newsfirstkannada.com

×

VIDEO: ಹಸ್ತಲಾಘವ ಮಾಡದೆ ಡ್ರೆಸ್ಸಿಂಗ್​ ರೂಂ ಸೇರಿದ ಮಾಹಿ.. ಹುಡುಕಿಕೊಂಡು ಹೋದ ವಿರಾಟ್​!

Share :

Published May 19, 2024 at 3:06pm

Update May 19, 2024 at 3:25pm

    ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದ ಧೋನಿ

    ನೇರವಾಗಿ ಡ್ರೆಸ್ಸಿಂಗ್​ ರೂಂಗೆ ಹೋಗಿ ಕುಳಿತು ಬಿಟ್ಟ ಮಾಹಿ

    ಮಾಹಿ ಎಲ್ಲಿ? ಥಾಲನನ್ನು ಹುಡುಕಿಕೊಂಡು ಹೊರಟ ವಿರಾಟ್​

ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ ತಂಡ ಸಿಎಸ್​​ಕೆ ವಿರುದ್ಧ 27 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಪಂದ್ಯ ಗೆದ್ದ ಬಳಿಕ ಆರ್​ಸಿಬಿ ಪ್ಲೇಯರ್ಸ್​ ಸಂತಸದಲ್ಲಿ ಕುಣಿದಾಡಿದರೆ, ಅತ್ತ ಚೆನ್ನೈ ಪ್ಲೇಯರ್ಸ್​ ಅವರಿಗೆ ಹಸ್ತಲಾಘವ ಮಾಡಲು ಸಾಲಾಗಿ ನಿಂತಿದ್ದರು. ಆದರೆ ಈ ವೇಳೆ ಕೋಪಗೊಂಡ ಮಾಹಿ ಆರ್​ಸಿಬಿ ಆಟಗಾರರಿಗೆ ಹಸ್ತಲಾಘವ ಮಾಡದೆ ನೇರವಾಗಿ ಡ್ರೆಸ್ಸಿಂಗ್​ ರೂಂ ಸೇರಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೀಗ ಧೋನಿ ನಡತೆಯ ಬಗ್ಗೆ ಬಗೆ ಬಗೆಯ ಕಾಮೆಂಟ್​ ಬರುತ್ತಿದೆ.

ಆರ್​ಸಿಬಿ ತಂಡದ ಆಟಗಾರರು ಗೆದ್ದ ಖುಷಿಯಲ್ಲಿ ಸಂಭ್ರಮಿಸುತ್ತಿದ್ದರು. ಆದರೆ ಇತ್ತ ಅವರಿಗೆ ಅಭಿನಂದಿಸಲು ಸಿಎಸ್​​ಕೆ ಆಟಗಾರರು ಸರದಿಯಲ್ಲಿ ನಿಂತಿದ್ದರು. ಆದರೆ ಫಾಫ್ ತಂಡ ಬಾರದೆ ಇರೋದನ್ನು ಕಂಡು ಧೋನಿ ನೇರವಾಗಿ ಡ್ರೆಸ್ಸಿಂಗ್​ ರೂಂನತ್ತ ಸಾಗಿದ್ದಾರೆ. ಈ ವೇಳೆ ಆರ್​ಸಿಬಿ ಕೋಚ್​ಗಳಿಗೆ ಹಸ್ತಲಾಘವ ಮಾಡುತ್ತಾ ಹೋಗಿದ್ದಾರೆ.

ಧೋನಿಯನ್ನು ಹುಡುಕಾಡಿದ ಕೊಹ್ಲಿ

ಹಸ್ತಲಾಘವ ಸಮಯದಲ್ಲಿ ಧೋನಿ ಕಾಣಿಸದೇ ಇರುವುದನ್ನು ಕಂಡ ವಿರಾಟ್​ ಕೊಹ್ಲಿ ನೇರವಾಗಿ ಅವರ ಡ್ರೆಸ್ಸಿಂಗ್​ ರೂಂಗೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಮಾಹಿಯನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಆ ದೃಶ್ಯ ಕೂಡ ವೈರಲ್​ ಆಗಿದೆ.

ಇದನ್ನೂ ಓದಿ: CSK ತಂಡದಿಂದ ಧೋನಿಯನ್ನ ಕೈಬಿಡಬೇಕು, ಆವಾಗ ದೊಡ್ಡ ಮೊತ್ತದ ಹಣ ಉಳಿಯುತ್ತದೆ: ಇರ್ಫಾನ್​ ಪಠಾಣ್​

ಸದ್ಯ ಆರ್​ಸಿಬಿ ಮತ್ತು ಧೋನಿ ವರ್ತನೆ ಬಗ್ಗೆ ಪರ-ವಿರೋಧ ಕಾಮೆಂಟ್​ಗಳು ಬರುತ್ತಿವೆ. ಕೆಲವರು ಧೋನಿಯನ್ನು ದೂರಿದರೆ, ಇನ್ನು ಕೆಲವರು ಆರ್​ಸಿಬಿ ಆಟಗಾರರನ್ನು ದೂರುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಹಸ್ತಲಾಘವ ಮಾಡದೆ ಡ್ರೆಸ್ಸಿಂಗ್​ ರೂಂ ಸೇರಿದ ಮಾಹಿ.. ಹುಡುಕಿಕೊಂಡು ಹೋದ ವಿರಾಟ್​!

https://newsfirstlive.com/wp-content/uploads/2024/05/Dhoni-6-1.jpg

Load More