newsfirstkannada.com

ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

Share :

Published April 17, 2024 at 1:57pm

    ವಿಶ್ವಕಪ್​ ಆಡೋ ಅವಕಾಶ ಯಾರಿಗೆ ಸಿಗುತ್ತದೆ?

    ವಿಶ್ವಕಪ್​ ಸೆಲೆಕ್ಷನ್​ ರೇಸ್​ಗೆ ಧುಮುಕಿದ ದಿನೇಶ್ ಕಾರ್ತಿಕ್

    ಬ್ಯಾಕ್​ ಅಪ್​ ವಿಕೆಟ್​ ಕೀಪರ್​ ಆಗಿ ಸ್ಥಾನ ಸಿಕ್ಕೇ ಸಿಗುತ್ತಾ..?

ಐಪಿಎಲ್​ ಟೂರ್ನಿಯ ನಡುವೆ ವಿಶ್ವಕಪ್​ ಟೂರ್ನಿಯ ಸದ್ದು ಜೋರಾಗಿದೆ. ವಿಶ್ವಕಪ್​ ಆಡೋ ಅವಕಾಶ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಹೆಚ್ಚಾಗ್ತಿದೆ. ಆರ್​ಸಿಬಿಯ ಫಿನಿಷರ್​ ದಿನೇಶ್​ ಕಾರ್ತಿಕ್​ ಇದೀಗ ವಿಶ್ವಕಪ್​ ಸೆಲೆಕ್ಷನ್​ ರೇಸ್​ಗೆ ಧುಮುಕಿದ್ದಾರೆ. 38 ವರ್ಷದ ಕಾರ್ತಿಕ್​ಗೆ ಅದೃಷ್ಟದ ಬಾಗಿಲು ತೆರೆಯುತ್ತಾ?

ಐಪಿಎಲ್​ ಟೂರ್ನಿಯಲ್ಲಿ ಭಾರತೀಯ ಆಟಗಾರರ ಅಬ್ಬರ ಜೋರಾಗಿದೆ. ಪೈಪೋಟಿಗೆ ಬಿದ್ದವರಂತೆ ಆಟಗಾರರು ಪರ್ಫಾಮ್​ ಮಾಡ್ತಿದ್ದು, ಟೀಮ್​ ಇಂಡಿಯಾ ಸೆಲೆಕ್ಟರ್ಸ್​​ಗೆ ಹೊಸ ಹೆಡ್ಡೇಕ್​ ಶುರುವಾಗಿದೆ. ಮುಂಬರುವ ವಿಶ್ವಕಪ್​​ ಟೂರ್ನಿಗೆ ಯಾರನ್ನ ಸೆಲೆಕ್ಟ್ ಮಾಡೋದು, ಯಾರನ್ನ ಬಿಡೋದು ಅನ್ನೋ ಗೊಂದಲ ಶುರುವಾಗಿದೆ. ಆರ್​​​ಸಿಬಿಯ ದಿನೇಶ್​ ಕಾರ್ತಿಕ್​​ ಈ ಆಯ್ಕೆ ಕಗ್ಗಂಟನ್ನ ಇನ್ನಷ್ಟು ಹೆಚ್ಚಿಸಿದ್ದಾರೆ.

ಇದನ್ನೂ ಓದಿ:ಸೋರುವ ಬಿಡಾರ, ನೆನೆದು ಹೋಗ್ತಿದ್ದ ಪುಸ್ತಕಗಳು.. ಛಲ ಬಿಡದೇ UPSC ಬೆನ್ನೇರಿ ಸಾಧಿಸಿದ ಛಲಗಾರ..!

ಐಪಿಎಲ್​ ಅಖಾಡದಲ್ಲಿ ಧೂಳೆಬ್ಬಿಸಿದ ಕಾರ್ತಿಕ್​
ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯಲ್ಲಿ ದಿನೇಶ್​ ಕಾರ್ತಿಕ್​ ಹಂಗಾಮ ಸೃಷ್ಟಿಸಿದ್ದಾರೆ. 38 ವರ್ಷದ ಡಿಕೆ ಬಾಸ್​ ಆಟದ ಮುಂದೆ ಯಂಗ್​​ಸ್ಟರ್ಸ್​​ಗಳು ಕೂಡ ಕಳೆದುಹೋಗಿದ್ದಾರೆ. ಕಿಂಚಿತ್ತೂ ಹಿಂಜರಿಕೆ ಇಲ್ಲದೇ ಬ್ಯಾಟ್​ ಬೀಸ್ತಿರುವ ದಿನೇಶ್​ ಕಾರ್ತಿಕ್ ಕ್ಲಾಸ್ ಅಂಡ್ ಮಾಸ್​ ಆಟಕ್ಕೆ ಎಲ್ರೂ ಕಳೆದು ಹೋಗಿದ್ದಾರೆ. ಬೌಂಡರಿ-ಸಿಕ್ಸರ್​​ಗಳ ಸಲೀಸಾಗಿ ಬಾರಿಸ್ತಿರೋ ಶೈಲಿಗೆ ಎಲ್ರೂ ಬೆರಗಾಗಿದ್ದಾರೆ.

