ದುಬಾರಿಯಾಗಿದ್ದ ಮದ್ಯದ ಬೆಲೆ ಇಳಿಕೆಯಾಗಲು ಕಾರಣವೇನು?
ಮಧ್ಯಾಹ್ನದ ಹೊತ್ತಿಗೆ ದರ ಅಧಿಕೃತವಾಗೋ ಸಾಧ್ಯತೆ
ಸಿಎಂ ಸೂಚನೆ ಮೇರೆಗೆ ದರ ಪರಿಷ್ಕರಣೆ ಆದೇಶ
ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟಿದ್ದ ಮದ್ಯ ಪ್ರಿಯರಿಗೆ ಇಂದು ಗುಡ್ ನ್ಯೂಸ್ ಸಿಕ್ಕಲಿದೆ. ಇಂದಿನಿಂದ ದುಬಾರಿ ಮದ್ಯದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂದಿನಿಂದ ಪ್ರೀಮಿಯಂ ಮದ್ಯದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದ್ದು, ಶೇ.15- 25ರಷ್ಟು ಇಳಿಕೆಯಾಗಲಿದೆ ಎನ್ನಲಾಗುತ್ತಿದೆ. ಮಧ್ಯಾಹ್ನದ ಹೊತ್ತಿಗೆ ದರ ಅಧಿಕೃತವಾಗೋ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಎಂದು ಈಗಾಗಲೇ ಆದೇಶ ಹೊರಡಿಸಿದೆ. ಮದ್ಯದ ದರ ಇಳಿಕೆಯ ಜೊತೆಗೆ, ಅಬಕಾರಿ ಆದಾಯನ್ನ ಹೆಚ್ಚಿಸುವ ಸಲುವಾಗಿ ಈ ಸೂಚನೆ ಹೊರಡಿಸಲಾಗಿದೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್, ನಾಗ ಕುಚಿಕುಗಳು.. ಇಬ್ಬರ ಭೇಟಿ ನಿತ್ಯ ಹೇಗೆ ನಡೆಯುತ್ತಿದೆ..?
ಸಿಎಂ ಸೂಚನೆ ಮೇರೆಗೆ ದರ ಪರಿಷ್ಕರಣೆ ಆದೇಶ ಜಾರಿಗೆ ತರಲಾಗಿದೆ. ಪರಿಷ್ಕೃತ ದರದಂತೆ ಮದ್ಯದ ಸ್ಲ್ಯಾಬ್ ವಾರು ದರವನ್ನು ಸರ್ಕಾರ ಪರಿಷ್ಕರಿಸಿದೆ.
ಇದನ್ನೂ ಓದಿ: ಏನಿದು ಸೆಲ್ಯುಲರ್ ಜ್ಯಾಮಿಂಗ್? ಜೈಲಿನಲ್ಲಿ ಜಾಮರ್ ಇದೆಯಾ? ದರ್ಶನ್ ಕರೆ ಬರಲು ಹೇಗೆ ಸಾಧ್ಯ!
ಈಗಿರುವ 18 ಸ್ಲ್ಯಾಬ್ಗಳಲ್ಲಿ ವಿಧಿಸಲಾಗುತ್ತಿದ್ದ ಅಬಕಾರಿ ಸುಂಕವನ್ನು 16 ಸ್ಲ್ಯಾಬ್ಗಳಿಗೆ ಇಳಿಕೆ ಮಾಡಿ ಎಂದು ಆದೇಶ ಹೊರಡಿಸಲಾಗಿದೆ. ಅದಕ್ಕನುಗಣವಾಗಿ ಅಬಕಾರಿ ಸುಂಕವನ್ನು ಸರ್ಕಾರ ಪರಿಷ್ಕರಣೆ ಮಾಡಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಯಾಗೋ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