/newsfirstlive-kannada/media/post_attachments/wp-content/uploads/2024/09/darshan-3.jpg)
ಕಳೆದು ಹೋದ ಸಾಧನವನ್ನು ಹುಡುಕಬಹುದು. ಆದರೆ ಅಳಿಸಿ ಹೋದ ಫೈಲ್​ಗಳನ್ನು, ಡಾಕ್ಯುಮೆಂಟ್​​ಗಳನ್ನು ಪತ್ತೆಹಚ್ಚೋದು ಅಂದ್ರೆ ಸುಲಭದ ಮಾತಲ್ಲ. ಸದ್ಯ ದರ್ಶನ್​ ಮತ್ತು ಗ್ಯಾಂಗ್​​ ಕೈಯಾರೆ ಹತ್ಯೆಯಾದ ರೇಣುಕಾಸ್ವಾಮಿಯ ಫೋಟೋಗಳನ್ನು ಪೊಲೀಸರು ಆರೋಪಿಗಳ ಮೊಬೈಲ್​ನಿಂದ ರಿಟ್ರೀವ್​ ಮಾಡಿದ್ದಾರೆ. ಈಗಾಗಲೇ ಡಿಲೀಟ್​ ಮಾಡಿದ್ದ ಫೋಟೋಗಳನ್ನು ಮರಳಿ ಪಡೆದಿದ್ದಾರೆ. ಅದರೆ ಅದು ಹೇಗೆ ಸಾಧ್ಯವಾಯ್ತು ಎಂದು ತಿಳಿಯೋಣ.
ರಿಟ್ರೀವ್​ ಎಂದರೇನು?
ಮೊಬೈಲ್​ ರಿಕವರಿ ಅಥವಾ ರಿಟ್ರೀವ್ ಮಾಡೋದು ಎಂದರೆ ಕಳೆದು ಹೋದ, ಅಳಿಸಿದ ಅಥವಾ ಪ್ರವೇಶಿಸಲಾಗದ ಡೇಟಾವನ್ನು ಹಿಂಪಡೆಯುವುದಾಗಿದೆ. ಅಂದಹಾಗೆಯೇ ಪ್ರಮುಖವಾದ ಫೈಲ್​​, ಸಂಪರ್ಕ, ಸಂದೇಶ ಅಥವಾ ಇತರ ಮೌಲ್ಯಯುತ ಮಾಹಿತಿಯನ್ನು ಹಿಂಪಡೆಯುವ ಪ್ರಕ್ರಿಯೆ ಇದಾಗಿದೆ. ರಿಟ್ರೀವ್​ ಅಂದರೆ ಸುಲಭವ ಮಾತಲ್ಲ, ನುರಿತರಿಂದ ಅಥವಾ ವಿಶೇಷ ಸಾಫ್ಟ್​ವೇರ್​​ ಬಳಸಿ ಡೇಟಾವನ್ನು ಮರುಪಡೆಯುವುದಾಗಿದೆ. ಇದು ಸಾಧ್ಯವಾಗಬಹುದು. ಸಾಧ್ಯವಾಗದೇ ಇರಬಹುದು.
ಡಿಲೀಟ್​​ ಮಾಡಿದ ಫೋಟೋ ಮರಳಿ ಪಡೆಯಬಹುದೇ?
ಶಾಶ್ವತವಾಗಿ ಡಿಲೀಟ್​ ಮಾಡಿದ ಫೋಟೋಗಳನ್ನು ಮರಳಿ ಪಡೆಯಲು ವಿಶೇಷ ಸಾಫ್ಟ್​ವೇರ್​​ ಮೊರೆ ಹೋಗುವುದು ಅಗತ್ಯ. ದರ್ಶನ್​ ಕೇಸ್​ ವಿಚಾರದಲ್ಲೂ ಇದೇ ಆಗಿದೆ ಎನ್ನಲಾಗುತ್ತಿದೆ. ಆದರೆ ಸಾಮಾನ್ಯವಾಗಿ ಡಿಲೀಟ್​ ಆಗಿರುವ ಫೋಟೋವನ್ನು ಮರಳಿ ಪಡೆಯಲು ಗೂಗಲ್​ ಫೋಟೋ ಬ್ಯಾಕಪ್​ ಮೊರೆ ಹೋಗಬಹುದಾಗಿದೆ.
ಸಾಮಾನ್ಯವಾಗಿ ಗ್ಯಾಲರಿಯಿಂದ ಡಿಲೀಟ್​​ ಆಗಿರುವ ಫೋಟೋಗಳು ರಿಸೈಕಲ್​ ಬಿನ್​ನಲ್ಲಿ ಉಳಿದುಕೊಂಡಿರುತ್ತದೆ. ಒಂದು ವೇಳೆ ಅಲ್ಲಿಂದಲೂ ಡಿಲೀಸ್​ ಆಗಿದ್ದರೆ ವಿಶೇಷ ಸಾಫ್ಟ್​ವೇರ್​ ಮೊರೆ ಹೋಗುವುದು ಸೂಕ್ತ.
