newsfirstkannada.com

ಬಾಬರ್​ ಅಜಂ ಕೊಹ್ಲಿಯ ಚಪ್ಪಲಿಗೂ ಸಮವಲ್ಲ -ಮಾಜಿ ಕ್ರಿಕೆಟಿಗ ಭಾರೀ ಆಕ್ರೋಶ

Share :

Published June 10, 2024 at 1:53pm

Update June 11, 2024 at 6:16am

  ಬದ್ಧವೈರಿಗಳ ನಡುವಿನ ಕ್ರಿಕೆಟ್​ ಕಾಳಗ ಅಂತ್ಯ

  ಪಂದ್ಯ ಮುಗಿದ್ರೂ ಇಳಿದಿಲ್ಲ ಕಾಳಗದ ಕಾವು..!

  ಕೊಹ್ಲಿಗಿಂತ ಬಾಬರ್​ ಬೆಸ್ಟ್​ ಎಂದವರಿಗೆ ಖಡಕ್​ ರಿಪ್ಲೇ

ಬದ್ಧವೈರಿಗಳ ನಡುವಿನ ಕ್ರಿಕೆಟ್​ ಕಾಳಗ ಅಂತ್ಯಕಂಡಿದೆ. ಪಂದ್ಯ ಅಂತ್ಯ ಕಂಡರೂ ಈ ಮ್ಯಾಚ್​ನ ಫೀವರ್​ ಹಾಗೇ ಉಳಿದಿದೆ. ಕ್ರಿಕೆಟ್​ ಲೋಕದ ಕಿಂಗ್​​​ ಯಾರು? ಅನ್ನೋ ಪ್ರಶ್ನೆ ನಿನ್ನೆ ತೀವ್ರ ಚರ್ಚೆಯಲ್ಲಿತ್ತು. ಆ ಪ್ರಶ್ನೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಒಬ್ಬರು ಡೈರೆಕ್ಟ್​ ಹಿಟ್​ ಆನ್ಸರ್​ ಕೊಟ್ಟಿದ್ದಾರೆ. ಈ ಸ್ಟೇಟ್​ಹಿಟ್​ ಉತ್ತರ ಕ್ರಿಕೆಟ್​​ ಲೋಕದಲ್ಲಿ ಹಲ್​ಚಲ್​ ಎಬ್ಬಿಸಿದೆ.

ವಿಶ್ವವೇ ತುದಿಗಾಲಲ್ಲಿ ನಿಂತಿದ್ದ, ಕುತೂಹಲದಿಂದ ನೋಡಲು ಕಾದಿದ್ದ ಇಂಡೋ-ಪಾಕ್​ ಹೈವೋಲ್ಟೆಜ್​ ಕದನ ಅಂತ್ಯ ಕಂಡಿದೆ. ಪಂದ್ಯ ಅಂತ್ಯ ಕಂಡು ಗಂಟೆಗಳೇ ಉರುಳಿವೆ. ಆದ್ರೆ, ಆ ಪಂದ್ಯ ಕಾವು ಕಿಂಚಿತ್ತೂ ಕುಂದಿಲ್ಲ. (ಮಳೆಯ ಆಟಕ್ಕೆ ಪಂದ್ಯ ರದ್ದಾದ್ರೂ, ಪಂದ್ಯ ಹೀಟ್​ ಹಾಗೇ ಉಳಿದಿದೆ.) ಪಂದ್ಯದ ಸೋಲು ಗೆಲುವಿನಾಚೆ ಪಂದ್ಯ ಬಗ್ಗೆ ಯಥೇಚ್ಚವಾಗಿ ಈಗಲೂ ಚರ್ಚೆಗಳು ನಡೀತಿವೆ. ಟೀಮ್​ ಇಂಡಿಯಾದ ದಿಗ್ವಿಜಯ ಇಡೀ ಭಾರತವನ್ನು ಸಂಭ್ರಮದ ಕಡಲಲ್ಲಿ ದೂಡಿದ್ರೆ, ಪಾಕಿಸ್ತಾನವನ್ನ ಸೂತಕದ ಛಾಯೆ ಆವರಿಸಿದೆ.

ಇದನ್ನೂ ಓದಿ:ಸೋಲನ್ನು ಸಹಿಸಿಕೊಳ್ಳದ ಪಾಕಿಸ್ತಾನಿಯರು.. ಭಾರತದ ರಾಷ್ಟ್ರಗೀತೆಗೆ ಅವಮಾನ ಮಾಡಿದ ಪಾಕ್..!

