/newsfirstlive-kannada/media/post_attachments/wp-content/uploads/2024/06/DARSHAN-34.jpg)
ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿರೋ ದರ್ಶನ್ ಆ್ಯಂಡ್ ಪಟಾಲಂ ಇಡೀ ಕುಂಡಲಿಯೇ ಹೊರ ಬಿದ್ದಿದ್ದೆ. ರಿಮ್ಯಾಂಡ್ ಅರ್ಜಿಯಲ್ಲಿ ಘಟನೆ ನಡೆದ ದಿನದಿಂದ ತನಿಖೆವರೆಗೂ ಪೊಲೀಸರು ಏನೆಲ್ಲ ಕಲೆ ಹಾಕಿದ್ರು. ಮಹಜರ್ನಲ್ಲಿ ಸಿಕ್ಕ ಸಾಕ್ಷಿಗಳು ಏನೇನು ಅನ್ನೋದನ್ನೆಲ್ಲ ವಿವರಿಸಿದ್ದಾರೆ. ಕೊಲೆ ದಿನ ಧರಿಸಿದ ಬಟ್ಟೆಯಿಂದ ಹಿಡಿದು ಚಪ್ಪಲಿತನಕವೂ ಪೊಲೀಸರು ಜಪ್ತಿ ಮಾಡಿದ್ದಾರೆ. ಅಷ್ಟಕ್ಕೂ ಪೊಲೀಸರ ರಿಮ್ಯಾಂಡ್ ಅರ್ಜಿಯಲ್ಲಿ ಏನೇನಿದೆ, ರಿವೀಲ್ ಆಗಿರುವ ಭಯಾನಕ ವಿಚಾರಗಳು ಏನೇನು ಅನ್ನೋದು ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹೆಂಡತಿ ಮೃತಪಟ್ಟ 10 ನಿಮಿಷದಲ್ಲಿ ICUನಲ್ಲಿ ಶೂಟ್ ಮಾಡಿಕೊಂಡ IPS ಅಧಿಕಾರಿ.. ಇದು ಮನಕಲಕುವ ಸ್ಟೋರಿ
ಇಂಡಸ್ಟ್ರಿಯಲ್ಲಿ ಡಿ ಬಾಸ್ ಆಗಿ ಮೆರೆದಿದ್ದ ದರ್ಶನ್ ಒಂದೇ ಒಂದು ಯಡವಟ್ಟಿನಿಂದೆ ಇಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಒಂದು ಕ್ಷಣ ಯೋಚನೆ ಮಾಡಿದಿದ್ರೆ ಇವತ್ತು ದರ್ಶನ್ ಶೂಟಿಂಗ್ನಲ್ಲಿ ಆರಾಮಾಗಿ ಇರ್ತಿದ್ರು. ಯಾವ ವಿಚಾರದಲ್ಲಿ ಅಲರ್ಟ್ ಆಗಿರ್ಬೇಕಿತ್ತೋ. ಅದೇ ವಿಚಾರದಲ್ಲಿ ತಪ್ಪು ಮಾಡಿಬಿಟ್ಟಿದ್ರು. ಅದರ ಫಲವೇ ಇವತ್ತು ದರ್ಶನ್ ಕೊಲೆ ಆರೋಪಿಯಾಗಿ ಪೊಲೀಸರ ಮುಂದೆ ಕೈ ಕಟ್ಟಿ ನಿಲ್ಲುವಂತಾಗಿರೋದು.
