newsfirstkannada.com

ಎರಡೂವರೆ ಲಕ್ಷಕ್ಕೆ ಟ್ರ್ಯಾಕ್ಟರ್​ ಮಾರಿ IND-PAK ಪಂದ್ಯ ವೀಕ್ಷಣೆಗೆ ಬಂದ.. ಮೈದಾನದಲ್ಲಿ ದೊಡ್ಡ ಆಘಾತ, ಕಣ್ಣೀರು..!

Share :

Published June 10, 2024 at 12:36pm

  ಪಂದ್ಯ ವೀಕ್ಷಣೆಗಾಗಿ ಟ್ರ್ಯಾಕ್ಟರ್​ ಮಾರಿದ ಯುವಕ

  ಟಿ20 ವಿಶ್ವಕಪ್​ನಲ್ಲಿ ಪಾಕ್ ಬಗ್ಗು ಬಡಿದ ಭಾರತ ತಂಡ

  ವಿಶ್ವಕಪ್​​ನಲ್ಲಿ ಸತತ 2ನೇ ಗೆಲುವು ದಾಖಲಿಸಿದ ಭಾರತ

ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ಬದ್ಧ ಎದುರಾಳಿ ಪಾಕಿಸ್ತಾನವನ್ನು 6 ರನ್​​​ಗಳಿಂದ ಸೋಲಿಸಿತು. ಈ ಮೂಲಕ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ ಆಗಿದೆ. ತಮ್ಮ ತಂಡದ ಆಟಗಾರರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಅಂತೆಯೇ ಪಾಕಿಸ್ತಾನಿ ಅಭಿಮಾನಿಯೊಬ್ಬ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ವೀಕ್ಷಣೆ ಮಾಡಲು 3000 ಡಾಲರ್​​ ಬೆಲೆಯ ಟ್ರ್ಯಾಕ್ಟರ್ ಮಾರಿದ ಕತೆಯನ್ನು ಹೇಳಿದ್ದಾನೆ. ನಮ್ಮ ತಂಡ ಪಾಕಿಸ್ತಾನ. ತಂಡಕ್ಕೆ ಬೆಂಬಲ ನೀಡುವ ಉದ್ದೇಶ ಹಾಗೂ ಕ್ರಿಕೆಟ್ ಮೇಲಿನ ಪ್ರೀತಿಯಿಂದಾಗಿ ನಾನು ಟ್ರ್ಯಾಕ್ಟರ್ ಮಾರಿದೆ. ಅದರಲ್ಲಿ ಬಂದ 2.5 ಲಕ್ಷ ರೂಪಾಯಿ ಹಣದಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ ಖರೀದಿಸಿದೆ ಎಂದಿದ್ದಾರೆ.

ಇದನ್ನೂ ಓದಿ:ಮೋದಿ, ಅಮಿತ್​ ಶಾಗೆ ಬಿಗ್ ಶಾಕ್.. ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿ ಇಂದು ಸಚಿವ ಸ್ಥಾನ ಬೇಡ ಎಂದ ಬಿಜೆಪಿ ಸಂಸದ..!

ಭಾರತ ಸ್ಕೋರ್ ನೋಡಿದಾಗ ಈ ಪಂದ್ಯದಲ್ಲಿ ನಾವು ಸೋಲ್ತೇವೆ ಅಂದ್ಕೊಂಡಿರಲಿಲ್ಲ. ಪಂದ್ಯ ನಮ್ಮ ಕೈಯಲ್ಲೇ ಇತ್ತು. ಬಾಬರ್ ಅಜಮ್ ಔಟ್ ಆದ ಬಳಿಕ ಜನ ನಿರಾಸೆಗೊಂಡರು. ಗೆಲುವಿಗಾಗಿ ನಾನು ಟೀಂ ಇಂಡಿಯಾವನ್ನು ಅಭಿನಂದಿಸುತ್ತೇನೆ. ಟೀಂ ಇಂಡಿಯಾದ ಪ್ರೇಕ್ಷಕರು ಸಾಕಷ್ಟು ಸಂಖ್ಯೆಯಲ್ಲಿದ್ದರು ಎಂದಿದ್ದಾರೆ.

ಗೆಲುವಿನ ಕನಸಿಗೆ ಪೆಟ್ಟು ಕೊಟ್ಟ ಬೂಮ್ರಾ

ಕಡಿಮೆ ಸ್ಕೋರ್​​​ 119 ರನ್​ಗಳನ್ನು ಡೆಪೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ರೋಹಿತ್ ಪಡೆ, ಪಾಕ್ ವಿರುದ್ಧ 6 ರನ್​ಗಳ ರೋಚಕ ಗೆಲುವು ಸಾಧಿಸಿದೆ. ಈ ಬಾರಿ ಭಾರತದ ಗೆಲುವಿಗೆ ಕಾರಣವಾಗಿದ್ದು ಟೀಂ ಇಂಡಿಯಾದ ಬೌಲರ್ಸ್​. ಟಾಸ್ ಸೋತ ಭಾರತ ಮೊದಲು ಬ್ಯಾಟ್ ಮಾಡಿತ್ತು. ರಿಷಬ್ ಪಂತ್ ಅವರ 42 ರನ್​ಗಳ ಕಾಣಿಕೆಯ ಪರಿಣಾಮ ಭಾರತ 19 ಓವರ್​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 119ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಪಾಕಿಸ್ತಾನಕ್ಕೆ ಜಸ್​ಪ್ರಿತ್ ಬೂಮ್ರಾ ಅವರು ದೊಡ್ಡ ಪೆಟ್ಟು ಕೊಟ್ಟರು.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ.. ನಾಲ್ವರು ಯೂಟ್ಯೂಬರ್ಸ್​​ ಸ್ಥಳದಲ್ಲೇ ದಾರುಣ ಸಾವು

ಬಾಬರ್ ಅಜಂ ಹಾಗೂ ರಿಜ್ವನ್ 26 ರನ್​ಗಳಿಸಿ ಆಡುತ್ತಿದ್ದಾಗ ಅಜಂ ಅವರ ಪೆವಿಲಿಯನ್​ಗೆ ಕಳುಹಿಸುವ ಮೂಲಕ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಕ್ಯಾಪ್ಟನ್ ವಿಕೆಟ್ ಬೀಳುತ್ತಿದ್ದಂತೆಯೇ ಟೀಂ ಇಂಡಿಂಯಾ ಬೌಲಿಂಗ್ ಪಡೆಗೆ ಮತ್ತಷ್ಟು ಶಕ್ತಿ ಬಂತು. ಬೆಂಕಿ ಬೌಲಿಂಗ್ ಮಾಡಿದ ಟೀಂ ಇಂಡಿಯಾ ಬೌಲರ್ಸ್​​, ಪಾಕಿಸ್ತಾನವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಟೀಂ ಇಂಡಿಯಾಗೆ ಎಂದಿನಂತೆ ಬೂಮ್ರಾ ಹೀರೋ ಆದರು. ತಮ್ಮ ಕೋಟಾದ ನಾಲ್ಕು ಓವರ್​ ಎಸೆದ ಬೂಮ್ರಾ ಕೇವಲ 3.5 ಎಕನಾಮಿಕ್​ನೊಂದಿಗೆ 14 ರನ್​​ಗಳನ್ನು ಮಾತ್ರ ನೀಡಿದರು. ಮಾತ್ರವಲ್ಲ ಪಾಕ್​ನ ಪ್ರಮುಖ ವಿಕೆಟ್​​ಗಳಾದ ಬಾಬರ್ ಅಜಂ, ರಿಜ್ವಾನ್ ಹಾಗೂ ಇಫ್ತಿಕಾರ್​​ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಉಪನಾಯಕ ಹಾರ್ದಿಕ್ ಪಾಂಡ್ಯ ಕೂಡ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ನಾಲ್ಕು ಓವರ್​​ಗಳನ್ನು ಎಸೆದು 2 ವಿಕೆಟ್ ಪಡೆದು ಕೇವಲ 24 ರನ್​​ಗಳನ್ನು ಮಾತ್ರ ನೀಡಿದರು. ಅಷ್ಟೇ ಅಲ್ಲ ಅಕ್ಸರ್ ಪಟೇಲ್​ 2 ಓವರ್​ ಎಸೆದು 11 ರನ್​ ನೀಡಿ ಒಂದು ವಿಕೆಟ್ ಪಡೆದರು. ಪಾಕ್​ನ ಬ್ಯಾಟಿಂಗ್ ಶಕ್ತಿ ಉಸ್ಮಾನ್ ಖಾನ್​ರ ವಿಕೆಟ್ ಪಡೆದು ಪಾಕ್​ನ ಮಗ್ಗಲು ಮುರಿದರು. ನಿನ್ನೆಯ ಪಂದ್ಯದಲ್ಲಿ ಸಿರಾಜ್ ಕೂಡ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು, 4 ಓವರ್​ಗಳಲ್ಲಿ 19 ರನ್​ ನೀಡಿದರು. ಆದರೆ ಯಾವುದೇ ವಿಕೆಟ್ ಪಡೆಯುವಲ್ಲಿ ಯಶಸ್ವಿ ಆಗಲಿಲ್ಲ. ರವೀಂದ್ರ ಜಡೇಜಾ 2 ಓವರ್​ ಮಾಡಿ 10 ರನ್​ ನೀಡಿದ್ರೆ, ಅರ್ಷ್​​ದೀಪ್ ಸಿಂಗ್ ಸ್ವಲ್ಪ ದುಬಾರಿಯಾದರೂ ಒಂದು ವಿಕೆಟ್ ಪಡೆದುಕೊಂಡರು. 31 ರನ್​ ನೀಡಿ ಒಂದು ವಿಕೆಟ್ ಪಡೆದುಕೊಂಡರು. ಬೂಮ್ರಾ, ಸಿರಾಜ್ ಹಾಗೂ ಪಾಂಡ್ಯ ಅವರ ಭಯಂಕರ ಬೌಲಿಂಗ್​ನಿಂದಾಗಿ ಪಾಕಿಸ್ತಾನದ ವಿರುದ್ಧ ಭಾರತ ಮತ್ತೆ ಗೆದ್ದು ಬೀಗಿದೆ. ​

ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದರೂ ಟೀಂ ಇಂಡಿಯಾದಲ್ಲಿ ಇಲ್ಲ ಖುಷಿ.. ಕಾರಣ ಇಲ್ಲಿದೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಎರಡೂವರೆ ಲಕ್ಷಕ್ಕೆ ಟ್ರ್ಯಾಕ್ಟರ್​ ಮಾರಿ IND-PAK ಪಂದ್ಯ ವೀಕ್ಷಣೆಗೆ ಬಂದ.. ಮೈದಾನದಲ್ಲಿ ದೊಡ್ಡ ಆಘಾತ, ಕಣ್ಣೀರು..!

https://newsfirstlive.com/wp-content/uploads/2024/06/PAK-FAN.jpg

Load More