/newsfirstlive-kannada/media/post_attachments/wp-content/uploads/2024/09/Darshan-Bellary-Jail-2.jpg)
ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​​ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​​ ಆಗಿ 16 ದಿನಗಳು ಕಳೆದಿವೆ. ಸದ್ಯ ವಿಚಾರಣಾಧೀನ ಕೈದಿಯಾಗಿ ಶಿಕ್ಷೆ ಅನುಭವಿಸುತ್ತಿರುವ ದರ್ಶನ್​​​ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಪದೇ ಪದೇ ನ್ಯಾಯಾಂಗ ಬಂಧನ ವಿಸ್ತರಣೆಯಿಂದಾಗಿ ಬಳಲಿ ಬೆಂಡಾಗಿದ್ದಾರೆ ಎನ್ನಲಾಗುತ್ತಿದೆ.
ಕೊಲೆ ಆರೋಪಿ ದರ್ಶನ್​ ಸೆ.17 ರಂದು ಬೇಲ್‌ಗೆ ಅರ್ಜಿ ಹಾಕಲಿದ್ದಾರೆ. ಅಂದು ನ್ಯಾಯಾಂಗ ಬಂಧನ ವಿಸ್ತರಣೆ ಆದರೆ ದರ್ಶನ್​​​ ಸಂಕಷ್ಟ ಹೆಚ್ಚಾಗಲಿದೆ. ಸದ್ಯ ಈ ವಿಚಾರವಾಗಿ ದರ್ಶನ್​​ ಕುಟುಂಬಸ್ಥರ ಬಳಿ ಸಲಹೆ ನೀಡಿದ್ದಾರಂತೆ. ಕೇಂದ್ರ ಕಾರಾಗೃಹ ಬದಲಾಗಿ ಜಿಲ್ಲಾ ಕಾರಾಗೃಹ ಶಿಫ್ಟ್ ಮಾಡುವಂತೆ ಕುಟುಂಬಸ್ಥರ ಬಳಿ ಹೇಳಿದ್ದಾರಂತೆ ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/09/darshan9.jpg)
ಜೈಲೂಟಕ್ಕೂ ದರ್ಶನ್ ಹೈರಾಣಾಗಿದ್ದು, ​ಕುಟುಂಬಸ್ಥರ ಭೇಟಿ ವೇಳೆ ಮನೆಯೂಟಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ತೂಕದ ಲೆಕ್ಕದಲ್ಲಿ ಕೊಡುತ್ತಿರೋ ಊಟ ಸಾಲುತ್ತಿಲ್ಲ ಅಂತ ವಕೀಲರ ಮುಂದೆ ದರ್ಶನ್ ಅಳಲು ತೋಡಿಕೊಂಡಿದ್ದಾರಂತೆ.
ದರ್ಶನ್ ನಿನ್ನೆಯಿಂದ ಅತಂಕಕ್ಕೆ ಒಳಗಾಗಿದ್ದು, ಸೆ. 17 ರಂದು ಬೇಲ್​ಗೆ ಅರ್ಜಿ ಹಾಕಲು ತಯಾರಿ ನಡೆಸಲಾಗುತ್ತಿದೆ. ಬೇಲ್ ಅರ್ಜಿ ರಿಜೆಕ್ಟ್ ಆದ್ರೆ ದರ್ಶನ್​ ಜಿಲ್ಲಾ ಕಾರಾಗೃಹ ಶಿಫ್ಟ್ ಆಗಲು ಮನವಿ ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us