newsfirstkannada.com

ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ.. ರಾಜಸ್ಥಾನ್ ವಿರುದ್ಧ CSK ಗೆ ಭರ್ಜರಿ ಗೆಲುವು..

Share :

Published May 12, 2024 at 7:43pm

    ರಾಜಸ್ಥಾನ್ ರಾಯಲ್ಸ್​ ವಿರುದ್ಧ ಐದು ವಿಕೆಟ್​​ಗಳ ಗೆಲುವು

    ಪ್ಲೇ ಆಫ್ ಹಾದಿ ಸುಲಭ ಮಾಡಿಕೊಳ್ತಿರುವ ಧೋನಿ ಬಳಗ

    18.2 ಓವರ್​ನಲ್ಲಿ ಗೆಲುವಿನ ದಡ ಮುಟ್ಟಿದ ಸಿಎಸ್​ಕೆ ತಂಡ

ಚೆನ್ನೈನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಗಾಯಕ್ವಾಡ್ ನೇತೃತ್ವದ ಸಿಎಸ್​ಕೆ, ರಾಜಸ್ಥಾನ್ ರಾಯಲ್ಸ್​ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಪ್ಲೇ-ಆಫ್​​ ಪ್ರವೇಶ ಮಾಡಲು ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಮೊದಲ ಬ್ಯಾಟ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್​ 142 ರನ್​ಗಳ ಗುರಿಯನ್ನು ಸಿಎಸ್​ಕೆ ನೀಡಿತ್ತು. ಸಿಎಸ್​ಕೆ ಈ ಗುರಿಯನ್ನು ಐದು ವಿಕೆಟ್ ಕಳೆದುಕೊಂಡು 18.2 ಓವರ್​ನಲ್ಲಿ ಮುಟ್ಟಿತು. ಸಿಎಸ್​​ಕೆ ಗೆಲುವಿಗೆ ನಾಯಕ ಗಾಯಕ್ವಾಡ್ ಜವಾಬ್ದಾರಿಯುತ ಆಟ ಆಡಿದರು. ವಿಕೆಟ್​ಗಳು ಬೀಳುತ್ತಿದ್ದ ಸಂದರ್ಭದಲ್ಲಿ ಕ್ರೀಸ್​ನಲ್ಲಿ ಬಲವಾಗಿ ನಿಂತು 41 ಬಾಲ್​ನಲ್ಲಿ 42 ರನ್​ಗಳಿಸಿದರು. ರಾಚಿನ್ ರವೀಂದ್ರ 27, ಮಿಚೆಲ್ 22, ಅಲಿ 10, ದುಬೆ 18 ರನ್​ಗಳಿಸಿದರು.

ಇದನ್ನೂ ಓದಿ:ಟಾಸ್​ ಸೋತ ಆರ್​ಸಿಬಿ.. ಫಸ್ಟ್ ಬ್ಯಾಟಿಂಗ್.. ತಂಡದಲ್ಲಿ ಸಣ್ಣ ಬದಲಾವಣೆ..!

ಕೇವಲ 141 ರನ್​ಗಳಿಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಟ್ಟಿಹಾಕುವಲ್ಲಿ ಸಿಎಸ್​ಕೆ ಯಶಸ್ವಿಯಾಗಿತ್ತು. ಸಿಎಸ್​ಕೆ ಪರ ಸಿಮರ್ಜೀತ್​​ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ನಾಲ್ಕು ಓವರ್​ ಮಾಡಿ ಕೇವಲ 26 ರನ್​ ನೀಡಿದರು. ಇನ್ನು ರವೀಂದ್ರ ಜಡೇಜಾ ಕೂಡ ಅದ್ಭುತ ಬೌಲಿಂಗ್ ಮಾಡಿದರು ನಾಲ್ಕು ಓವರ್ ಮುಗಿಸಿ 24 ರನ್ ನೀಡಿದರು. ಇನ್ನು ತುಷಾರ್ ದೇಶಪಾಂಡೆ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು. ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ 24, ಬಟ್ಲರ್ 21, ಸ್ಯಾಮ್ಸನ್ 15, ಪರಾಗ್ 47, ಧ್ರುವ್ ಜರೇಲ್ 28 ರನ್​ಗಳಿಸಿದರು. ಈ ಮೂಲಕ ನಿಗದಿತ 20 ಓವರ್​ಗೆ 5 ವಿಕೆಟ್ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ಕೇವಲ 141 ರನ್​ಗೆ ಇನ್ನಿಂಗ್ಸ್ ಮುಗಿಸಿತ್ತು.

ಇದನ್ನೂ ಓದಿ:ಸಂಜು ಸ್ಯಾಮ್ಸನ್​​ಗೆ ಧೋನಿ ಗ್ಯಾಂಗ್ ಮಾಸ್ಟರ್ ಸ್ಟ್ರೋಕ್​.. CSKಗೆ ಸಿಕ್ಕೇ ಬಿಟ್ಟ ಮತ್ತೊಬ್ಬ ಬೆಂಕಿ ಬೌಲರ್​​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ.. ರಾಜಸ್ಥಾನ್ ವಿರುದ್ಧ CSK ಗೆ ಭರ್ಜರಿ ಗೆಲುವು..

https://newsfirstlive.com/wp-content/uploads/2024/05/RCB-39.jpg

Load More