Devara release; ದೇಶದಲ್ಲಿ Jr NTR ಅಭಿಮಾನಿಗಳಿಗೆ ಹಬ್ಬ.. ಹೆಂಗಿದೆ ಸಂಭ್ರಮ..? ವಿಡಿಯೋ

author-image
Ganesh
Updated On
Devara release; ದೇಶದಲ್ಲಿ Jr NTR ಅಭಿಮಾನಿಗಳಿಗೆ ಹಬ್ಬ.. ಹೆಂಗಿದೆ ಸಂಭ್ರಮ..? ವಿಡಿಯೋ
Advertisment
  • ಇಂದಿನಿಂದ ದೇವರ ಅಬ್ಬರ ಶುರುವಾಗಿದೆ, ಅಭಿಮಾನಿಗಳು ಖುಷ್
  • 6 ವರ್ಷಗಳ ನಂತರ Jr. ಎನ್​ಟಿಆರ್​ ನಟನೆಯ ಸೋಲೋ ಫಿಲ್ಮ್
  • ಹೈದರಾಬಾದ್​ನಲ್ಲಿ ಮಧ್ಯರಾತ್ರಿ ಪೊಲೀಸರಿಂದ ಲಾಠಿ ಏಟು

ಮ್ಯಾನ್ ಆಫ್ ಮಾಸ್ ಜ್ಯೂನಿಯರ್ ಎನ್​ಟಿಆರ್ ಅಭಿನಯದ ದೇವರ ಚಿತ್ರ ಇಂದು ತೆರೆಗೆ ಅಪ್ಪಳಿಸಿದೆ. ಆರ್‌ಆರ್‌ಆರ್‌ ನಂತರ ಜ್ಯೂನಿಯರ್ ಎನ್‌ಟಿಆರ್‌ ಸೋಲೋ ಚಿತ್ರ ಇದಾಗಿದೆ. ಜ್ಯೂನಿಯರ್ ಎನ್​ಟಿಆರ್​ಗೆ ಜೋಡಿಯಾಗಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಟಿಸಿದ್ದಾರೆ.

ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ದೊಡ್ಡಬ್ಬ ಮಾಡ್ತಿದ್ದಾರೆ. ಹೈದರಾಬಾದ್​ನ ಆರ್​ಟಿಸಿ ಕ್ರಾಸ್ ರಸ್ತೆಯಲ್ಲಿ ಜ್ಯೂನಿಯರ್ ಎನ್​ಟಿಆರ್ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ. ಮಧ್ಯರಾತ್ರಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸುದರ್ಶನ್ ಥಿಯೇಟರ್​ಗೆ ಬಂದಿದ್ದರು.

ಇದನ್ನೂ ಓದಿ:ಇಂದಿನಿಂದ ದೇಶಾದ್ಯಂತ ದೇವರ ಅಬ್ಬರ; ಜೂ. ಎನ್​ಟಿಆರ್​​ಗೆ ಅಗ್ನಿ ಪರೀಕ್ಷೆ..!

ಅಭಿಮಾನಿಗಳು ಜ್ಯೂನಿಯರ್ ಎನ್​ಟಿಆರ್ ಅವರ ಬೃಹತ್ ಕಟೌಟ್ ವ್ಯವಸ್ಥೆ ಮಾಡಿದ್ದರು. ಹಾಲಿನ ಅಭಿಷೇಕ, ಪುಷ್ಪಾಭಿಷೇಕ ನಡೆಯುತ್ತಿತ್ತು. ರಾತ್ರಿ ಸುಮಾರು ಒಂದು ಗಂಟೆ ವೇಳೆಗೆ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರಿಂದ ಘರ್ಷಣೆ ಆಗಿದೆ. ಆಗ ಪೊಲೀಸರು ಜನರನ್ನು ಒಂದು ಕಡೆಯಿಂದ ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ತೆಲುಗು ರಾಜ್ಯಗಳಲ್ಲಷ್ಟೇ ಅಲ್ಲ, ದೇಶಾದ್ಯಂತ ಎನ್​ಟಿಆರ್ ಅಭಿಮಾನಿಗಳು ದೇವರ ಸಿನಿಮಾವನ್ನು ಸಂಭ್ರಮಿಸುತ್ತಿದ್ದಾರೆ. ಕರ್ನಾಟಕ ಸೇರಿದಂದ ಬೇರೆ ರಾಜ್ಯಗಳಲ್ಲೂ ಎನ್‌ಟಿಆರ್‌ ಅವರ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿವೆ.

ಇದನ್ನೂ ಓದಿ:ದೇವರ ಪೂಜೆಗೆ ಬಳಸುವ ಹಿತ್ತಾಳೆ ಪಾತ್ರೆ ಜಿಡ್ಡನ್ನು ತೆಗೆಯುವುದು ಹೇಗೆ? ಇಲ್ಲಿವೆ ಸುಲಭ ಟ್ರಿಕ್ಸ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment