newsfirstkannada.com

ಮೋದಿ, ಅಮಿತ್​ ಶಾಗೆ ಬಿಗ್ ಶಾಕ್.. ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿ ಇಂದು ಸಚಿವ ಸ್ಥಾನ ಬೇಡ ಎಂದ ಬಿಜೆಪಿ ಸಂಸದ..!

Share :

Published June 10, 2024 at 11:47am

Update June 10, 2024 at 12:04pm

    ಮೋದಿ ಜೊತೆ ನಿನ್ನೆ 71 ಸಂಸದರು ಸಚಿವರಾಗಿ ಪ್ರತಿಜ್ಞಾವಿಧಿ

    ‘ಆದಷ್ಟು ಬೇಗ ನಾನು ಸಚಿವ ಸ್ಥಾನದಿಂದ ಮುಕ್ತನಾಗ್ತೇನೆ’

    ಅಚ್ಚರಿ ಮೂಡಿಸಿದ ಬಿಜೆಪಿ ಸಂಸದನ ಈ ಹೇಳಿಕೆ.. ಕಾರಣ..?

ನರೇಂದ್ರ ಮೋದಿ ಅವರು ನಿನ್ನೆ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಮೋದಿ ಅವರ ಜೊತೆಯಲ್ಲೇ 72 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಅಂತೆಯೇ ನಿನ್ನೆ ರಾಜ್ಯ ಖಾತೆ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಕೇರಳ ಬಿಜೆಪಿಯ ಮೊದಲ ಸಂಸದ ಸುರೇಶ್ ಗೋಪಿ ಅವರು ಮಂತ್ರಿ ಸ್ಥಾನದಿಂದ ಕೆಳಗೆ ಇಳಿಯುವ ಸಾಧ್ಯತೆ ಇದೆ. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಬಳಿಕ ಮಾಧ್ಯಮವೊಂದಕ್ಕೆ ಮಾತನಾಡಿರುವ ಅವರು, ತಾವು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಶೀಘ್ರದಲ್ಲೇ ಸಚಿವ ಸ್ಥಾನದಿಂದ ಮುಕ್ತರಾಗುವ ವಿಶ್ವಾಸ ಇದೆ ಎಂದಿದ್ದಾರೆ.

ಇದನ್ನೂ ಓದಿ:ಯಾರು ಏನೇ ಹೇಳಲಿ.. ಈ ಇಬ್ಬರ ಆಟದಿಂದ ಭಾರತಕ್ಕೆ ಜಯ.. ಕ್ರೆಡಿಟ್ ಯಾರಿಗೆ ಸಿಗಬೇಕು ಗೊತ್ತಾ?

ತಾವು ಸಚಿವ ಸ್ಥಾನವನ್ನು ತೊರೆಯಲು ಕಾರಣ ವಿವರಿಸಿರುವ ಅವರು.. ನಾನು ಹಲವು ಚಿತ್ರಗಳಿಗೆ ಸಹಿ ಮಾಡಿದ್ದೇನೆ. ಅವುಗಳನ್ನು ಮುಗಿಸಿಕೊಡುವ ಅಗತ್ಯ ಇದೆ. ತ್ರಿಶೂರ್ ಸಂಸದನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ. ಸುರೇಶ್ ಗೋಪಿ ಅವರು ತ್ರಿಶೋರ್ ಲೋಕಸಭೆ ಕ್ಷೇತ್ರದಿಂದ ಗೆದ್ದು ಕೇರಳದ ಮೊದಲ ಬಿಜೆಪಿ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುರೇಶ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿ ಎಸ್​ ಸುನೀಲ್​​ಕುಮಾರ್ ಅವರನ್ನು 74686 ಮತಗಳಿಂದ ಸೋಲಿಸಿದ್ದಾರೆ.

ಸುರೇಶ್ ಗೋಪಿ ಹೇಳಿದ್ದೇನು..?

ಸಂಸದನಾಗಿ ಕೆಲಸ ಮಾಡುವುದೇ ನನ್ನ ಗುರಿ. ನಾನು ಏನನ್ನೂ ಕೇಳಲಿಲ್ಲ. ನನಗೆ ಈ ಪೋಸ್ಟ್ ಅಗತ್ಯ ಇಲ್ಲ ಎಂದು ಹೇಳಿದೆ. ನಾನು ಶೀಘ್ರದಲ್ಲೇ ಹುದ್ದೆಯಿಂದ ಬಿಡುಗಡೆ ಹೊಂದುತ್ತೇನೆ ಎಂದು ಭಾವಿಸ್ತೀನಿ. ತಿಶ್ರೂರ್ ಮತದಾರರಿಗೆ ಯಾವುದೇ ತೊಂದರೆ ಇಲ್ಲ. ನಾನು ಅವರಿಗೆಗಾಗಿ ಒಳ್ಳೆಯ ಸಂಸದನಾಗಿ ಕೆಲಸ ಮಾಡುತ್ತೇನೆ. ನಾನು ಸಿನಿಮಾ ಮಾಡಬೇಕು ಎಂದಿದ್ದಾರೆ ಅಂತಾ ವರದಿಯಾಗಿದೆ.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ.. ನಾಲ್ವರು ಯೂಟ್ಯೂಬರ್ಸ್​​ ಸ್ಥಳದಲ್ಲೇ ದಾರುಣ ಸಾವು

ಸುರೇಶ್ ಗೋಪಿ ಗೆದ್ದಿದ್ದ ತ್ರಿಶೂರ್ ಕ್ಷೇತ್ರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿತ್ತು. ಸುರೇಶ್ ಗೋಪಿ ಅವರು ಲೋಕಸಭೆ ಸದಸ್ಯರಾಗುವ ಮೊದಲು ರಾಜ್ಯಸಭೆ ಸಂಸದರಾಗಿದ್ದರು. 2016ರಲ್ಲಿ ರಾಜ್ಯಸಭೆಗೆ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಅವರ ರಾಜ್ಯಸಭೆಯ ಅಧಿಕಾರಾವಧಿ 2022ರವರೆಗೆ ಇತ್ತು.

ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದರೂ ಟೀಂ ಇಂಡಿಯಾದಲ್ಲಿ ಇಲ್ಲ ಖುಷಿ.. ಕಾರಣ ಇಲ್ಲಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ, ಅಮಿತ್​ ಶಾಗೆ ಬಿಗ್ ಶಾಕ್.. ನಿನ್ನೆ ಪ್ರತಿಜ್ಞಾವಿಧಿ ಸ್ವೀಕರಿಸಿ ಇಂದು ಸಚಿವ ಸ್ಥಾನ ಬೇಡ ಎಂದ ಬಿಜೆಪಿ ಸಂಸದ..!

https://newsfirstlive.com/wp-content/uploads/2024/06/SURESH-GOPI-1.jpg

Load More