ಪಂದ್ಯ ಮುಗಿದ್ರೂ ಇಳಿದಿಲ್ಲ ಕಾಳಗದ ಕಾವು..!
ನ್ಯೂಯಾರ್ಕ್​​ನಲ್ಲಿ ನಿನ್ನೆ ನಡೆದ ಇಂಡೋ-ಪಾಕ್​ ಪಂದ್ಯ, ಕ್ರಿಕೆಟ್​ ಫೀಲ್ಡ್​ಗೆ ಮಾತ್ರ ಸೀಮಿತವಾಗಿರಲಿಲ್ಲ. ಆಫ್​ ದ ಫೀಲ್ಡ್​ನಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ನಡೆದಿತ್ತು. ಅಭಿಮಾನಿಗಳು ಬದ್ಧವೈರಿಗಳ ನಡುವಿನ ಪಂದ್ಯವನ್ನ ಯುದ್ಧದಂತೆ ನೋಡೋದು ಕಾಮನ್​ ಬಿಡಿ. ಈ ಬಾರಿ ಕ್ರಿಕೆಟ್​ ಎಕ್ಸ್​​ಪರ್ಟ್​​​​ಗಳು, ಮಾಜಿ ಕ್ರಿಕೆಟರ್ಸ್​ ಕೂಡ ಸಿಕ್ಕಾಪಟ್ಟೆ ಎಕ್ಸೈಟ್​ ಆಗಿದ್ರು. ಏಕ್ಸೈಟ್​​ಮೆಂಟ್​​ನಲ್ಲಿ ಪಾಕ್​ ಮಾಜಿ ಕ್ರಿಕೆಟಿಗ ಒಬ್ಬರು ಒಂದು ಸ್ಟೇಟ್​ಮೆಂಟ್​ ಕೊಟ್ಟಿದ್ರು. ಆ ಸ್ಟೇಟ್​ಮೆಂಟ್​ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.

ಇದನ್ನೂ ಓದಿ:ಎರಡೂವರೆ ಲಕ್ಷಕ್ಕೆ ಟ್ರ್ಯಾಕ್ಟರ್​ ಮಾರಿ IND-PAK ಪಂದ್ಯ ವೀಕ್ಷಣೆಗೆ ಬಂದ.. ಮೈದಾನದಲ್ಲಿ ದೊಡ್ಡ ಆಘಾತ, ಕಣ್ಣೀರು..!

ಪಾಕ್​ ಮಾಜಿ ಕ್ರಿಕೆಟಿಗನ ಡೈರೆಕ್ಟ್​ ಹಿಟ್​ ಆನ್ಸರ್.​​.!
ಕ್ರಿಕೆಟ್​ ಲೋಕದ ರಿಯಲ್​ ಕಿಂಗ್​ ಯಾರು? ವಿರಾಟ್​ ಕೊಹ್ಲಿನಾ.? ಬಾಬರ್​ ಅಝಂ ಆ? ಪ್ರತಿ ಬಾರಿ ಇಂಡೋ-ಪಾಕ್​ ಮುಖಾಮುಖಿಯಾದಾಗ ಅತಿ ಹೆಚ್ಚು ಚರ್ಚೆಯಾಗೋ ವಿಚಾರ ಇದು. ಕಳೆದ ಕೆಲ ವರ್ಷಗಳಿಂದ ಈ ವಿಚಾರದ ಬಗ್ಗೆ ಅತಿ ಹೆಚ್ಚು ಪರ ವಿರೋಧದ ಚರ್ಚೆ ನಡೆದಿವೆ. ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ನಿನ್ನೆಯ ಪಂದ್ಯಕ್ಕೂ ಮುನ್ನ ಈ ಪ್ರಶ್ನೆಗೆ ಉತ್ತರ ಹುಡುಕಾಟ ನಡೆದಿತ್ತು. ಇದಕ್ಕೆ ಪಾಕ್​ನ ಮಾಜಿ ಕ್ರಿಕೆಟಿಗ ಸ್ಟೇಟ್​ಹಿಟ್​​ ಆನ್ಸರ್​ ಕೊಟ್ಟಿದ್ದಾರೆ.
‘ಬಾಬರ್​ ಅಝಂ ಕೊಹ್ಲಿಯ ಚಪ್ಪಲಿಗೂ ಸಮವಲ್ಲ’

ಕೊಹ್ಲಿ VS ಬಾಬರ್​.. ಇವರಿಬ್ಬರಲ್ಲಿ ಯಾರು ಬೆಸ್ಟ್​ ಅನ್ನೋ ಪ್ರಶ್ನೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನೀಷ್​ ಕನೇರಿಯಾ ಡೈರೆಕ್ಟ್​ ಹಿಟ್​ ಬಾರಿಸಿದ್ದಾರೆ. ನಿನ್ನೆ ನಡೆದ ಪಂದ್ಯಕ್ಕೂ ಮುನ್ನ ಈ ಬಗ್ಗೆ ಮಾತನಾಡಿದ್ದ ಕನೇರಿಯಾ, ಬಾಬರ್​ ಅಝಂ ಇನ್ನೂ ಕೊಹ್ಲಿಯ ಚಪ್ಪಲಿಯ ಹತ್ತಿರಕ್ಕೂ ಸುಳಿದಿಲ್ಲ ಎಂದ ವಿವಾದಾತ್ಮಕ ಹೇಳಿಕೆ ನೀಡಿ ಬಿಟ್ಟಿದ್ದಾರೆ. ಇದು ಪರ-ವಿರೋಧದ ಚರ್ಚೆಯನ್ನ ಹೆಚ್ಚಿಸಿದೆ.

ಇದನ್ನೂ ಓದಿ:ಮೋದಿ, ಅಮಿತ್​ ಶಾಗೆ ಬಿಗ್ ಶಾಕ್.. ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿ ಇಂದು ಸಚಿವ ಸ್ಥಾನ ಬೇಡ ಎಂದ ಬಿಜೆಪಿ ಸಂಸದ..!

ಬಾಬರ್ ಅಝಂ​, ಬಾಬರ್ ಅಝಂ ಅಂತಾ ಜನ ಹೆಚ್ಚು ಮಾತಾಡ್ತಾರೆ. ಬಾಬರ್​ ಅಝಂ ಒಂದು ಶತಕ ಹೊಡೆದ್ರೆ ಸಾಕು, ಮರುದಿನ ಎಲ್ಲರೂ ಕೊಹ್ಲಿ ಜೊತೆಗೆ ಹೋಲಿಸಲು ಆರಂಭಿಸ್ತಾರೆ. ವಿರಾಟ್​​​ ಕೊಹ್ಲಿ ಚಪ್ಪಲಿಯ ಬಳಿ ಕೂಡ ಬಾಬರ್​​ ಬರಲ್ಲ. ಚಪ್ಪಲಿಯ ಬಳಿ ಕೂಡ ಬಾಬರ್​​ ಬರಲ್ಲ. ಯುಎಸ್​​ಎ ಬೌಲರ್​ಗಳು ಬಾಬರ್ ಅಝಂನ ಕಟ್ಟಿ ಹಾಕಿದ್ರು. ಆತನಿಗೆ ಆಡಲು ಆಗಲೇ ಇಲ್ಲ. 40+ ರನ್​ಗಳಿಸಿ ಔಟಾದ. ಆತ ಉಳಿದಿದ್ರೆ ಪಂದ್ಯ ಗೆಲ್ಲಬಹುದಿತ್ತು’ ಎಂದು ಕನೇರಿಯಾ ಹೇಳಿದ್ದಾರೆ.