[caption id="attachment_85036" align="alignnone" width="800"] ಪೊಲೀಸರು ರಿಕವರಿ ಮಾಡಿದ ಫೋಟೋ[/caption]
ಬಹುತೇಕರು ಸ್ಮಾರ್ಟ್​ಫೋನ್​ನಿಂದ ಡಿಲೀಟ್​​ ಆಗಿರೋ ಫೋಟೋ ರಿಕವರಿ ಮಾಡಲು ಕ್ಲೌಡ್​ ಬ್ಯಾಕಪ್​​ ಮೊರೆ ಹೋಗುತ್ತಾರೆ. ಮೆಮೊರಿ ಕಾರ್ಡ್​​ ತೆಗೆದು ವಿಂಡೋಸ್​ ಅಥವಾ ಮ್ಯಾಕ್​ಓಎಸ್​​ನಲ್ಲಿ ಫೋಟೋ ಮರುಪಡೆಯುವ ಸಾಫ್ಟ್​​ವೇರ್​ ಬಳಸಿ ಸ್ಕ್ಯಾನ್​ ಮಾಡುತ್ತಾರೆ. ಈ ವೇಳೆ ಅಳಿಸಿಹೋದ ಡಾಕ್ಯುಮೆಂಟ್​ ಅಥವಾ ಫೋಟೋ ಮರಳಿ ಸಿಗುತ್ತದೆ.
ಫೈಲ್​ ರಿಕವರಿಗಾಗಿ ಇರುವ ಸಾಫ್ಟ್​ವೇರ್​​ಗಳು
- ರೆಕುವಾ
- ಡಿಸ್ಕ್ ಡಿಗ್ಗರ್
- ಡಾ.ಫೋನ್
- ಡಿಸ್ಕ್ ಡ್ರಿಲ್
- ಫೋನ್ ರೆಸ್ಕ್ಯೂ
- ಇರೇಸ್​ಯುಎಸ್​ ಡೇಟಾ ರಿಕವರಿ ವಿಝಾರ್ಡ್
- ಫೋಟೋ ರೆಕ್
- ಸ್ಟೆಲ್ಲರ್​ ಫೋಟೋ ರಿಕವರಿ
- ಅನ್​ಡಿಲೀಟರ್ ರಿಕವರಿ​ ಫೈಲ್‌ಗಳು ಮತ್ತು ಡೇಟಾ
- ವಂಡರ್​ಶೇಟ್​​​ ಡೇಧಟಾ ರಿಕವರಿ ಮಾಕ್​ ಓಸ್​
- ಡಿಸ್ಕ್ ಡಿಗ್ಗರ್ ಫೋಟೋ ರಿಕವರಿ
- ಮಿನಿಟೂಲ್ ಪವರ್ ಡೇಟಾ ರಿಕವರಿ ಅಲ್ಟಿಮೇಟ್
- ರೆಮೋ ರಿಕವರ್
- ಆಲ್ಟ್​​ಡಾಟಾ ಆ್ಯಂಡ್ರಾಯ್ಡ್​ರಿಕವರಿ
- ಕಾರ್ಡ್​​ ರಿಕವರಿ ಪ್ರೊ
- ಡಿಗ್‌ಡೀಪ್ ಇಮೇಜ್ ರಿಕವರಿ
- ಫೋನ್‌ಪಾವ್
- ರಿಕವರಿ ಮೈ ಫೈಲ್ಸ್​
- Sd ಕಾರ್ಡ್​ ಡಾಟಾ ರಿಕವರಿ ಫೋಟೋ ವಿಡಿಯೋ
- ಇರೇಸ್​​ಯುಎಸ್​​ ಮೊಬಿಸೇವರ್​
- ಫೈಲ್ ರಿಕವರಿ ಫೋಟೋ ರಿಕವರಿ
- ಡಂಪ್ಸ್ಟರ್
ಡಿಲೀಟ್​​ ಆಗಿರುವ ಸಂದೇಶ ಸಿಗುತ್ತಾ?
ವಾಟ್ಸ್ಆ್ಯಪ್​ನಲ್ಲಿ ಡಿಲೀಟ್​ ಆಗಿರುವ ಸಂದೇಶಗಳು ಸಿಗುವುದು ಕಷ್ಟಕರ. ಏಕೆಂದರೆ ವಾಟ್ಸ್​ಆ್ಯಪ್​ ಎಂಡ್​-ಟು-ಎಂಡ್​​ ಎನ್​ಕ್ರಿಪ್ಟ್​ ಆಗಿದೆ. ಅಲ್ಲದೆ ವಾಟ್ಸ್​ಆ್ಯಪ್​ ತನ್ನ ಖಾಸಗಿ ತನದ ಹಕ್ಕನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳುತ್ತಾ ಬಂದಿದೆ. ಹೀಗಾಗಿ ವಾಟ್ಸ್​ಆ್ಯಪ್​ ಯಾವುದೇ ಬಳಕೆದಾರನ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ.
ಇದನ್ನೂ ಓದಿ: ಏರ್​​ ಇಂಡಿಯಾ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇನ್ಮುಂದೆ ಆಕಾಶದಲ್ಲೂ ವೈ-ಫೈ ಬಳಸಬಹುದು
ಒಂದು ವೇಳೆ ಸ್ಮಾರ್ಟ್​ಫೋನ್​ ಪಡೆದುಕೊಂಡು ಅದರಿಂದ ಡಿಲೀಟ್​​ ಆದ ಸಂದೇಶವನ್ನು ಪೊಲೀಸರು ರಿಟ್ರೀವ್​ ಮಾಡುವ ಸಾಧ್ಯತೆಯಿದೆ. ಇದಲ್ಲದೆ ಡಿಲೀಟ್​​ ಆದ ಸಂದೇಶ ಅಥವಾ ಫೋಟೋದ ಡೇಟಾ ಎಲ್ಲಿ ಸಂಗ್ರಹವಾಗಿದೆ ಎಂಬುದನ್ನು ಅರಿತುಕೊಂಡು ಹುಡುಕಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