ಜೈಲಲ್ಲಿ ಮೀನಾ ತೂಗುದೀಪ ಮಾತಿಗೆ ದರ್ಶನ್​​ ಭಾವುಕ.. ಆ 28 ನಿಮಿಷ ಏನೆಲ್ಲಾ ಮಾತನಾಡಿದ್ರು ಗೊತ್ತಾ?

author-image
AS Harshith
Updated On
ಅಮ್ಮನನ್ನು ಕಾಣುವಾಸೆ.. ಮೊದಲ ಬಾರಿಗೆ ಬಳ್ಳಾರಿ ಜೈಲಿಗೆ ಬಂದ ಮೀನಾ ತೂಗುದೀಪ.. ದರ್ಶನ್​ಗಾಗಿ ಏನು ತಂದಿದ್ದಾರೆ ಗೊತ್ತಾ?
Advertisment
  • ಅಮ್ಮನನ್ನು ಕಂಡು ಭಾವುಕರಾದ ಆರೋಪಿ ದರ್ಶನ್​​
  • ದರ್ಶನ್​ ಬಳಿ 28 ನಿಮಿಗಳ ಕಾಲ ಮೀನಾ ತೂಗುದೀಪ ಮಾತು
  • ಮಗನನ್ನು ಕಂಡು ತಾಯಿ ಸಂತೈಸಿದ ತಾಯಿ.. ಏನಂದ್ರು ಗೊತ್ತಾ?

ಬಳ್ಳಾರಿ: ಕೇಂದ್ರ ಕಾರಾಗೃಹ ಬಳ್ಳಾರಿಗೆ ಹೋದ ಬಳಿಕ ಆರೋಪಿ ದರ್ಶನ್ (Darshan)​​ ಕಾಣಲು ತಾಯಿ ಮೀನಾ ತೂಗುದೀಪ (Meena Thugudeep) ನಿನ್ನೆ ಬಂದಿದ್ದರು. ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಶಿಫ್ಟ್​ ಆದ ನಂತರ ಮೊದಲ ಬಾರಿಗೆ ಬಳ್ಳಾರಿಗೆ ಮಗನನ್ನು ಕಾಣಲು ಮಗಳು, ಅಳಿಯನ ಜೊತೆಗೆ ಆಗಮಿಸಿದ್ದರು. ಅತ್ತ ತಾಯಿಯನ್ನು ಕಂಡಂತೆ ದರ್ಶನ್​​ ಭಾವುಕರಾಗಿದ್ದಾರೆ.

ದರ್ಶನ್​​ ಬಳ್ಳಾರಿಗೆ ಶಿಫ್ಟ್​ ಆದ ಬಳಿಕ ಗೊಂದಲಕ್ಕೀಡಾಗಿದ್ದರು. ತಾಯಿಯನ್ನು ಕಾಣಲು ಚಟಪಡಿಸುತ್ತಿದ್ದರಂತೆ. ಕೊನೆಗೆ ನಿನ್ನೆ ಮೀನಾ ತೂಗುದೀಪ ಬಳ್ಳಾರಿಗೆ ಆಗಮಿಸಿದ್ದಾರೆ. ಮಗನನ್ನು ಕಂಡು ತಾಯಿ ಸಂತೈಸಿದ್ದಾರೆ. ಅತ್ತ ತಾಯಿಯ ಅಭಯಕ್ಕೆ ದರ್ಶನ್ ರಿಲ್ಯಾಕ್ಸ್ ಆಗಿದ್ದಾರೆ.

publive-image

ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನಗಿಲ್ಲ ರಿಲೀಫ್.. ಜಾಮೀನು ಸಿಕ್ಕರೂ ಮತ್ತೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ

ರೇಣುಕಾಸ್ವಾಮಿ ಕೊಲೆ ಕೇಸ್ (Renukaswamu Murder case) ವಿಚಾರವಾಗಿ ದರ್ಶನ್ ಗೊಂದಲಕ್ಕೆ ಸಿಲುಕಿದ್ದರು. ಹೀಗಾಗಿ ನಿನ್ನೆ ಬಳ್ಳಾರಿ ಸೆಂಟ್ರಲ್ ಜೈಲ್‌‌ಗೆ ತಾಯಿ ಮೀನಮ್ಮ ಬಂದು ದರ್ಶನ್‌ಗೆ ಧೈರ್ಯ ತುಂಬಿದ್ದಾರೆ. ರಾಜರಾಜೇಶ್ವರಿ ತಾಯಿ‌ ಆಶೀರ್ವಾದ ಇದೆ ಹೆದರಬೇಡ ಅಂತಾ ಆತ್ಮಸೈರ್ಯ ತುಂಬಿದ್ದಾರೆ.

ಇದನ್ನೂ ಓದಿ: ಜೈಲಲ್ಲಿ ಬರೋಬ್ಬರಿ 100 ದಿನ ಕಳೆದ ದಾಸ; ನಟ ದರ್ಶನ್​ಗೆ ಜಾಮೀನು ಸಿಗೋದು ಯಾವಾಗ?​

ಕೆಟ್ಟ ಘಳಿಗೆ ಘಟನೆ ನಡೆದಿರಬಹುದು. ನಿನ್ನ ಜೊತೆಗೆ ನಾವಿದ್ದೇವೆ. ದೇವಿ ಕೃಪೆಯಿಂದ ಬೇಲ್ ಆಗುತ್ತೆ ಅಂತಾ ಮೀನಮ್ಮ ಬೆನ್ನುತ್ತಟ್ಟಿದ್ದಾರೆ. 28 ನಿಮಿಷಗಳ ಕಾಲ ತಾಯಿಯೊಂದಿಗೆ ಮಾತನಾಡಿದ ಬಳಿಕ ದರ್ಶನ್ ಕೂಲ್ ಆಗಿದ್ದಾರೆ. ಸದ್ಯ ತಾಯಿ ಭೇಟಿ ಬಳಿಕ ದರ್ಶನ್​ ಲವಲವಿಕೆಯಿಂದ ಇದ್ದಾರೆಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment