newsfirstkannada.com

×

ಬರೀ 95 ರೂಪಾಯಿಗೆ OTT ಸೇವೆ! ಗ್ರಾಹಕರ ಮನಗೆದ್ದ ಅಗ್ಗದ ಬೆಲೆಯ ಬೆಸ್ಟ್​​ ಪ್ಲಾನ್​ಗಳಿವು

Share :

Published September 14, 2024 at 8:32am

    ಪ್ರಿಪೇಯ್ಡ್​​ ಯೋಜನೆಯಲ್ಲಿ OTT ಸೇವೆ ಆನಂದಿಸಿ

    ಕಡಿಮೆ ಬೆಲೆಯ ಮತ್ತು ಬೆಸ್ಟ್​​ ಓಟಿಟಿ ಸೇವೆಗಳಿವು

    95 ರೂಪಾಯಿಂದ ಪ್ರಾರಂಭವಾಗುತ್ತದೆ ಸೇವೆಗಳು

ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್​​ ಬಳಕೆದಾರರಿಗೆ ರಿಚಾರ್ಜ್​ ಯೋಜನೆಗಳನ್ನು ಪರಿಚಯಿಸುವುದರ ಜೊತೆಗೆ ಕಾಂಪ್ಲಿಮೆಂಟರಿಯಾಗಿ ಓಟಿಟಿ ಚಂದಾದಾರಿಕೆಯನ್ನು ನೀಡುತ್ತಿವೆ. ಅದರಲ್ಲೂ ಏರ್​ಟೆಲ್ (Airtel)​, ವೊಡಾಫೋನ್​​ ಐಡಿಯಾ (Vodafone Idea), ಜಿಯೋ (Jio) ತನ್ನ ಗ್ರಾಹಕರಿಗಾಗಿ ಈ ಸೇವೆಯ ಪ್ರಯೋಜನವನ್ನು ಒದಗಿಸುತ್ತಾ ಬಂದಿದೆ. ಬಹುತೇಕರು ದುಬಾರಿ ಯೋಜನೆಗಳ ಮೂಲಕ ಓಟಿಟಿ ಸೇವೆಯನ್ನು ಆನಂದಿಸುತ್ತಾರೆ. ಆದರೆ ಅದಕ್ಕಿಂತಲೂ ಕಡಿಮೆ ಬೆಲೆಗೆ ಉಚಿತ ಓಟಿಟಿ ಪ್ರಯೋಜನವನ್ನು ಪಡೆಯಬಹುದಾಗಿದೆ. 95 ರೂಪಾಯಿ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ. ಅಂದಹಾಗೆಯೇ ಕಡಿಮೆ ಬೆಲೆಗೆ ಸಿಗುವ ವಿವಿಧ ಕಂಪನಿಗಳ ಓಟಿಟಿ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಏರ್​ಟೆಲ್​

ಜನಪ್ರಿಯ ಏರ್​​ಟೆಲ್​​ 149 ರೂಪಾಯಿ ಯೋಜನೆಯನ್ನು ಅಳವಡಿಸುವ ಮೂಲಕ ಓಟಿಟಿ ಪ್ರಯೋಜನವನ್ನು ನೀಡುತ್ತಿದೆ. ಇದರ ಮೂಲಕ ತಿಂಗಳಿಗೆ 22ಕ್ಕೂ ಹೆಚ್ಚು ಓಟಿಟಿ ಸೇವೆ ಪಡೆಯಬಹುದಾಗಿದೆ.

ಇದನ್ನೂ ಓದಿ: ಆಫರ್​​ ಬೆಲೆಗೆ iPhone 16 ಖರೀದಿಸಿ! ಹಳೇ ಫೋನ್​ ಕೊಟ್ಟು ಹೊಸ ಐಫೋನ್​ ಕೊಂಡುಕೊಳ್ಳಿ!

ಅಂದಹಾಗೆಯೇ ಈ ಪ್ಲಾನ್​ ಅಳವಡಿಸಿಕೊಂಡರೆ 1GB ಹೆಚ್ಚುವರಿ ಡೇಟಾ ಸಿಗುತ್ತದೆ. ಆದರೆ ಇದರಲ್ಲಿ ಯಾವುದೇ ಕರೆ ಅಥವಾ ಎಸ್​​ಎಮ್​ಎಸ್​​ ಪ್ರಯೋಜನಗಳಿರುವುದಿಲ್ಲ. ಇದಲ್ಲದೆ, ಎಕ್ಸ್​​​ಸ್ಟ್ರೀಮ್​​ ಪ್ಲೇ ಪ್ರೀಮಿಯಂ ಚಂದಾದಾರಿಕೆಯನ್ನು 30 ದಿನಗಳವರೆಗೆ ನೀಡುತ್ತದೆ.

ಜಿಯೋ

ರಿಲಯನ್ಸ್​ ಜಿಯೋದ 175 ರೂಪಾಯಿ ಯೋಜನೆಯನ್ನ ಅಳವಡಿಸಿಕೊಂಡರೆ 10 ಓಟಿಟಿ ಸೇವೆಯನ್ನು ಪಡೆಯಬಹುದಾಗಿದೆ. ಆದರೆ ಈ ಯೋಜನೆ 28 ದಿನಗಳ ಮಾನ್ಯತೆ ಪಡೆದಿದೆ. 10GB ಡೇಟಾ ಒದಗಿಸುತ್ತದೆ. ಇದಲ್ಲದೆ, ಜಿಯೋ ಸಿನಿಮಾ ಪ್ರೀಮಿಯಂ, ಜಿಯೋ ಟಿವಿ ಅಪ್ಲಿಕೇಶನ್​ ಮೂಲಕ ಓಟಿಟಿ ಸೇವೆ ವೀಕ್ಷಿಸುವ ಅವಕಾಶವಿದೆ.

ಇದನ್ನೂ ಓದಿ: Amazon ಗ್ರೇಟ್​​ ಇಂಡಿಯನ್​​​ ಫೆಸ್ಟಿವಲ್​ ಸೇಲ್​.. ಈ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ

ವೊಡಾಫೋನ್​​ ಐಡಿಯಾ

ವೊಡಾಫೋನ್​​ ಐಡಿಯಾ 95 ರೂಪಾಯಿಯ ಪ್ಲಾನ್​ ರಿಚಾರ್ಜ್​ ಮಾಡಿದರೆ 4GB ಡೇಟಾ ಸಿಗುತ್ತದೆ. 14 ದಿನಗಳ ಮಾನ್ಯತೆ ಹೊಂದಿದೆ. ಗ್ರಾಹಕರು 28 ದಿನಗಳವರೆಗೆ ಸೋನಿಲೈವ್​ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಅಂದಹಾಗೆಯೇ ಈ ಪ್ರೀಮಿಯಂ ಪ್ಯಾಕ್​ನಲ್ಲಿ ಯಾವುದೇ ಕರೆ ಅಥವಾ SMS​​ ಪ್ರಯೋಜನ ಸಿಗುವುದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೀ 95 ರೂಪಾಯಿಗೆ OTT ಸೇವೆ! ಗ್ರಾಹಕರ ಮನಗೆದ್ದ ಅಗ್ಗದ ಬೆಲೆಯ ಬೆಸ್ಟ್​​ ಪ್ಲಾನ್​ಗಳಿವು

https://newsfirstlive.com/wp-content/uploads/2024/09/Smartphone-Telecom.jpg

Load More