newsfirstkannada.com

ಹಾಸನದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಗೆಲ್ತಾರಾ? ಚುನಾವಣೆಯಲ್ಲಿ ಗೆದ್ರೆ ಮುಂದೇನಾಗುತ್ತೆ?

Share :

Published June 2, 2024 at 9:34pm

  ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲ್ಲೋ ಬಗ್ಗೆ ಸಮೀಕ್ಷೆಗಳು ಹೇಳಿದ್ದೇನು?

  ಕರ್ನಾಟಕದಲ್ಲಿ ದಳಕ್ಕೆ ಕನಿಷ್ಠ 2 ಸ್ಥಾನ ಫಿಕ್ಸ್ ಎಂದ ಚುನಾವಣಾ ಸಮೀಕ್ಷೆ

  ಅಶ್ಲೀಲ ವಿಡಿಯೋ ಆರೋಪದ ಸುಳಿಯಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ

ಅಶ್ಲೀಲ ವಿಡಿಯೋ ಆರೋಪ, ಪೆನ್‌ಡ್ರೈವ್‌ ಹಗರಣದಿಂದ ಯಾರು ದೇಶ ಬಿಟ್ಟು ಹೋಗಿದ್ರೋ ಯಾರು ಇದೀಗ ಎಸ್‌ಐಟಿ ಕಸ್ಟಡಿಯಲ್ಲಿದ್ದಾರೋ? ಅವರಿಗೆ ಮತದಾರ ಜೈ ಅಂದಿದ್ದಾನಂತೆ. ಹಾಸನದ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಗೆಲ್ತಾರಂತೆ.

ಅತ್ಯಾಚಾರ ಆರೋಪ.. ಪ್ರಜ್ವಲ್‌ ರೇವಣ್ಣಗೆ ಬಹುಪರಾಕ್?
ಹಾಸನದಲ್ಲಿ ಪ್ರಜ್ವಲ್ ಗೆಲ್ತಾರೆ ಅಂತ ಸಮೀಕ್ಷೆಗಳ ಭವಿಷ್ಯ!

ಇದನ್ನೂ ಓದಿ: BREAKING: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ 

ಲೋಕಸಭಾ ಚುನಾವಣೆಗೆ ಮತದಾನದ ಸಮಯ ಅಷ್ಟರಲ್ಲೇ ಹಾಸನದಲ್ಲಿ ಪ್ರಜ್ವಲ್ ಪೆನ್‌ಡ್ರೈವ್ ಪ್ರಸಂಗ ಸದ್ದು ಮಾಡಿತ್ತು. ಆದ್ರೆ, ಅಷ್ಟರಲ್ಲೇ ಮತದಾನವೂ ಮುಗಿದಾಗಿತ್ತು. ಬಳಿಕ ಎಲ್ಲೆಡೆ ಪೆನ್‌ಡ್ರೈವ್ ಪುರಾಣ ರಿವೀಲ್ ಆಗಿತ್ತು. ಇದೆಲ್ಲದರ ಮಧ್ಯೆ ಅಶ್ಲೀಲದ ಆರೋಪ ಗೊತ್ತಿದ್ದೋ? ಗೊತ್ತಿಲ್ಲದೆಯೋ? ಹಾಸನ ಮತದಾರ ಪ್ರಜ್ವಲ್ ರೇವಣ್ಣನನ್ನೇ ಗೆಲ್ಲಿಸಿದ್ದಾರಂತೆ. ಅಶ್ಲೀಲ ಆರೋಪದ ಸುಳಿಯಲ್ಲಿ ಸಿಲುಕಿದ್ರೂ ಪ್ರಜ್ವಲ್ ರೇವಣ್ಣ ಈ ಬಾರಿ ಲೋಕಸಭಾ ಎಲೆಕ್ಷನ್‌ನಲ್ಲಿ ಗೆಲ್ತಾರೆ ಅಂತ ಇಂಡಿಯಾ ಟುಡೇ-ಆ್ಯಕ್ಸಿಸ್ ಮೈ ಇಂಡಿಯಾ ಸರ್ವೇ ಹೇಳಿದೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪೆನ್‌ಡ್ರೈವ್ ಆರೋಪಿ ಜಯಭೇರಿ ಬಾರಿಸ್ತಾರೆ ಅಂತ ಸಮೀಕ್ಷೆ ಭವಿಷ್ಯ ನುಡಿದಿದೆ.

