newsfirstkannada.com

ಪೀಣ್ಯ ಮೆಟ್ರೋ ನಿಲ್ದಾಣದ ಮುಂದೆ ಭಾರೀ ಜನಸಂದಣಿ.. ಅಷ್ಟಕ್ಕೂ ಆಗಿದ್ದೇನು? ಇಂದು ಮೆಟ್ರೋ ಇಲ್ವಾ?

Share :

Published August 23, 2024 at 9:04am

    ಮೆಟ್ರೋವನ್ನೇ ನಂಬಿ ಸಂಚರಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

    ಪೀಣ್ಯ ಮೆಟ್ರೋ ನಿಲ್ದಾಣದ ಮುಂದೆ ಕಾಣಿಸಿಕೊಂಡ ಜನರ ಸರತಿ ಸಾಲು

    ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ನಡುವೆ ಹೀಗೊಂದು ಬದಲಾವಣೆ

ಬೆಂಗಳೂರು: ಇಂದು ಕೂಡ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರ ನಿಲ್ದಾಣದವರೆಗೂ ಸಂಚಾರ ಸ್ಥಗಿತವಾಗಿದೆ.

ಬಿಎಂಆರ್ ಸಿಎಲ್ ಇಂದು ಮೆಟ್ರೋ ಸಂಚಾರ ಸ್ಥಗಿತಗೊಳಿಸಿದೆ. ನಾಗಸಂದ್ರ – ಮಾದಾವರ ನಡುವಿನ ಸಿಗ್ನಲಿಂಗ್ ಟೆಸ್ಟಿಂಗ್ ಹಿನ್ನಲೆ ಸ್ಥಗಿತ ಮಾಡಿದೆ. ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಿದೆ.

ಇದನ್ನೂ ಓದಿ: 156 FDC ಔಷಧಿಗಳನ್ನು ಬ್ಯಾನ್​ ಮಾಡಿದ ಕೇಂದ್ರ ಸರ್ಕಾರ! ಹಾಗಿದ್ರೆ ಪ್ಯಾರೆಸಿಟಮಾಲ್ ಇನ್ಮುಂದೆ ಬರಲ್ವಾ?

ಫೀಡರ್ ಬಸ್ ವ್ಯವಸ್ಥೆ

ಮೆಟ್ರೋ ಸಂಚಾರ ಸ್ಥಗಿತ ಹಿನ್ನೆಲೆ ಪೀಣ್ಯ ಮೆಟ್ರೋ ನಿಲ್ದಾಣದ ಮುಂದೆ ಜನರ ಸರತಿ ಸಾಲು ಕಾಣಿಸಿದೆ. ಮೆಟ್ರೋವನ್ನೇ ನಂಬಿ ಸಂಚರಿಸುವ ಜನರಿಗಾಗಿ ಮೆಟ್ರೋ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪೀಣ್ಯ ಮೆಟ್ರೋದಿಂದ  ನಾಗಸಂದ್ರ ಮೆಟ್ರೋ ತನಕ ಈ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ದೆಹಲಿ ಯಾತ್ರೆ.. ಹೈಕಮಾಂಡ್​ ಮಟ್ಟದಲ್ಲಿ ಹೋರಾಟಕ್ಕೆ ರಣತಂತ್ರ

ಇನ್ನು ಬಿಎಂಆರ್​ಸಿಎಳ್​ ಸಿಗ್ನಲಿಂಗ್​​ ಟೆಸ್ಟ್​ಗಾಗಿ  ಮೆಟ್ರೋ 5 ದಿನ ಸಂಚಾರ ಬಂದ್‌ ಆಗಲಿದೆ ಎಂದು ಈ ಮೊದಲೇ ಹೇಳಿತ್ತು. ಆಗಸ್ಟ್‌ 20, 23, 30 ಹಾಗೂ ಸೆಪ್ಟೆಂಬರ್‌ 6, ಸೆಪ್ಟೆಂಬರ್‌ 11 ಪೂರ್ಣ ದಿನ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗೂ ರೈಲುಗಳ ಸಂಚಾರ ಇರುವುದಿಲ್ಲ ಎಂದು ತಿಳಿಸಿದೆ. ಪೀಣ್ಯ ಇಂಡಸ್ಟ್ರಿಯಿಂದ ರೈಲು ಆರಂಭವಾಗಲಿದೆ. ಆ ಮಾರ್ಗದ ಉಳಿದ ನಿಲ್ದಾಣಗಳ ನಡುವೆ ಎಂದಿನಂತೆ ಸೇವೆ ಇರಲಿದೆ ಎಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೀಣ್ಯ ಮೆಟ್ರೋ ನಿಲ್ದಾಣದ ಮುಂದೆ ಭಾರೀ ಜನಸಂದಣಿ.. ಅಷ್ಟಕ್ಕೂ ಆಗಿದ್ದೇನು? ಇಂದು ಮೆಟ್ರೋ ಇಲ್ವಾ?

https://newsfirstlive.com/wp-content/uploads/2024/08/METRO_TRAIN_-1.jpg

Load More