ದರ್ಶನ್ ಬಳ್ಳಾರಿ ಜೈಲಿಗೆ ಹೋಗೋದು ಯಾವಾಗ? ಕಾನೂನು ಪ್ರಕ್ರಿಯೆ ಏನೇನು? ಇಲ್ಲಿದೆ ಕಂಪ್ಲೀಟ್ ಮಾಹಿತಿ!

author-image
Gopal Kulkarni
Updated On
ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?
Advertisment
  • ಬಳ್ಳಾರಿ ಜೈಲಿಗೆ ನಟ ದರ್ಶನ್​ ಶಿಫ್ಟ್​​ಗೆ ನಡೆಯುತ್ತಿದೆ ಆರಂಭಿಕ ಪ್ರಕ್ರಿಯೆ
  • ಎಲ್ಲಾ ಕಾನೂನು ಪ್ರೊಸಿಜರ್​ ಮುಗಿಸಿ ಕಮಾನು ಎತ್ತುವ ಕಾರ್ಯ ಶುರು
  • ಬದಲಾಗಲಿದ್ಯಾ ದರ್ಶನ್ ಆಭಿಮಾನಿಗಳ ಅಚ್ಚುಮೆಚ್ಚಿನ ಕೈದಿ ನಂಬರ್​?

ಬೆಂಗಳೂರು: ಕೊಲೆ ಆರೋಪಿ ದರ್ಶನ್ ಅವರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಎತ್ತಂಗಡಿ ಮಾಡುವ ಕಾರ್ಯಕ್ಕೆ ಈಗ ವೇಗ ಸಿಕ್ಕಿದೆ. ಹಲವಾರು ಕಾನೂನು ಪ್ರಕ್ರಿಯೆಗಳಿಗೆ ಚುರುಕು ನೀಡಲಾಗಿದೆ. ದರ್ಶನ್ ಜೈಲಿಗೆ ಬಂದಾಗಿನಿಂದ ಇರುವ ಕೇಸ್​ನ ಆನ್​ ರೆಕಾರ್ಡ್​ಗಳು, ಜೈಲಿನ ಆಡಳಿತದ ರೆಕಾರ್ಡ್ಸ್​, ಕೋರ್ಟ್ ಆರ್ಡರ್, ವಾರೆಂಟ್ ಕಾಪಿ ಈಗ ಒಂದು ಕಾರಾಗೃಹದಿಂದ ಮತ್ತೊಂದು ಕಾರಾಗೃಹಕ್ಕೆ ಹಸ್ತಾಂತರವಾಗಬೇಕಿದೆ. ಆ ಎಲ್ಲಾ ಪ್ರಕ್ರಿಯೆಗಳು ಇಂದೇ ಆರಂಭವಾಗಿವೆ.

ಇದನ್ನೂ ಓದಿ:ದರ್ಶನ್ ಹೋಗೋ ಬಳ್ಳಾರಿ ಜೈಲಲ್ಲೂ ಇದ್ದಾರೆ ನಟೋರಿಯಸ್ ರೌಡಿಗಳು; ಒಬ್ಬೊಬ್ಬರ ಇತಿಹಾಸ ಭಯಾನಕ!

ಫ್ಯಾಕ್ಸ್​ ಹಾಗೂ ಫೋನ್ ಮೂಲಕ ಕೈದಿಯನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ಬಳ್ಳಾರಿ ಜೈಲಾಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಜೈಲಿಗೆ ಶಿಫ್ಟ್​ ಆಗುವ ಮುನ್ನ ಬಳ್ಳಾರಿಯಲ್ಲಿಯೇ ದರ್ಶನ್ ಮೆಡಿಕಲ್ ಚೆಕಪ್ ಆಗಬೇಕು. ಅದರ ಬಗ್ಗೆಯೂ ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ. ಬೆಂಗಳೂರು ಜೈಲಾಧಿಕಾರಿಗಳೇ ದರ್ಶನ್​ಗೆ ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಮೆಡಿಕಲ್ ರಿಪೋರ್ಟ್, ಕೋರ್ಟ್​ ಆರ್ಡರ್ ಕಾಪಿ, ಕೇಸ್ ಡಿಟೇಲ್ಸ್​, ಹಿಂದಿನ ವಾರೆಂಟ್​ಗಳು ಬಳ್ಳಾರಿ ಜೈಲಾಧಿಕಾರಿಗಳಿಗೆ ಹಸ್ತಾಂತರ ಮಾಡಬೇಕಾಗುತ್ತದೆ. ಬಳಿಕ ದರ್ಶನ್ ಜೈಲಿನ ಅಡ್ಮಿನಿಸ್ಟ್ರೇಷನ್ ಪ್ರಕ್ರಿಯೆಗಳು ಶುರುವಾಗುತ್ತವೆ.