ದಳಕ್ಕೆ ಕನಿಷ್ಠ 2 ಸ್ಥಾನ ಫಿಕ್ಸ್ ಎಂದ ಚುನಾವಣಾ ಸಮೀಕ್ಷೆ
ಮೂರೂ ಸ್ಥಾನಗಳನ್ನ ಗೆಲ್ಲುವ ಬಗ್ಗೆ ದಳಪತಿಗಳ ನಿರೀಕ್ಷೆ

ನಿನ್ನೆ ಬಂದಿರೋ ಎಕ್ಸಿಟ್‌ ಪೋಲ್‌ ಎನ್‌ಡಿಎಗೆ ಬಹುಮತ ಬರುತ್ತೆ ಅಂತ ಹೇಳ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಮೈತ್ರಿ ಪಕ್ಷ ಜೆಡಿಎಸ್‌ಗೆ ಕನಿಷ್ಟ 2 ಸ್ಥಾನ ಅಂತ ಕೆಲ ಸರ್ವೇಗಳು ಹೇಳ್ತಿದ್ರೆ, ಮತ್ತಷ್ಟು ಸರ್ವೇಗಳು 3ಕ್ಕೆ ಮೂರು ಫಿಕ್ಸ್ ಅಂತ ಭವಿಷ್ಯ ನುಡಿದಿವೆ. ಈ ಮಧ್ಯೆ ಪ್ರಜ್ವಲ್ ಕೇಸ್‌ನಿಂದ ಕಂಗಾಲಾಗಿದ್ದ ಜೆಡಿಎಸ್‌ನಲ್ಲಿ ಉತ್ಸಾಹ ಗರಿಗೆದರಿದೆ. ಎನ್‌ಡಿಎ ಅಧಿಕಾರದ ಗದ್ದುಗೆ ಏರಿದ್ರೆ ಹೆಚ್‌.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗುವ ನಿರೀಕ್ಷೆ ಚಿಗುರೊಡೆದಿದೆ. ಇನ್ನೂ ಮೂರೂ ಕ್ಷೇತ್ರದಲ್ಲೂ ಜೆಡಿಎಸ್‌ ಗೆಲ್ಲುತ್ತೆ ಅಂತ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 3ನೇ ದಿನವೂ ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್‌ಗೆ ಫುಲ್‌ ಡ್ರಿಲ್; ತಬ್ಬಿಬ್ಬುಗೊಂಡ ಹಾಸನ MP; ಬಾಯ್ಬಿಟ್ಟಿದ್ದೇನು? 

ಪ್ರಜ್ವಲ್‌ಗೆ 2 ವರ್ಷ ಶಿಕ್ಷೆಯಾದಲ್ಲಿ ಮಾತ್ರ ಸಂಸದ ಸ್ಥಾನಕ್ಕೆ ಕುತ್ತು!
ಪ್ರಜ್ವಲ್ ಗೆಲ್ತಾರೆ ಅಂತ ಸಮೀಕ್ಷೆ ಏನೋ ಹೇಳ್ತಿವೆ. ಆದ್ರೆ, ಗೆದ್ರೂ ಸಂಕಷ್ಟ ತಪ್ಪಿದ್ದಲ್ಲ. ಅದೇನಂದ್ರೆ ಅತ್ಯಾಚಾರ ಕೇಸ್‌ನಲ್ಲಿ ಒಂದು ವೇಳೆ 2 ವರ್ಷ ಶಿಕ್ಷೆಯಾದಲ್ಲಿ ಪ್ರಜ್ವಲ್ ರೇವಣ್ಣರ ಸಂಸದ ಸ್ಥಾನ ಹೋಗಲಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಸುಳಿವು ಕೊಟ್ಟಿದ್ದಾರೆ.

ಸಮೀಕ್ಷೆಗಳೇನೋ ಪ್ರಜ್ವಲ್ ರೇವಣ್ಣ ಗೆಲ್ತಾರೆ ಅಂತ ಹೇಳುತ್ತಿವೆ. ಹಾಗಂತ ಇದೇ ಫೈನಲ್ ಅಂತ ಏನಿಲ್ಲ. ಇನ್ನೂ ಜೂನ್ 4ಕ್ಕೆ ಲೋಕಸಭಾ ಚುನಾವಣಾ ಫಲಿತಾಂಶ ಬರಲಿದ್ದು, ಅಲ್ಲಿವರೆಗೂ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಾ ಅಸಲಿ ಭವಿಷ್ಯಕ್ಕಾಗಿ ಕಾಯಲೇಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಸನದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಗೆಲ್ತಾರಾ? ಚುನಾವಣೆಯಲ್ಲಿ ಗೆದ್ರೆ ಮುಂದೇನಾಗುತ್ತೆ?

https://newsfirstlive.com/wp-content/uploads/2024/04/Hassan-Hd-Devegowda-1.jpg

Load More