ಇದನ್ನೂ ಓದಿ: RCBಯ ಅದೃಷ್ಟದ ಕ್ಯಾಪ್ಟನ್ ಮತ್ತೆ ಸೆಂಚುರಿ.. ಬೆಂಗಳೂರಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸ್ಮೃತಿ ಮಂದನಾ
ಇದೆಲ್ಲ ಒಂದು ಕಡೆ ಇರಲಿ, ಕೊಲೆ ಕೇಸ್‌ಗೆ ಸಂಬಂಧಪಟ್ಟಂತೆ ಇಂಚಿಂಚೂ ಮಾಹಿತಿ ಕಲೆ ಹಾಕ್ತಿರೋ, ಪೊಲೀಸರು ಸಾಕ್ಷಿ ಸಮೇತ ಕೊಲೆ ಪ್ರಕರಣವನ್ನ ಪ್ರೂವ್ ಮಾಡಲು ಶತಾಯಗತಾಯ ಪ್ರಯತ್ನ ಪಡುತ್ತಿದ್ದಾರೆ. ತನಿಖೆಯ ಪ್ರಮುಖ ಅಂಶಗಳನ್ನ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಆ ರಿಮ್ಯಾಂಡ್ ಅರ್ಜಿಯ ಅಂಶಗಳು ಮೂಲಗಳಿಂದ ನಮಗೆ ಸಿಕ್ಕಿದೆ. ರಿಮ್ಯಾಂಡ್ ಅರ್ಜಿಯಲ್ಲೂ ದರ್ಶನ್ ಕೊಲೆ ಪ್ರಕರಣದ ಬಗ್ಗೆ ಬೆಚ್ಚಿ ಬೀಳಿಸುವ ಅಂಶಗಳು ಬಯಲಾಗಿವೆ. ಕೃತ್ಯ ನಡೆದಾಗ ಏನಾಗಿತ್ತು? ಕೃತ್ಯದ ದಿನ ಆರೋಪಿಗಳು ಧರಿಸಿದ್ದ ಬಟ್ಟೆ ಯಾವುದು? ಬಣ್ಣ ಯಾವುದು? ಏನೆಲ್ಲ ಅಂಶಗಳನ್ನ ಉಲ್ಲೇಖಿಸಲಾಗಿದೆ ಅನ್ನೋದ್ರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಆ ಸೆಕ್ಯೂರಿಟಿ ಹೇಳಿಕೆಯಿಂದ ಆರೋಪಿಗಳಿಗೆ ಢವಢವ!
ದರ್ಶನ್ ಎಸಗಿರುವ ಘನಘೋರ ಕೃತ್ಯಕ್ಕೆ ಇಲ್ಲಿತನಕ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್ಗಳನ್ನ ಮಾತ್ರ ಕಲೆ ಹಾಕಿದ್ರು ಅನ್ನೋದಷ್ಟೆ ಗೊತ್ತಾಗಿತ್ತು. ಮೊಬೈಲ್ ಫೋನ್ಗಳು ಸಿಡಿಆರ್.. ಸಿಸಿಟಿವಿಗಳ ದೃಶ್ಯ.. ಡಿವಿಆರ್ ಹೀಗೆ ಈ ಕೊಲೆಗೆ ಕೇವಲ ಟೆಕ್ನಿಕಲ್ ಎವಿಡೆನ್ಸ್ಗಳು ಮಾತ್ರ ಇದ್ವು. ಹೀಗಾಗಿ ಕೊಲೆ ಆರೋಪ ಸಾಬೀತು ಪಡಿಸಬೇಕಾದ್ರೆ ಅದಕ್ಕೆ ಐ ವಿಟ್ನೆಸ್ ತುಂಬಾ ಮುಖ್ಯ. ಯಾಕಂದ್ರೆ ಕೇವಲ ಟೆಕ್ನಿಕಲ್ ಎವಿಡೆನ್ಸ್ಗಳಿಂದ ಒಂದು ಕೊಲೆಯನ್ನ ಸಾಬೀತು ಪಡಿಸಲು ಸಾಧ್ಯವಿಲ್ಲ ಅನ್ನೋದಕ್ಕಿಂತ ಸ್ವಲ್ಪ ಕಷ್ಟ ಅಂತ ಹೇಳಬಹುದು. ಹೀಗಾಗಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲೂ ದರ್ಶನ್ ಆ್ಯಂಡ್ ಗ್ಯಾಂಗ್ ವಿರುದ್ಧ ಐ ವಿಟ್ನೆಸ್ ಯಾವುದು ಇರಲಿಲ್ಲ ಅಂತಲೇ ಹೇಳಲಾಗಿತ್ತು.. ಆದ್ರೆ ತನಿಖೆ ಶುರು ಮಾಡಿದ ಪೊಲೀಸರಿಗೆ 2 ಐ ವಿಟ್ನೇಸ್ಗಳು ಸಿಕ್ಕಿವೆ. ಈ ಅಂಶವನ್ನು ತನಿಖಾಧಿಕಾರಿ ರಿಮೈಂಡ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: ಸ್ಮೃತಿ ಮಂದನಾ, ಕೌರ್ ಭರ್ಜರಿ ಸೆಂಚುರಿ.. ಟೀಮ್ ಇಂಡಿಯಾ ನೀಡಿದ ಬೃಹತ್ ಟಾರ್ಗೆಟ್ಗೆ ಬೆಚ್ಚಿಬಿದ್ದ ಆಫ್ರಿಕಾ
ರೇಣುಕಾಸ್ವಾಮಿಯನ್ನ ಪಟ್ಟಣಗೆರೆ ಶೆಡ್ನಲ್ಲಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಬಳಿಕ ಕಾಮಾಕ್ಷಿಪಾಳ್ಯದ ಸತ್ವ ಅಪಾರ್ಟ್ಮೆಂಟ್ ಬಳಿ ಶವ ಎಸೆಯಲಾಗಿತ್ತು. ಈಗ ಈ 2 ಜಾಗವೇ ಈ ಪ್ರಕರಣದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಈ 2 ಜಾಗದಲ್ಲಿ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ಗಳ ಹೇಳಿಕೆಯೇ ದರ್ಶನ್ಗೆ ಕಂಟಕ ತಂದಿಡಲಿದೆ.
ಇದನ್ನೂ ಓದಿ: ಮುಲಾಜಿಲ್ಲದೇ ನಟ ದರ್ಶನ್ ಧರಿಸಿದ್ದ ವಿಗ್ ಬಿಚ್ಚಿಸಿದ ಪೊಲೀಸರು; ಕಾರಣವೇನು?
ಪಟ್ಟಣಗೆರೆ ಶೆಡ್ ಸೆಕ್ಯೂರಿಟಿಯೇ ಪ್ರಬಲ ಸಾಕ್ಷಿ
ದರ್ಶನ್ ಆ್ಯಂಡ್ ಗ್ಯಾಂಗ್ ಈ ಕೇಸ್ ಮುಚ್ಚಿ ಹಾಕೋದಕ್ಕೆ ಥೇಟ್ ಸಿನಿಮಾ ಸ್ಟೈಲ್ನಲ್ಲೇ ಪ್ಲಾನ್ ಮಾಡಿದ್ದಾರೆ. ರೇಣುಕಾಸ್ವಾಮಿ ಜೀವ ಹೋಗಿದೆ ಅಂದಾಕ್ಷಣ ತಕ್ಷಣಕ್ಕೆ ಶವ ಸಾಗಿಸಿಲ್ಲ. ಬದಲಿಗೆ ಶವವನ್ನು ಹೇಗೆ ಸಾಗಿಸಬೇಕು ಎಲ್ಲಿ ಬೀಸಾಕಬೇಕು ಅಂತೆಲ್ಲ ಪ್ಲಾನ್ ಮಾಡಿದ್ದಾರೆ. ಅದ್ಯಾವಾಗ ರೇಣುಕಾಸ್ವಾಮಿ ಉಸಿರು ನಿಂತು ಹೋಯ್ತು ಈ ಪಾಪಿಗಳು ಮೃತದೇಹವನ್ನು ಅಲ್ಲೆ ಇದ್ದ ಸೆಕ್ಯೂರಿಟಿ ಗಾರ್ಡ್ ರೂಮ್ನಲ್ಲಿ ಇಟ್ಟಿದ್ರಂತೆ.
ಸೆಕ್ಯೂರಿಟಿ ಗಾರ್ಡ್ ಐ-ವಿಟ್ನೆಸ್!
- ಜೂನ್.8 ರಂದು ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆ
- ಕೊಲೆ ಬಳಿಕ ಶೆಡ್ ಸೆಕ್ಯೂರಿಟಿ ನರೇಂದ್ರ ಸಿಂಗ್ ಕೊಠಡಿಯಲ್ಲಿ ಶವ
- ನರೇಂದ್ರ ಸಿಂಗ್ ಕೊಠಡಿಯಲ್ಲಿ ಶವ ಹಾಕಿದ್ದ ದರ್ಶನ್ ಅಂಡ್ ಗ್ಯಾಂಗ್
- ಮೃತದೇಹ ಸಾಗಿಸೋವರೆಗೂ ಸೆಕ್ಯುರಿಟಿ ರೂಂನಲ್ಲಿ ಹಾಕಿದ್ದ ‘ಡಿ’ ಟೀಂ
- ಪೊಲೀಸರ ತನಿಖೆ ವೇಳೆ ಸೆಕ್ಯುರಿಟಿ ರೂಂನಲ್ಲಿ ರಕ್ತದ ಕಲೆಗಳು ಪತ್ತೆ
- ಸೆಕ್ಯೂರಿಟಿ ಕೊಠಡಿಯಲ್ಲೂ ಕೂಡ ಮಹಜರು ಮಾಡಿದ ಪೊಲೀಸರು
- ನರೇಂದ್ರ ಸಿಂಗ್ 164 crpc ಹೇಳಿಕೆ ದಾಖಲು ಮಾಡಿರುವ ಪೊಲೀಸರು
- ನರೇಂದ್ರ ಸಿಂಗ್ನನ್ನು ಪ್ರಕರಣದ ವಿಟ್ನೆಸ್ ಮಾಡಿಕೊಂಡ ಪೊಲೀಸರು
- ನರೇಂದ್ರ ಸಿಂಗ್ ಮೇಲೆ ಪ್ರಭಾವ ಬೀರುವ ಕಾರಣ ಹೇಳಿಕೆ ದಾಖಲು
- ರಿಮ್ಯಾಂಡ್ ಅರ್ಜಿಯಲ್ಲಿ ಶವ ಎಸೆದ ಬಗ್ಗೆ ಉಲ್ಲೇಖ ಮಾಡಿದ ಪೊಲೀಸರ
ಇದನ್ನೂ ಓದಿ: ವಿರಾಟ್ ಉಗ್ರರೂಪ, ಎದುರಾಳಿಗಳಿಗೆ ಖಡಕ್ ವಾರ್ನ್.. ಕೊಹ್ಲಿಗೆ ಕಂಟಕ ಆಗ್ತಾರಾ ಯಶಸ್ವಿ ಜೈಸ್ವಾಲ್?
ಅಷ್ಟಕ್ಕೂ 164 crpc ಅಂದ್ರೇನೂ ಅನ್ನೋದು ತುಂಬಾ ಮುಖ್ಯ. ಈ ಹೇಳಿಕೆಯ ನ್ಯಾಯಾಧೀಶರ ಮುಂದೆ ದಾಖಲು ಮಾಡಿಕೊಳ್ಳಲಾಗುತ್ತೆ. ಒಂದು ಬಾರಿ ಹೇಳಿಕೆ ನ್ಯಾಯಾಧೀಶರ ಮುಂದೆ ದಾಖಲಾದರೇ, ಮುಂದೆ ಚೇಂಜ್ ಮಾಡೋಕೆ ಆಗೋದಿಲ್ಲ. ಹೀಗಾಗಿ ಶೆಡ್‌ನ ಸೆಕ್ಯೂರಿಟಿ ಗಾರ್ಡ್ ಕೊಲೆ ಕೇಸ್ ಸಂಪೂರ್ಣ ಮಾಹಿತಿಯನ್ನ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಹೀಗಾಗಿ ಇದು ಈ ಕೇಸ್ ಬಹುಮುಖ್ಯವಾದ ಅಂಶ ಅಂದ್ರ ತಪ್ಪಾಗೋಲ್ಲ.
ಮೊದಲು ಮೃತದೇಹ ನೋಡಿರೋದು ಯಾರು?
ಅಂದ್ಹಾಗೇ, ಶೆಡ್ ಸೆಕ್ಯೂರಿಟಿ ಗಾರ್ಡ್ ಹೇಳಿಕೆ ದಾಖಲಿಸಿದ್ರೆ, ಇನ್ನೊರ್ವ ಸೆಕ್ಯೂರಿಟಿ ಗಾರ್ಡ್ ದೂರುದಾರ. ಹೌದು, ಆಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ಕೇವಲ್ ರಾಮ್ ದೋರ್ ಅವರೇ ಮೊದಲು ಶವ ನೋಡಿದ್ದು. ಇವರ ದೂರಿನ ಮೇರೆಗೆಯೇ ಪೊಲೀಸರು ತನಿಖೆ ಶುರು ಮಾಡೋದು. ಹೀಗಾಗಿ ಇವರಿಬ್ಬರು ಸೆಕ್ಯೂರಿಟಿ ಗಾರ್ಡ್‌ಗಳು ಈ ಕೇಸ್‌ನ ದಿಕ್ಕನೇ ಬದಲಿಸಿದ್ದಾರೆ ಅಂತಾ ಹೇಳಲಾಗ್ತಿದೆ.
ಇದನ್ನೂ ಓದಿ: ದರ್ಶನ್ ಕೇಸ್ನಲ್ಲಿ ಸಚಿವರ ಒತ್ತಡ.. SPP ಬದಲಾವಣೆ ಆಗ್ತಾರಾ? ಸಿಎಂ ಸಿದ್ದು ಕೊಟ್ರು ಹೊಸ ಟ್ವಿಸ್ಟ್; ಏನದು?
ಬಹುತೇಕ ರೇಣುಕಾಸ್ವಾಮಿ ಕೊಲೆ ಕೇಸ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ರಿಮ್ಯಾಂಡ್ ಅಪ್ಲಿಕೇಷನ್ನಲ್ಲಿ ದರ್ಶನ್ ಪಾತ್ರದ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಕಿಡ್ನಾಪ್ನಿಂದ ಕೊಲೆ ಬಳಿಕ ಶವ ವಿಲೇವಾರಿವರೆಗೂ ನಟನ ಕೈವಾಡವಿರುವುದು ತಿಳಿದು ಬಂದಿದೆ. ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಸ್ವ-ಇಚ್ಚಾ ಹೇಳಿಕೆ ನೀಡಿದ್ದು, ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು ಸೂಚಿಸಿರೋದು ಮತ್ತು ಮೃತದೇಹ ವಿಲೇವಾರಿ ಮಾಡಲು 30 ಲಕ್ಷ ಕೊಟ್ಟಿರೋದಾಗಿ ಒಪ್ಪಿಕೊಂಡಿದ್ದಾರೆ. ಇದು ಕೂಡ ರಿಮ್ಯಾಂಡ್ ಅರ್ಜಿಯಲ್ಲಿ ದಾಖಲಾಗಿದೆ.