ಹೈ-ಪ್ರೆಶರ್​, ಬಿಗ್​ ಟೂರ್ನಮೆಂಟ್​ಗಳಲ್ಲಿ ಕೊಹ್ಲಿಯೇ ಕಿಂಗ್​
ಪಾಕ್​ ಮಾಜಿ ಕ್ರಿಕೆಟಿಗ ದಾನೀಷ್​ ಕನೇರಿಯಾ ನೀಡಿರುವ ಹೇಳಿಕೆ ಉತ್ಪ್ರೇಕ್ಷೆ ಏನಲ್ಲ. ಬಾಬರ್ ಒಂದು ಸೆಂಚುರಿ ಹೊಡೆದ್ರೆ, ಕೊಹ್ಲಿಯನ್ನೇ ಮೀರಿಸಿಬಿಟ್ಟ ಅನ್ನೋ ಮಾತುಗಳನ್ನ ಹಲವರು ಆಡಿರೋದು ನಿಜ. ಆದ್ರೆ, ಬಾಬರ್​ ಸೆಂಚುರಿ ಹೊಡೆದ ತಂಡ ಯಾವುದು? ಆ ತಂಡದ ಬೌಲಿಂಗ್ ಅಟ್ಯಾಕ್​ ಹೇಗಿತ್ತು.? ಅನ್ನೋದನ್ನೇ ಮರೆತು ಬಿಡ್ತಾರೆ. ವಿರಾಟ್​ ಕೊಹ್ಲಿ ಹೆಚ್ಚು ಘರ್ಜಸಿರೋದು ಬಲಿಷ್ಠ ತಂಡಗಳ ವಿರುದ್ಧ. ಹೈ-ಪ್ರೆಷರ್​ ಗೇಮ್​, ಬಿಗ್​ ಟೂರ್ನಮೆಂಟ್​ ಅಂದ್ರೆ, ಹಸಿದ ಹೆಬ್ಬುಲಿಯಂತೆ ಕಿಂಗ್​ ಕೊಹ್ಲಿ ರನ್​ಗಳಿಸ್ತಾರೆ. ಇತಿಹಾಸದ ಅಂಕಿ-ಅಂಶಗಳೇ ಕೊಹ್ಲಿಯ ಸಾಹಸದ ಕಥೆಯನ್ನ ಹೇಳ್ತವೆ.

‘ಜಿಮ್​ ಬಾಬರ್​​’ ಎಂದಿದ್ದ ಪಾಕಿಸ್ತಾನ್​ ಫ್ಯಾನ್ಸ್​..!
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹೇಳಿರೋದು ಈಗ. ಆದ್ರೆ ಬಹಳ ಹಿಂದೆಯೇ ಪಾಕಿಸ್ತಾನದ ಅಭಿಮಾನಿಗಳೇ ಬಾಬರ್​ ‘ಪರಾಕ್ರಮ’ವನ್ನ ಕೊಂಡಾಡಿದ್ದಾರೆ. ಜಿಬಾಂಬ್ವೆಯಂತ ದುರ್ಬಲ ತಂಡಗಳ ಎದುರು ಅಬ್ಬರಿಸೋ ಕಾರಣಕ್ಕೆ ‘ಜಿಮ್​ ಬಾಬರ್​’ ಎಂದೇ ಫ್ಯಾನ್ಸ್​ ಕಿಚಾಯಿಸಿದ ಉದಾಹರಣೆಗಳಿವೆ.

ಅಂದು ಫ್ಯಾನ್ಸ್​, ಇಂದು ಮಾಜಿ ಕ್ರಿಕೆಟರ್​.. ಬಾಬರ್​​ನ​ ಕೊಹ್ಲಿಗೆ ಹೋಲಿಸಿದವರಿಗೆ ಮಾತಿನ ಉತ್ತರ ಕೊಟ್ಟಿದ್ದಾರೆ. ಇವರಿಬ್ಬರಲ್ಲದೇ, ಪಾಕಿಸ್ತಾನ ಕ್ರಿಕೆಟ್​ ಕಂಡ ಕೆಲ ಲೆಜೆಂಡ್​ಗಳು ಕೂಡ ಕೊಹ್ಲಿಯನ್ನ ಓಪನ್​ ಆಗಿ ಗುಣಗಾನ ಮಾಡಿದ್ದಿದೆ. ಸ್ಟ್ಯಾಟಿಸ್ಕಿಕ್ಸ್​, ಟ್ರ್ಯಾಕ್​ ರೆಕಾರ್ಡ್​​, ಮಾಡಿದ ಸಾಧನೆಗಳ ಲೆಕ್ಕಾಚಾರದಲ್ಲಿ ಕೊಹ್ಲಿಯೇ ಕಿಂಗ್​ ಅನ್ನೋದು ಇಡೀ ಜಗತ್ತೇ ಒಪ್ಪಿಕೊಳ್ಳಬೇಕಾದ ಸತ್ಯವಾಗಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ.. ನಾಲ್ವರು ಯೂಟ್ಯೂಬರ್ಸ್​​ ಸ್ಥಳದಲ್ಲೇ ದಾರುಣ ಸಾವು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬಾಬರ್​ ಅಜಂ ಕೊಹ್ಲಿಯ ಚಪ್ಪಲಿಗೂ ಸಮವಲ್ಲ -ಮಾಜಿ ಕ್ರಿಕೆಟಿಗ ಭಾರೀ ಆಕ್ರೋಶ

https://newsfirstlive.com/wp-content/uploads/2024/06/VIRAT-1.jpg

Load More