/newsfirstlive-kannada/media/post_attachments/wp-content/uploads/2024/08/SIDDU-3-1.jpg)
ಕಳೆದ ಒಂದು ದಿನದ ಹಿಂದೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರದಲ್ಲಿದ್ದ ನಟ ದರ್ಶನ್ ವಿಡಿಯೋ ಕರೆ ವೈರಲ್​ ಆಗಿತ್ತು. ಜೈಲಿನ ಒಳಗಿದ್ದೇ ರೌಡಿಶೀಟರ್​ ಜೊತೆಗೆ ವಿಡಿಯೋ ಕರೆಯಲ್ಲಿ ಮಾತನಾಡಿರುವುದು ಬೆಳಕಿಗೆ ಬಂದಿತ್ತು. ಇದರ ಜೊತೆಗೆ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಫೋಟೋ ಕೂಡ ಹರಿದಾಡಿತ್ತು. ಈ ವಿಚಾರ ಸರ್ಕಾರ ಗಮನಕ್ಕೂ ಬಂದಂತೆ ತಕ್ಷಣವೇ ಸಿಎಂ ಸಿದ್ದರಾಮಯ್ಯನವರು ದರ್ಶನ್​ರನ್ನು ಬೇರೆ ಜೈಲಿಗೆ ಶಿಫ್ಟ್​ ಮಾಡಿ ಎಂದು ಸೂಚನೆ ನೀಡಿದ್ದರು. ಅದರಂತೆಯೇ ಇದೀಗ ದರ್ಶನ್​ ಬೇರೆ ಕಾರಾಗೃಹಕ್ಕೆ ಶಿಫ್ಟ್​​ ಮಾಡಲು ಸರ್ಕಾರ ನಿರ್ಧರಿಸಿದೆ.
ನ್ಯೂಸ್​​ಫಸ್ಟ್​ಗೆ ಲಭಿಸಿದ ಮಾಹಿತಿಯಂತೆ, ರೇಣುಕಾಸ್ವಾಮಿ ಕೊಲೆಯಲ್ಲಿ A2 ಆರೋಪಿಯಾಗಿರುವ ನಟ ದರ್ಶನರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡೋಕೆ ಸಿಎಂ ಸೂಚನೆ ನೀಡಿದ್ದಾರೆ. ಕೋರ್ಟ್ ಅನುಮತಿ ಪಡೆದು ಶಿಫ್ಟ್ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಶೀಘ್ರದಲ್ಲೇ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ ಶಿಫ್ಟ್​​ ಆಗಲಿದ್ದಾರೆ.
ಇದನ್ನೂ ಓದಿ: ರಚ್ಚು ಭೇಟಿ ದಚ್ಚುಗೆ ಫಜೀತಿ? ದರ್ಶನ್​ಗೆ ಕಾಡುತ್ತಿದೆಯಾ ಸ್ತ್ರೀ ಕಂಟಕ? ಫ್ಯಾನ್ಸ್​ ಬೇಸರ
ನ್ಯಾಯಾಲಯದ ಆದೇಶ ಪಡೆದು ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಮಾಡುವುದಾಗಿ ಪೊಲೀಸ್​ ಅಧಿಕಾರಿಗಳು ಸಿಎಂಗೆ ತಿಳಿಸಿದ್ದಾರೆ. ಬೆಳಗಾವಿಯ ಹಿಂಡಲಗಾ ಕಾರಾಗೃಹ ಬದಲಿಗೆ ಬಳ್ಳಾರಿ ಜೈಲ್ ಗೆ ಶಿಫ್ಟ್ ಮಾಡುವುದಾಗಿ ಸಿಎಂಗೆ ತಿಳಿಸಿದ್ದಾರೆ.
ಏನಿದು ಘಟನೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಕಳೆದ ಮೂರು ತಿಂಗಳಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಆದರೆ ಜೈಲಿನ ಒಳಗೆ ನಟನಿಗೆ ರಾಜಾತಿಥ್ಯ ನೀಡುತ್ತಿರುವ ಫೋಟೋಗಳು ಮತ್ತು ವಿಡಿಯೋ ಕರೆ ಮಾತನಾಡಿರುವ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕೈದಿಯೊಬ್ಬ ಜೈಲಿನ ಹೊರಗಿರುವ ವ್ಯಕ್ತಿಗೆ ವಿಡಿಯೋ ಕಾಲ್ ಮಾಡಿ, ದರ್ಶನ್ ಅವರಿಂದ ಹಾಯ್ ಹೇಳಿಸಿದ ವಿಡಿಯೋ ಕೂಡ ಹರಿದಾಡಿತ್ತು.
ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್! ಇಂದಿನಿಂದ ಎಣ್ಣೆ ಮೇಲಿನ ಬೆಲೆ ಶೇ.15-25ರಷ್ಟು ಇಳಿಕೆ ಸಾಧ್ಯತೆ
ಈ ಘಟನೆ ಮುನ್ನೆಲೆಗೆ ಬಂದ ಬೆನ್ನಲ್ಲೇ ಸರ್ಕಾರ ತನಿಖೆ ನಡೆಸಲು ಮುಂದಾಗಿದೆ. ಈಗಾಗಲೇ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜೈಲಿಗೆ ಸ್ಮಾರ್ಟ್​ಫೋನ್​, ಸಿಗರೇಟು ಹೇಗೆ ಬರುತ್ತದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us