/newsfirstlive-kannada/media/post_attachments/wp-content/uploads/2024/08/D-K-Shivakumar.jpg)
ಬೆಂಗಳೂರಿನ ನಾಗರೀಕರಿಗೆ ಉಪಕಾರ ಸ್ಮರಣೆ ಇಲ್ವಾ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಯಾರ್ ಏನೇ ಹೇಳಿದ್ರೂ, ಧರಣಿ ಮಾಡಿದ್ರೂ ನಾನು ನೀರಿನ ದರ ಏರಿಕೆ ಮಾಡೋದೇ ಅಂತ ಮಾತನಾಡಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಯೋಜಿಸಿ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ರವರು ಬೆಂಗಳೂರಿಗೆ ಸೇಪರ್ಡೆಯಾಗಿರೋ 110 ಹಳ್ಳಿಗಳಿಗೆ ಕಾವೇರಿ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಜಲಮಂಡಳಿ ನಷ್ಟದಲ್ಲಿ ನಡೀತಿದೆ. ಸಂಬಳ ಕೊಡೋಕೂ ಆಗ್ತಿಲ್ಲ. ವಿದ್ಯುತ್ ದರವೂ ಪಾವತಿ ಮಾಡಲಾಗ್ತಿಲ್ಲ. ಹೀಗಾಗಿ ನೀರಿನ ದರ ಏರಿಕೆ ಮಾಡಲು ಸಿದ್ಧ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಪೀಣ್ಯ ಮೆಟ್ರೋ ನಿಲ್ದಾಣದ ಮುಂದೆ ಭಾರೀ ಜನಸಂದಣಿ.. ಅಷ್ಟಕ್ಕೂ ಆಗಿದ್ದೇನು? ಇಂದು ಮೆಟ್ರೋ ಇಲ್ವಾ?
ಆದರೆ ಎಷ್ಟು ಪ್ರಮಾಣದಲ್ಲಿ ದರ ಏರಿಕೆ ಆಗುತ್ತೆ ಆಗಲಿದೆ ಎಂದು ಜನರು ಕಾದು ಕುಳಿತ್ತಿದ್ದಾರೆ. ಈ ಮಧ್ಯೆ ಮುಂದಿನ ಮೂರು ವಾರಗಳಲ್ಲಿ 110 ಹಳ್ಳಿಗಳ ಮನೆಗಳಿಗೆ ಕಾವೇರಿ ಕನೆಕ್ಷನ್ ಸಿಗಲಿದೆ.
ಇದನ್ನೂ ಓದಿ: 156 FDC ಔಷಧಿಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ! ಹಾಗಿದ್ರೆ ಪ್ಯಾರೆಸಿಟಮಾಲ್ ಇನ್ಮುಂದೆ ಬರಲ್ವಾ?
ಇದಲ್ಲದೆ, ‘ಬೆಂಗಳೂರಲ್ಲಿ 1 ಕೋಟಿ 40 ಲಕ್ಷ ನಾಗರೀಕರಿದ್ದಾರೆ. ಅವರಿಗೆ ನೀರು ಒದಗಿಸಿಕೊಳ್ಳಲೇಬೇಕು. ನಾನು ಬಂದ ಮೇಲೆ ಏರಿಕೆ ಮಾಡಲು ಮುಂದಾಗಿದ್ದೀನಿ. ಮೇಕೆದಾಟು ಭರವಸೆ ಇದೆ. ಈ ವರ್ಷ ಇಷ್ಟುಹೊತ್ತಿಗಾಗಲೇ 60 ಟಿಎಂಸಿ ನೀರು ಬಿಡಬೇಕಾಗಿತ್ತು. 170 ಟಿಎಂಸಿ ನೀರನ್ನ ಬಿಟ್ಟಿದ್ದೇವೆ. 99 ಟಿಎಂಸಿ ಎಕ್ಸ್ಟ್ರ ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ಮುಂದಿನ ದಿನ ಕೋರ್ಟಿನಲ್ಲಿ ಮೇಕೆದಾಟು ವಿಚಾರವಾಗಿ ನಂಬಿಕೆ ಇದೆ’ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