ಆರ್​ಸಿಬಿ ಮತ್ತು ಸಿಎಸ್​ಕೆ ಪಂದ್ಯಕ್ಕೆ ಮಳೆ ಅಡ್ಡಿಯಾದರೆ KKR, RR, CSK, SRH ಪ್ಲೇ-ಆಫ್​ಗೆ ಅರ್ಹತೆ ಪಡೆಯುತ್ತವೆ. ಕೆಕೆಆರ್​ ಮತ್ತು ಆರ್​ಆರ್​ ಕ್ವಾಲಿಫೈಯರ್​ನ ಮೊದಲ ಪಂದ್ಯವನ್ನು ಆಡಲಿವೆ. ಸಿಎಸ್​​ಕೆ ಮತ್ತು ಎಸ್​ಆರ್​ಹೆಚ್​ ಎಲಿಮಿನೇಟರ್ ಪಂದ್ಯದಲ್ಲಿ ಆಡಲಿವೆ. ಆರ್​ಆರ್ ಮತ್ತು ಕೆಕೆಆರ್​​ ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶ ಮಾಡುತ್ತದೆ.
/newsfirstlive-kannada/media/post_attachments/wp-content/uploads/2024/05/RCB-vs-CSK.jpg)
ಇನ್ನೊಂದು ವಿಚಾರ ಅಂದರೆ ಎಸ್​ಆರ್​ಹೆಚ್​ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ಎರಡರಲ್ಲೂ ಗೆದ್ದರೆ, ಕ್ವಾಲಿಫೈಯರ್​ನ ಮೊದಲ ಪಂದ್ಯವನ್ನ ಆಡಿದರೂ ಅಚ್ಚರಿ ಇಲ್ಲ. ಇಲ್ಲಿ ಸೋತ ತಂಡವು ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ತಂಡದ ಜೊತೆ ಫೈನಲ್ ಪ್ರವೇಶಕ್ಕೆ ಸೆಣಸಾಟ ನಡೆಸಲಿದೆ. ಮೇ 26 ರಂದು ಫೈನಲ್ ಪಂದ್ಯವು ನಡೆಯಲಿದೆ.
ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us