ರೇಣುಕಾ ಹತ್ಯೆ ಕೇಸ್ನಲ್ಲಿ ದರ್ಶನ್ ಬಟ್ಟೆ, ಶೂ ಸಹ ಸಾಕ್ಷಿಗಳೇ
ಹೌದು ರೇಣುಕ ಮರ್ಡರ್ ಕೇಸ್ನಲ್ಲಿ ದರ್ಶನ್ ಧರಿಸಿದ್ದ ಬಟ್ಟೆ ಶೂಗಳು ಸಹ ಸಾಕ್ಷಿಯಾಗಲಿವೆ. ಈ ಬಗ್ಗೆ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ನಟ ದರ್ಶನ್ ಮನೆಯಲ್ಲಿ ಮಹಜರು ವೇಳೆ ಬಟ್ಟೆಗಳು ವಶಪಡಿಸಿಕೊಂಡಿರುವ ಬಗ್ಗೆ ತಿಳಿಸಲಾಗಿದೆ. ಮಹಜರು ವೇಳೆ ಬಟ್ಟೆಗಳನ್ನ ಒಗೆದು ಮನೆ ಕೆಲಸದಾಕೆ ಟೆರೆಸ್ ಮೇಲೆ ಒಣ ಹಾಕಿದ್ದಳು. ಮಹಜರಿನ ವೇಳೆ ಬ್ಲೂ ಬಣ್ಣದ ಜೀನ್ಸ್ ಪ್ಯಾಂಟ್ & ಬ್ಲಾಕ್ ಕಲರ್ ಟೀ ಶರ್ಟ್ ವಶಕ್ಕೆ ಪಡೆಯಲಾಗಿದೆ. ಇನ್ನೂ ದರ್ಶನ್ ಧರಿಸಿದ್ದ ಶೂ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಕಾಸ್ಟ್ಯೂಮ್ ಡಿಸೈನರ್ ಈ ಶೂಗಳನ್ನ ವಿಜಯಲಕ್ಷ್ಮಿ ಮನೆಯಲ್ಲಿ ಇರಿಸಿದ್ದ.. ಈಗಾಗಿ ಬನಶಂಕರಿಯಲ್ಲಿರುವ ಪ್ರೆಸ್ಟಿಜ್ ಅಪಾರ್ಟ್ಮೆಂಟ್ಗೆ ದರ್ಶನ್ ಕರ್ಕೊಂಡು ಹೋಗಿ ಈ ಶೂಗಳನ್ನ ವಶಕ್ಕೆ ಪಡೆದಿದ್ದಾರೆ.
ರಾತ್ರಿ ವೇಳೆಯಾಗಿದ್ದರಿಂದ ಸೆಕ್ಯುರಿಟಿ ಗಾರ್ಡ್ ಬಳಿ ವಿಜಯಲಕ್ಷ್ಮೀ ಶೂ ಕೊಟ್ಟಿದ್ರಂತೆ. ಆಗ ದರ್ಶನ್ ತಾನು ಧರಿಸಿದ್ದ ಶೂ ಗುರುತು ಮಾಡ್ದಾಗ ನೀಲಿ ಬಣ್ಣದ ಶೂವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶೂ ಸೀಜ್ ಮಾಡೋಕೆ ಹೋದ ಸಂದರ್ಭದಲ್ಲಿ ಆರೋಪಿ ದರ್ಶನ್‌ನ ಫ್ಲಾಟ್ ಒಳಗೆ ಕರೆದುಕೊಂಡು ಹೋಗಿಲ್ಲ. ಸೆಕ್ಯುರಿಟಿ ಗಾರ್ಡ್ ಬಳಿಯೇ ಇರಿಸಲಾಗಿತ್ತು. ಪತ್ನಿ ವಿಜಯಲಕ್ಷ್ಮೀ ಕೂಡ ಇಲ್ಲಿಗೆ ಬಂದಿದ್ದರು. ರಿಮ್ಯಾಂಡ್ ಅರ್ಜಿಯಲ್ಲಿ ಈ ಎಲ್ಲ ಸಾಕ್ಷಿಗಳ ಬಗ್ಗೆ ಪೊಲೀಸರು ಉಲ್ಲೇಖ ಮಾಡಿದ್ದು, ಆ ಸಾಕ್ಷಿಗಳ ಲೆಕ್ಕ ಕೇಳಿದ್ರೆ ನೀವೂ ಬೆಚ್ಚಿ ಬೀಳೋದು ಗ್ಯಾರಂಟಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