newsfirstkannada.com

ಯಾರು ಏನೇ ಹೇಳಲಿ.. ಈ ಇಬ್ಬರ ಆಟದಿಂದ ಭಾರತಕ್ಕೆ ಜಯ.. ಕ್ರೆಡಿಟ್ ಯಾರಿಗೆ ಸಿಗಬೇಕು ಗೊತ್ತಾ?

Share :

Published June 10, 2024 at 11:03am

    ಪಾಕ್​ ವಿರುದ್ಧ ಟೀಮ್​ ಇಂಡಿಯಾಗೆ ರೋಚಕ ಜಯ

    ಬದ್ಧವೈರಿಗಳ ಎದುರು ಗೆದ್ದು ಬೀಗಿದ ಟೀಮ್​ ಇಂಡಿಯಾ

    ಬೂಮ್​ ಬೂಮ್​​ ಬೂಮ್ರಾ.. ಭಯಂಕರ ಬೌಲಿಂಗ್​​..!

ಬದ್ಧವೈರಿಗಳ ಎದುರು ಟೀಮ್​ ಇಂಡಿಯಾ ಅಕ್ಷರಶಃ ಸೋಲಿನ ದವಡೆಗೆ ಸಿಲುಕಿತ್ತು. ಯಾರೆಲ್ಲರ ಮೇಲೆ ನಿರೀಕ್ಷೆಯಿತ್ತೋ ಅವರೆಲ್ಲರೂ ಮಕಾಡೆ ಮಲಗಿದ್ರು. ಸೋತೆ ಬಿಡ್ತು ಅಂತಾ ಟಿವಿ ಆಫ್​ ಮಾಡಿದವರೂ ಇದ್ದಾರೆ. ಈ ಇಬ್ಬರು ಆಪತ್ಭಾಂದವರು ಪಾಕಿಸ್ತಾನಕ್ಕೆ ಚಳ್ಳೆಹಣ್ಣು ತಿನ್ನಿಸಿದ್ರು. ಫೆಂಟಾಸ್ಟಿಕ್​ ಪಂತ್, ಭಯಂಕರ ಬೂಮ್ರಾ ಆಟಕ್ಕೆ ಪಾಕ್​ ತಬ್ಬಿಬ್ಬಾಯ್ತು.

ಬದ್ಧವೈರಿ ಪಾಕಿಸ್ತಾನ ಎದುರಿನ ಕದನದಲ್ಲಿ ಅಂತಿಮವಾಗಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ನ್ಯೂಯಾರ್ಕ್​​ನ ನಸ್ಸೌ ಪಿಚ್​ನಲ್ಲಿ ನಡೆದ ಲೋ ಸ್ಕೋರಿಂಗ್​ ಥ್ರಿಲ್ಲರ್​ ಗೇಮ್​ನಲ್ಲಿ ರೋಹಿತ್​ ಪಡೆ ಗೆಲುವಿನ ನಗಾರಿ ಬಾರಿಸ್ತು. ಒಂದು ಹಂತದಲ್ಲಿ ಟೀಮ್​ ಇಂಡಿಯಾ ಸೋತೆ ಬಿಡ್ತು ಅನ್ನೋದು ಸಂದರ್ಭ ಎದುರಾಗಿತ್ತು. ಬೇಸರಗೊಂಡು ಟಿವಿ ಆಫ್​ ಮಾಡಿ ಮಲಗಿದವರು ಇದ್ದಾರೆ. ಆದ್ರೆ, ಆಪತ್ಭಾಂದವರಿಬ್ಬರು ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ರು. ಕೋಟ್ಯಂತರ ಫ್ಯಾನ್ಸ್​ ಪರ ಕೆಚ್ಚೆದೆಯ ಹೋರಾಟ ನಡೆಸಿ ಮಾನ ಉಳಿಸಿದ್ರು.

