Advertisment

ದರ್ಶನ್​ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ಏನು ನಷ್ಟ.. ಜೈಲು ಅಧಿಕಾರಿಗಳಿಗೆ ಏನು ಲಾಭ..?

author-image
Bheemappa
Updated On
ಪರಪ್ಪನ ಅಗ್ರಹಾರ to ಬಳ್ಳಾರಿ ಜೈಲು; ದಿಢೀರ್ ಮಾರ್ಗ ಬದಲಾಯಿಸಿದ ಪೊಲೀಸರು.. ಏನಾಯ್ತು?
Advertisment
  • ಒಂದೇ ಒಂದು ಫೋಟೋ ವೈರಲ್​ನಿಂದ ದರ್ಶನ್ ಜೈಲಿಗೆ ಶಿಫ್ಟ್​
  • ಬಳ್ಳಾರಿ ಜೈಲಿನ ವಾತಾವರಣ ಹೇಗಿದೆ, ದರ್ಶನ್ ಒಗ್ಗಿಕೊಳ್ತಾರಾ?
  • ಈಗಾಗಲೇ ದರ್ಶನ್​​ರನ್ನ ಬಳ್ಳಾರಿ ಜೈಲಿಗೆ ಕರೆದೊಯ್ಯಲಾಗುತ್ತಿದೆ

ಬಳ್ಳಾರಿ: ಕೋರ್ಟ್​ ಆದೇಶದಂತೆ ನಟ ದರ್ಶನ್​ರನ್ನ ಬಳ್ಳಾರಿ ಜೈಲಿಗೆ ಕಳುಹಿಸಲಾಗುತ್ತಿದೆ. ಒಂದೇ ಒಂದು ಫೋಟೋ ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅಧಿಕಾರಿಗಳು ಕೋರ್ಟ್​ಗೆ ಮನವಿ ಮಾಡಿದ್ದರು. ಅದರಂತೆ ಇಂದು ಬೆಳಗಿನ ಜಾವ ಪರಪ್ಪನ ಅಗ್ರಹಾರ ಜೈಲಿನಿಂದ ದರ್ಶನ್​ರನ್ನ ಬಳ್ಳಾರಿಗೆ ಕರೆದೊಯ್ಯಲಾಗುತ್ತಿದೆ. ದರ್ಶನ್ ಬಳ್ಳಾರಿ ಜೈಲು ಸೇರಿದರೆ ಕಾರಾಗೃಹ ಅಧಿಕಾರಿಗಳಿಗೆ ಏನು ಲಾಭ?.

Advertisment

ಇದನ್ನೂ ಓದಿ:ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?

ದರ್ಶನ್ ಇನ್ಮುಂದೆ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ವಿಸಿಟರ್ಸ್ ಸಂಖ್ಯೆಯಲ್ಲಿ ಇಳಿಕೆ ಕಾಣಬಹುದು. ಏಕೆಂದರೆ ಬೆಂಗಳೂರಿನಿಂದ ಹೋಗಿ ಬಳ್ಳಾರಿ ಜೈಲಿನಲ್ಲಿ ದರ್ಶನ್​ರನ್ನ ಭೇಟಿ ಮಾಡಲು ಕೆಲವರು ಹಿದೇಟು ಹಾಕಬಹುದು. ಆದ್ರೆ ಕುಟುಂಬಸ್ಥರು ಭೇಟಿ ಮಾಡುತ್ತಾರೆ. ದರ್ಶನ್ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇದ್ದಾಗ ಪದೇ ಪದೇ ಭೇಟಿ ನೀಡುತ್ತಿದ್ದ ಸೆಲೆಬ್ರಿಟಿಗಳು ಇನ್ಮುಂದೆ ಇದು ಕೂಡ ಕಡಿಮೆ ಆಗತ್ತದೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿ ದರ್ಶನ್ ಭೇಟಿಗೆ ಕೆಲವರು ತಿರಸ್ಕರಿಸಬಹುದು. ಇದೇ ಜೈಲಿನ ಅಧಿಕಾರಿಗೆ ಲಾಭವಾದಂತೆ ಆಗುತ್ತದೆ. ಇವೆಲ್ಲವೂ ಕಾರಾಗೃಹದ ಅಧಿಕಾರಿಗಳಿಗೆ ಹಾಗೂ ಪೊಲೀಸ್ರಿಗೆ ಸ್ವಲ್ಪ ಮಟ್ಟದಲ್ಲಿ ಒತ್ತಡ ಕಡಿಮೆ ಮಾಡಲಿವೆ.

ಇದನ್ನೂ ಓದಿ: ಭೀಕರ ಮಳೆಯಿಂದ 26 ಸಾವು.. ಮುಂದುವರೆದ ವರುಣಾರ್ಭಟ, 11 ಜಿಲ್ಲೆಗಳಿಗೆ ರೆಡ್​ ಅಲರ್ಟ್!

Advertisment

publive-image

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಿಂದ ಬಳ್ಳಾರಿಯ ಜೈಲಿನಲ್ಲಿರುವ ದರ್ಶನ್​ ಅವರ ಆರೋಗ್ಯದಲ್ಲಿ ಏರು ಪೇರು ಆಗಬಹುದು. ಅವರ ತೂಕದಲ್ಲಿ ಇಳಿಕೆ ಆದರೂ ಆಗಬಹುದು. ಅಲ್ಲಿನ ವಾತಾವರಣಕ್ಕೆ ಅವರು ಒಗ್ಗಿಕೊಳ್ಳುವುದು ಕಷ್ಟವಾಗುತ್ತದೆ. ಬಳ್ಳಾರಿ ಜೈಲಿನಲ್ಲಿ ಬೆಂಗಳೂರಿನ ಜೈಲಿನಂತೆ ವ್ಯವಸ್ಥೆಗಳು ಇಲ್ಲ. ಬೆಂಗಳೂರಿನಲ್ಲಿ ತಂಪಿನ ವಾತಾವರಣ ಇದ್ದರೆ ಅಲ್ಲಿ ಯಾವಾಗಲೂ ಬೆಚ್ಚಗಿನ ವಾತಾವರಣ ಇರುತ್ತದೆ. ಇದು ಅವರ ಮೇಲೆ ಪರಿಣಾಮ ಬೀರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment