/newsfirstlive-kannada/media/post_attachments/wp-content/uploads/2024/06/Pavitra-Gowda-2.jpg)
ನಟ ದರ್ಶನ್​​ ಮೇಲೆ ಹಲ್ಲೆ ಮತ್ತು ಕೊಲೆ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಮೂಲದ ಅಭಿಮಾನಿ ರೇಣುಕಾಸ್ವಾಮಿ ಎಂಬಾತನನ್ನು ಕೊಲೆಗೈದ ಆರೋಪದ ಮೇಲೆ ದರ್ಶನ್​ ಅವರನ್ನು ಅರೆಸ್ಟ್​ ಮಾಡಲಾಗಿದೆ. ಜೊತೆಗೆ ನಟಿ ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಶ್ಲೀಲ ಮೆಸೇಜ್ ಮಾಡಿದ್ದನೇ?
ಕೊಲೆಯಾದ ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವನಾಗಿದ್ದು, ನಟ ದರ್ಶನ್​ನ ಪಕ್ಕಾ ಅಭಿಮಾನಿಯಾಗಿದ್ದನು ಎಂದು ಹೇಳಲಾಗುತ್ತಿದೆ. ದರ್ಶನ್​ ಮತ್ತು ಪತ್ನಿ ವಿಜಯಲಕ್ಷ್ಮೀ ನಡುವೆ ಪವಿತ್ರಾ ಗೌಡ ಬಂದ ಸಂಬಂಧ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್​ ಮಾಡಿದ್ದನಂತೆ. ಈ ವಿಚಾರವನ್ನು ಪವಿತ್ರಾ ಗೌಡ ದರ್ಶನ್​ ಬಳಿ ಹೇಳಿಕೊಂಡಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿಕೊಳ್ಳಲಾಗಿದೆ.
/newsfirstlive-kannada/media/post_attachments/wp-content/uploads/2024/06/darshan-3.jpg)
ಇದನ್ನೂ ಓದಿ: ಒಂದೆರಡಲ್ಲ.. ನಟ ದರ್ಶನ್​ ಮೇಲಿದೆ ಸಾಲು ಸಾಲು ಆರೋಪ! ಇಲ್ಲಿದೆ ಲಿಸ್ಟ್​
ಅಭಿಮಾನಿಯನ್ನು ಕರೆಸಿ ಕೊಲೆ?
ಅಭಿಮಾನಿಯನ್ನು ಕರೆಸಿಕೊಂಡ ಬಳಿಕ ಆತನಿಗೆ ದರ್ಶನ್​ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಮಾನುಷವಾಗಿ ಥಳಿಸಿದ್ದಾರೆ. ಥಳಿಸಿದ ಏಟಿಗೆ ಯುವಕ ಸಾವನ್ನಪ್ಪಿದ್ದಾನೆ. ನಂತರ ಮೃತದೇಹವನ್ನು ಸುಮನಹಳ್ಳಿ ಮೋರಿ ಬಳಿ ತಂದು ಎಸೆದಿದ್ದಾರೆ.
ಇದನ್ನೂ ಓದಿ: ಪವಿತ್ರಾ ಗೌಡಗೆ ದರ್ಶನ್​ಗೂ ಏನು ಸಂಬಂಧ? ರೇಣುಕಾಸ್ವಾಮಿ ಕೊಲೆಯಲ್ಲಿ ನಟಿಯ ಹೇಸರೇಕೆ ಬಂತು?
/newsfirstlive-kannada/media/post_attachments/wp-content/uploads/2024/06/Pavitra-Gowda.jpg)
ನಿನ್ನಿಂದ ಹೀಗಾಯಿತು
ರೇಣುಕಾಸ್ವಾಮಿ ಕೊಲೆಯ ಬಳಿಕ ದರ್ಶನ್ ಸಿಟ್ಟುಗೆದ್ದು ಪವಿತ್ರಾ ಗೌಡಗೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ನಿನ್ನಿಂದ ಹೀಗಾಯಿತು ಎಂದು ಎರಡೇಟು ಬಾರಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹಲ್ಲೆಗೊಳಗಾದ ನಟಿ ಆರ್​​ಆರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾ​ಗಿದೆ. ಸೋಮವಾರದಂದು (ಜೂನ್ 10) ಪವಿತ್ರಾ ಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಮೈಸೂರಲ್ಲಿ ಕೊಲೆ? ಬೆಂಗಳೂರಲ್ಲಿ ಡೆಡ್​ಬಾಡಿ? ಚಿತ್ರಹಿಂಸೆ ನೀಡಿ ರೇಣುಕಾಸ್ವಾಮಿ ಕೊಲೆ
ಪೊಲೀಸ್​ ವಶದಲ್ಲಿ ಪವಿತ್ರಾ ಗೌಡ
ಇಂದು ರೇಣುಕಾಸ್ವಾಮಿ ಪ್ರಕರಣದ ಸಂಬಂಧ ದರ್ಶನ್​ ಅವರನ್ನು ಬಂಧಿಸಲಾಗಿದೆ. ಬಂಧನ ಜೊತೆ ಜೊತೆಗೆ ನಟಿ ಪವಿತ್ರಾ ಗೌಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us