ಇದನ್ನೂ ಓದಿ:ಭೀಕರ ರಸ್ತೆ ಅಪಘಾತ.. ನಾಲ್ವರು ಯೂಟ್ಯೂಬರ್ಸ್​​ ಸ್ಥಳದಲ್ಲೇ ದಾರುಣ ಸಾವು

ಕೈ ಹಿಡಿದ ಅದೃಷ್ಟ, ಕೆಚ್ಚೆದೆಯ ಹೋರಾಟ, ಗೆಲುವಿನ ಹಾರ
ಈತನನ್ನ ನೀವು ಅದೃಷ್ಟವಂತ ಅಂತಾದ್ರೂ ಹೇಳಬಹುದು. ನಿಜವಾದ ಫೈಟರ್​ ಅಂತಾದ್ರೂ ಹೇಳಬಹುದು. ತಂಡದ ಮ್ಯಾಚ್​ ವಿನ್ನರ್​​ ಅಂತಾದ್ರೂ ಹೇಳಬಹುದು. ಯಾಕಂದ್ರೆ ಈತನೇ ನಿನ್ನೆಯ ಪಂದ್ಯದ ರಿಯಲ್​​ ಮ್ಯಾಚ್​ ವಿನ್ನರ್. ಅಂದಹಾಗೇ ಆತ ಬೇರಾರೂ ಅಲ್ಲ.. ಒನ್​ ಅಂಡ್ ಒನ್ಲಿ ಡೇರ್​ಡೆವಿಲ್​ ರಿಷಭ್​ ಪಂತ್​.

3 ಜೀವದಾನ, 42 ರನ್, 3 ಕ್ಯಾಚ್..!
ಟೀಮ್​ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿದ್ದಾಗ ನಂಬರ್​ 3 ಸ್ಲಾಟ್​​ನಲ್ಲಿ ಕಣಕ್ಕಿಳಿದ್ದು ಪಂತ್​ ಮುಂದಿದ್ದಿದ್ದು ಬಿಗ್​ ಚಾಲೆಂಜ್​. ಆರಂಭಿಕ ಆಘಾತದ ಶಾಕ್​ ಒಂದೆಡೆಯಾದ್ರೆ, ಕ್ರಿಸ್​​ಗೆ ಸೆಟ್​ ಆಗೋದ್ರೊಳಗೆ ಇನ್ನೊಂದು ತುದಿಯಲ್ಲಿ ಪೆವಿಲಿಯನ್​ ಪರೇಡ್​ ನಡೀತಿತ್ತು. ಇಂತಹ ಟೈಮಲ್ಲಿ ದೇಶದ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯ ಫಲವೋ ಏನೋ ಅದೃಷ್ಟ ಪಂತ್​ ಕೈ ಹಿಡಿಯಿತು. ಒಂದಲ್ಲ.. ಎರಡದಲ್ಲ.. ಬರೋಬ್ಬರಿ 3 ಜೀವದಾನಗಳು ಪಂತ್​ಗೆ ಸಿಕ್ವು.

ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದರೂ ಟೀಂ ಇಂಡಿಯಾದಲ್ಲಿ ಇಲ್ಲ ಖುಷಿ.. ಕಾರಣ ಇಲ್ಲಿದೆ..

ಈ ಜೀವದಾನಗಳ ಲಾಭ ಪಡೆದ ರಿಷಭ್​ ಪಂತ್​ 42 ರನ್​ಗಳ ಅಮೂಲ್ಯ ಕಾಣಿಕೆ ನೀಡಿದ್ರು. ನೆನಪಿರಲಿ ಟೀಮ್​ ಇಂಡಿಯಾ ಪರ ನಿನ್ನೆ ದಾಖಲಾದ ವೈಯಕ್ತಿಕ ಹೈಯೆಸ್ಟ್​ ಸ್ಕೋರ್​ ಇದು. ಈ 42 ರನ್​ಗಳಿಂದಲೇ ಟೀಮ್​ ಇಂಡಿಯಾ ಗೌರವಯುತ ಸ್ಕೋರ್​ ಕಲೆ ಹಾಕಿತು. ಬ್ಯಾಟಿಂಗ್​ ಮಾತ್ರವಲ್ಲ.. ಕೀಪಿಂಗ್​ನಲ್ಲೂ ಪಂತ್​ ಮಿಂಚಿದ್ರು. ರಿಷಭ್​ ಪಂತ್ ಹಿಡಿದ 3 ಕ್ರೂಶಿಯಲ್​​ ಕ್ಯಾಚ್​ಗಳು ಪಂದ್ಯದ ಗತಿಯನ್ನೇ ಬದಲಾಯಿಸಿದ್ವು. ಜೊತೆಗೆ ಉಸ್ಮಾನ್​​ ಖಾನ್​​ LBW ವಿಚಾರದಲ್ಲಿ DRS ಗೊಂದಲ ಊಂಟಾಯ್ತು. ಆಗ ಪಂತ್​ ನೀಡಿದ ರೈಟ್​ ಸಜೇಶನ್​, ವಿಕೆಟ್​​ನ ಗಿಫ್ಟ್​ ನೀಡಿತು.