publive-image

ಇದನ್ನೂ ಓದಿ:ನಟ ದರ್ಶನ್‌ ಇಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿಲ್ಲ ಯಾಕೆ? ಇಲ್ಲಿದೆ 8 ಕಾರಣಗಳು! 

6106 ಕೈದಿ ನಂಬರ್ ಬದಲಾಗುತ್ತಾ?
ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬಳ್ಳಾರಿ ಜೈಲಿನೊಳಕ್ಕೆ ಕಾಲಿಡುತ್ತಿದ್ದಂತೆ ದರ್ಶನ್ ಅವರ ಕೈದಿ ನಂಬರ್ ಕೂಡ ಬದಲಾಗುತ್ತೆ ಎನ್ನಲಾಗಿತ್ತು. ಆದರೆ ದರ್ಶ‌ನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ್ರೂ ಪರಪ್ಪನ ಅಗ್ರಹಾರ UTP ನಂಬರ್- 6106 ಬದಲಾಗೋದಿಲ್ಲ. ವಿಚಾರಣಾಧೀನ ಕೈದಿ ಸಂಖ್ಯೆ-6106 ಮುಂದುವರಿಕೆಯಾಗಲಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಕೈದಿ ನಂಬರ್‌ E-UTP ನಂಬರ್ ಆಗಿ ಬದಲಾಗಲಿದೆ.

ದರ್ಶನ್ ಬಳ್ಳಾರಿಗೆ ಎತ್ತಂಗಡಿ ಆಗುವುದು ಯಾವಾಗ
ಇನ್ನೂ ಕೋರ್ಟ್ ಆದೇಶ ನೀಡಿದ ಕೂಡಲೇ ಇಂತಹ ದಿನವೇ ಆರೋಪಿಯನ್ನು ಬೇರೆ ಕಡೆ ಶಿಫ್ಟ್ ಮಾಡಬೇಕು ಅಂತಿಲ್ಲ. ಎಲ್ಲಾ ಕಾನೂನು ಪ್ರಕ್ರಿಯೆ ಮುಗಿದ ಬಳಿಕವೇ ಸ್ಥಳಾಂತರಕ್ಕೆ ಪೊಲೀಸರು ಮುಂದಡಿ ಇಡುತ್ತಾರೆ. ಸದ್ಯ ದರ್ಶನ್ ಪ್ರಕರಣದಲ್ಲಿ ಈಗಾಗಲೇ ಕಾನೂನು ಪ್ರಕ್ರಿಯೆನ್ನು ಪೊಲೀಸರು ಆರಂಭಿಸಿದ್ದಾರೆ ರಾತ್ರಿ ವೇಳೆ ಕೈದಿಯನ್ನು ಸ್ಥಳಾಂತರ ಮಾಡಲು ಕಾನೂನು ಅನುಮತಿಸಲ್ಲ,ಅದು ಅಲ್ಲದೇ ಬಳ್ಳಾರಿ ಜೈಲು ಪರಪ್ಪನ ಅಗ್ರಹಾರದಿಂದ 334 ಕಿಲೋ ಮೀಟರ್ ದೂರದಲ್ಲಿದೆ. ಕಾರಣ ನಾಳೆ ಬೆಳಗ್ಗೆ ಪರಪ್ಪನ ಅಗ್ರಹಾರದಿಂದ ದರ್ಶನ್​ನ ಬಳ್ಳಾರಿಯತ್ತ ಪ್ರಯಾಣ ಆರಂಭವಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment