/newsfirstlive-kannada/media/post_attachments/wp-content/uploads/2024/06/darshan36.jpg)
ರೇಣುಕಾಸ್ವಾಮಿ ಮೇಲೆ ಎಸಗಿದ್ದ ಕ್ರೌರ್ಯದಿಂದ ನಟ ದರ್ಶನ್ ಗ್ಯಾಂಗ್ ಜೈಲುಪಾಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ವಾಸ ನಟ ದರ್ಶನ್ಗೆ ಕರಾಳ ದರ್ಶನ ಮಾಡಿಸುತ್ತಾ ಇದೆ. 5ನೇ ದಿನವೂ ಜೈಲಿನಲ್ಲಿ ದರ್ಶನ್ ಮೌನ ಮಂತ್ರ ಮುಂದುವರಿದಿದೆ. ತಪ್ಪು ಯಾಕಾಯ್ತು ಅನ್ನೋ ವಿಚಾರವೇ ಗುನುಗುತ್ತಿದ್ದು ಚಿಂತೆ ಆವರಿಸಿದೆ.
ಜೈಲಿನಲ್ಲಿ ಮುಂದುವರಿದ ನಟ ದರ್ಶನ್ ಮೌನ ಮಂತ್ರ!
ಯಾರೊಂದಿಗೂ ಮಾತನಾಡದೇ ಮೌನಕ್ಕೆ ಶರಣಾದ ದಾಸ
ಕರ್ಮ ಹಿಂಬಾಲಿಸಿದೆ.. ಮಾತು ಸೋತಿದೆ.. ಮೌನ ಆವರಿಸಿದೆ.. ಜೈಲಿನಲ್ಲಿ 5ನೇ ದಿನ ಕಳೆದಿರೋ ನಟ ದರ್ಶನ್ ಮೌನ ಮುಂದುವರಿದಿದೆ. ಯಾರೊಂದಿಗೂ ಮಾತನಾಡದೇ ಯಜಮಾನ ಮೌನಕ್ಕೆ ಶರಣಾಗಿದ್ದಾರೆ. ಚಿತ್ರರಂಗದಲ್ಲೇ 25 ವರ್ಷಗಳನ್ನು ಕಳೆದಿದ್ದ ಅಪಾರ ಅಭಿಮಾನಿಗಳ ದರ್ಶನ್ಗೆ ಪಶ್ಚಾತ್ತಾಪ ಬೆಂಬಿಡದೇ ಕಾಡುತ್ತಿದೆ.
ಸೆಲ್‌ನಲ್ಲಿ ‘ದಾಸ’ ಸೈಲೆಂಟ್!
ಪರಪ್ಪನ ಅಗ್ರಹಾರ ಜೈಲಿನ ಸೆಲ್‌ನಲ್ಲಿ ದರ್ಶನ್ ಫುಲ್ ಸೈಲೆಂಟ್
ಸೆಕ್ಯೂರಿಟಿ ಸೆಲ್‌ನಲ್ಲಿ ಟಿವಿಯಿದ್ರೂ ದರ್ಶನ್ ನ್ಯೂಸ್ ನೋಡ್ತಿಲ್ಲ
ಕನ್ನಡ ಚಾನೆಲ್ಗಳು, ಕನ್ನಡ ಸಿನಿಮಾಗಳನ್ನು ನೋಡುತ್ತಿಲ್ಲ
ಹಿಂದಿ ಸಿನಿಮಾಗಳನ್ನ ಮಾತ್ರ ವೀಕ್ಷಣೆ ಮಾಡ್ತಿರೋ ದರ್ಶನ್
ಬೇಸರವಾದ್ರೆ ಸ್ಪೋರ್ಟ್ಸ್ ಚಾನೆಲ್ ಹಾಕಿಕೊಂಡು ಟೈಂ ಪಾಸ್
ಜೈಲಾಧಿಕಾರಿಗಳ ಮುಂದೆ ದರ್ಶನ್ ಪಶ್ಚಾತ್ತಾಪದ ಮಾತು
ಇದನ್ನೂ ಓದಿ: ಲಿಪ್ಸ್ಟಿಕ್ ಬೆನ್ನಲ್ಲೇ ಮಿಣಿ ಮಿಣಿ ಪೌಡರ್.. ಜೈಲಾಧಿಕಾರಿಗಳ ಜೊತೆ ಪವಿತ್ರಾ ಗೌಡ ಕಿರಿಕ್; ಆಗಿದ್ದೇನು?
ಒಗ್ಗದ ಜೈಲೂಟ.. ಪರಪ್ಪನ ಪಂಜರದಲ್ಲಿ ಪರದಾಟ!
ಜೈಲಿನಲ್ಲಿ ತೂಕ ಕಳೆದುಕೊಳ್ಳುತ್ತಿರುವ ನಟ ದರ್ಶನ್
ಎತ್ತರವಾದ ಹಾಗೂ ಕಟ್ಟು ಮಸ್ತಾದ ದೇಹದಿಂದಲೇ ನಟ ದರ್ಶನ್ ಅಭಿಮಾನಿಗಳ ಮನ ಗೆದ್ದಿದ್ದರು. ವೆರೈಟಿ ವೆರೈಟಿ ನಾನ್ ವೆಜ್ ಊಟ, ಪ್ರತಿದಿನ ವರ್ಕೌಟ್, ಸಿಗರೇಟು. ವೈನ್, ರಾಯಲ್ ಲೈಫ್ ಲೀಡ್ ಮಾಡ್ತಿದ್ದ ನಟ ದರ್ಶನ್ಗೆ ಜೈಲೂಟ ಒಗ್ಗುತ್ತಿಲ್ಲ. ಸರಿಯಾದ ನಿದ್ರೆ ಇಲ್ಲದೆ ತೂಕ ಕಳೆದುಕೊಳ್ತಿದ್ದಾರೆ ಎನ್ನಲಾಗಿದೆ.
ಬೇಡಪ್ಪ ಬೇಡ ಜೈಲುವಾಸ!
ರಾತ್ರಿ ಜೈಲಿನಲ್ಲಿ ನೀಡಿದ್ದ ಊಟ ಮಾಡಿದ್ದ ದರ್ಶನ್
ರಾತ್ರಿ 12 ಗಂಟೆ ವೇಳೆಗೆ ನಿದ್ರೆಗೆ ಜಾರಿದ್ದ ದರ್ಶನ್
ಇಂದು ಮುಂಜಾನೆ 5 ಗಂಟೆಗೆ ನಿದ್ರೆಯಿಂದ ಎಚ್ಚರ
ಮಾನಸಿಕವಾಗಿ ಕುಗ್ಗಿ ಮಂಕಾದಂತಿದ್ದ ನಟ ದರ್ಶನ್
ಜೈಲು ಸಿಬ್ಬಂದಿ ನೀಡಿದ ಕಾಫಿ ಸೇವಿಸಿದ ದರ್ಶನ್
ಜೈಲಿನ ಮೆನುವಿನಂತೆ ಪುಳಿಯೋಗರೆ ವಿತರಣೆ
ಜೈಲೂಟ ಒಗ್ಗದಿದ್ರೂ ವಿಧಿ ಇಲ್ಲದೇ ತಿನ್ನಬೇಕಾದ ಸ್ಥಿತಿ
ಇದನ್ನೂ ಓದಿ: ರೇಣುಕಾಸ್ವಾಮಿ ಹೆಸರಿನ ಹೊಸ ಪೇಜ್ ಓಪನ್; ಶಾಕಿಂಗ್ ಸಂಗತಿಗಳ ಬಗ್ಗೆ ಉಲ್ಲೇಖ
ಐಷಾರಾಮಿ ಬದುಕು ನಡೆಸುತ್ತಿದ್ದ ನಟ ದರ್ಶನ್ಗೆ ಸೆರೆವಾಸ ಸಂಕಟ ತಂದಿದೆ. ಜೈಲಿನಲ್ಲಿ ಈಗಾಗಲೇ 5 ದಿನ ಕಳೆದಿರುವ ದರ್ಶನ್ಗೆ ಇನ್ನೂ 9 ದಿನಗಳ ಕಾಲ ನ್ಯಾಯಾಂಗ ಬಂಧನ ಇದೆ. ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿ ನಟ ದರ್ಶನ್ ಮನ ಚಡಪಡಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