ಬೂಮ್​ ಬೂಮ್​​ ಬೂಮ್ರಾ.. ಭಯಂಕರ ಬೌಲಿಂಗ್.​​.!
ಬ್ಯಾಟಿಂಗ್​ನಲ್ಲಿ ರಿಷಭ್​ ಪಂತ್​ ಆದ್ರೆ ಬೌಲಿಂಗ್​ನಲ್ಲಿ ಟೀಮ್​ ಇಂಡಿಯಾ ಕೈ ಹಿಡಿದಿದ್ದು ಬೂಮ್​ ಬೂಮ್​ ಬೂಮ್ರಾ.. ತಾನೆಂಥ ವಿಶ್ವಶ್ರೇಷ್ಟ ಬೌಲರ್​ ಅನ್ನೋದನ್ನ ನಿನ್ನೆ ಮತ್ತೆ ಬೂಮ್ರಾ ನಿರೂಪಿಸಿದ್ರು. ಬೂಮ್ರಾ ಭಯಂಕರ ಬೌಲಿಂಗ್​ಗೆ ಪಾಕಿಸ್ತಾನ ಪಡೆ ತಬ್ಬಿಬ್ಬಾಗಿ ಹೋಯ್ತು. 4 ಓವರ್​ ಬೌಲಿಂಗ್​ ಮಾಡಿದ ಬೂಮ್ರಾ, ಬಿಟ್ಟು ಕೊಟ್ಟಿದ್ದು ಕೇವಲ 14 ರನ್​ ಮಾತ್ರ. ಬಲೆಗೆ ಕೆಡವಿದ್ದು 3 ಬಿಗ್​ ಫಿಶ್​ಗಳನ್ನ. ಆರಂಭದಲ್ಲೇ ಬಾಬರ್​ ಅಝಂ, ನಂತರ ಮೊಹಮ್ಮದ್​ ರಿಜ್ವಾನ್​, ಕೊನೆಯಲ್ಲಿ ಇಫ್ತಿಕಾರ್​​ ಅಹ್ಮದ್​.. ಮೂವರೂ ಡೇಂಜರಸ್​ ಬ್ಯಾಟರ್​​ಗಳೇ.. ಈ ಮೂರು ವಿಕೆಟ್​ಗಳೇ ಗೇಮ್​​ ಬದಲಿಸಿದ್ದು.

ಇದನ್ನೂ ಓದಿ:ಸೋಲಿನ ಬಳಿಕ ಪಾಕ್ ನಾಯಕ ಹೊಣೆ ಮಾಡಿದ್ದು ಯಾರನ್ನು..? ಪಂದ್ಯ ಮುಗಿದ ಬಳಿಕ ಸ್ಫೋಟಕ ಹೇಳಿಕೆ

ಉಳಿದ ಟೀಮ್​ ಇಂಡಿಯಾದ ಬೌಲರ್​ಗಳ ಏಫರ್ಟ್​ಗೆ ಒಂದು ಸೆಲ್ಯೂಟ್​ ಹೊಡೆಯಲೇಬೇಕು. 120 ರನ್​ ಡಿಫೆಂಡ್​ ಮಾಡಿಕೊಳ್ಳೋದು ಸಾಮಾನ್ಯ ವಿಚಾರ ಅಲ್ಲವೇ ಅಲ್ಲ. ಹಾರ್ದಿಕ್​ ಪಾಂಡ್ಯ, ಮೊಹಮ್ಮದ್​ ಸಿರಾಜ್​, ಆರ್ಷ್​​ದೀಪ್​, ಅಕ್ಷರ್​ ಪಟೇಲ್​​ ಅತ್ಯಾದ್ಭುತ ಬೌಲಿಂಗ್​ನೊಂದಿಗೆ ಅಸಮಾನ್ಯ ಸಾಧನೆ ಮಾಡಿದ್ರು. ವಿಶ್ವದ ಎದುರು ಭಾರತೀಯ ಕ್ರಿಕೆಟ್​ ಫ್ಯಾನ್ಸ್​ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ.

ಇದನ್ನೂ ಓದಿ:OBC 27, SC ಕಮ್ಯೂನಿಟಿಗೆ 10 ಸ್ಥಾನ.. ಮೋದಿ ಸಂಪುಟದಲ್ಲಿ ಜಾತಿ ಸಮೀಕರಣ ಹೇಗಿದೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಯಾರು ಏನೇ ಹೇಳಲಿ.. ಈ ಇಬ್ಬರ ಆಟದಿಂದ ಭಾರತಕ್ಕೆ ಜಯ.. ಕ್ರೆಡಿಟ್ ಯಾರಿಗೆ ಸಿಗಬೇಕು ಗೊತ್ತಾ?

https://newsfirstlive.com/wp-content/uploads/2024/06/team-india-2.jpg

Load More