/newsfirstlive-kannada/media/post_attachments/wp-content/uploads/2024/08/DARSHAN_PARAMESHWARA.jpg)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರು ಫೋಟೋ ವೈರಲ್ ಆಗುತ್ತಿದ್ದಂತೆ ಒಟ್ಟು 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ರೆಸಾರ್ಟ್ನಲ್ಲಿದ್ದಾರೋ, ಜೈಲಿನಲ್ಲಿದ್ದಾರೋ; ಕಣ್ಣೀರು ಹಾಕುತ್ತ ರೇಣುಕಾಸ್ವಾಮಿ ತಂದೆ ಏನಂದ್ರು?
ದರ್ಶನ್ ಫೋಟೋ ವೈರಲ್ ಸಂಬಂಧ ಮಾಧ್ಯಮದವರ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು, ಫೋಟೋ ಕುರಿತಂತೆ ಈಗಾಗಲೇ ತನಿಖೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಬಗ್ಗೆ ಇನ್ನೂ ತನಿಖೆ ಮಾಡಬೇಕಾಗಿದೆ. ರಾತ್ರಿ 1 ಗಂಟೆವರೆಗೆ ಜೈಲಿನಲ್ಲಿ ತನಿಖೆ ಮಾಡಲಾಗಿದೆ. ಜೈಲಿನ ಡಿಜಿಯವರ ಜೊತೆ ಮಾತನಾಡಿ, ಸಂಬಂಧ ಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ತನಿಖೆ ಮಾಡಿಸಿದ್ದೇವೆ. ದರ್ಶನ್ ಬಹಳ ಅರಮಾಗಿ ಇದ್ದಾರೆ ಎಂದು ಫೋಟೋ ವೈರಲ್ ಆಗಿದೆ. ಹೀಗಾಗಿ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್?
ಜೈಲಿನಲ್ಲಿ ಅಮಾನತು ಆದ ಅಧಿಕಾರಿಗಳು
- ಶರಣವಸವ ಅಮಿನಾಗಾಡ್
- ಪ್ರಭು.ಎಸ್ ಖಂಡೇಲ್ ವಾಲ್
- ಅಸಿಸ್ಟೆಂಟ್ ಜೈಲರ್ಗಳು- ಎಲ್.ಎಸ್ ತಿಪ್ಪೇಸ್ವಾಮಿ ಹಾಗೂ ಶ್ರೀಕಾಂತ್ ತಳವಾರು
- ಹೆಡ್ ವಾರ್ಡ್ಸ್- ವೆಂಕಪ್ಪ ಕೊರ್ತಿ ಹಾಗೂ ಸಂಪತ್ ಕುಮಾರ್ ಕಡಾಪಟ್ಟಿ
- ವಾರ್ಡರ್- ಬಸಪ್ಪ ತೇಲಿ
ಈ ಎಲ್ಲರನ್ನು ಅಮಾನತು ಮಾಡಿದ್ದೇವೆ. ಯಾವ ರೀತಿ ಈ ಘಟನೆ ನಡೆದಿದಿದೆ ಎಂದು ವರದಿ ಕೇಳಿದ್ದೇವೆ. ಜೈಲಿನ ಡಿಜಿ ಕೂಡ ಇನ್ಸ್ಪೆಕ್ಷನ್ ಮಾಡುತ್ತಿದ್ದಾರೆ. ಇನ್ನಷ್ಟು ತನಿಖೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