ವಿಶ್ವಕಪ್​ ರೇಸ್​​ಗೆ ಡಿಕೆ ಬಾಸ್​ ರಾಯಲ್​ ಎಂಟ್ರಿ
ಐಪಿಎಲ್​ ಅಖಾಡದಲ್ಲಿ ಧೂಳೆಬ್ಬಿಸಿರೋ ದಿನೇಶ್​ ಕಾರ್ತಿಕ್​ ಇದೀಗ ವಿಶ್ವಕಪ್​ ಸೆಲೆಕ್ಷನ್​ ರೇಸ್​​ಗೆ ಧುಮುಕಿದ್ದಾರೆ. ಜೂನ್​ನಲ್ಲಿ ನಡೆಯೋ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳೋ ರೇಸ್​​ನಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿದ್ದಾರೆ. ಫಿನಿಷರ್​ ಸ್ಲಾಟ್​ನಲ್ಲಿ ಡಿಕೆ ಬಾಸ್​ ಮಾಡ್ತಿರುವ ಮೋಡಿ ಹಂಗಿದೆ.

ಇದನ್ನೂ ಓದಿ:ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!

ಐಪಿಎಲ್​ನಲ್ಲಿ ದಿನೇಶ್​ ಕಾರ್ತಿಕ್​
ಈ ಸೀಸನ್​ ಐಪಿಎಲ್​ನಲ್ಲಿ 6 ಇನ್ನಿಂಗ್ಸ್​ಗಳನ್ನಾಡಿರುವ ಕಾರ್ತಿಕ್​, 75.33ರ ಸರಾಸರಿಯಲ್ಲಿ 226 ರನ್​ ಸಿಡಿಸಿದ್ದಾರೆ. ಬರೋಬ್ಬರಿ 205.45ರ ಸ್ಟ್ರೈಕ್​​ರೇಟ್​​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಸದ್ಯಕ್ಕಂತೂ ಟೀಮ್​ ಇಂಡಿಯಾದ ವಿಶ್ವಕಪ್​ ತಂಡದಲ್ಲಿ ಫಿನಿಷರ್​ ಸ್ಥಾನಕ್ಕೆ ದಿನೇಶ್​ ಕಾರ್ತಿಕ್​ ಪರ್ಫೆಕ್ಟ್​ ಆಯ್ಕೆಯಾಗಿದ್ದಾರೆ. ಐಪಿಎಲ್​ನಲ್ಲಿ ಡೆತ್​ ಓವರ್​​ಗಳಲ್ಲಿ ಬೌಲರ್​​ಗಳ ಮೇಲೆ ಸವಾರಿ ಮಾಡ್ತಿರುವ ಕಾರ್ತಿಕ್​ ಬರೋಬ್ಬರಿ 205.45ರ ಸ್ಟ್ರೈಕ್​ರೇಟ್​ನಲ್ಲಿ ರನ್​ಗಳಿಸುತ್ತ ಇದ್ದಾರೆ. ಮಿಡಲ್​ ಓವರ್​ನಲ್ಲಿ ಕಣಕ್ಕಿಳಿದ್ರೂ ಕೂಡ ಒತ್ತಡವನ್ನ ಸಲೀಸಾಗಿ ನಿಭಾಯಿಸ್ತಾ ಇದ್ದಾರೆ. ಫಿನಿಷರ್​​ ಸ್ಥಾನದ ಕಂಟೆಡರ್​ಗಳಾಗಿದ್ದ ಉಳಿದ ಆಟಗಾರರು ಈ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ.

ರಿಂಕು ಸಿಂಗ್​, ರಿಷಭ್​ ಪಂತ್ ಜೊತೆಗಿನ​ ಪೈಪೋಟಿಯಲ್ಲಿ ಗೆಲ್ತಾರಾ?
ಟೀಮ್​ ಇಂಡಿಯಾ ಫಿನಿಷರ್​ ಸ್ಲಾಟ್​ಗೆ ಪೈಪೋಟಿ ಏರ್ಪಟ್ಟಿರೋದು ರಿಂಕು ಸಿಂಗ್​, ರಿಷಭ್​ ಪಂತ್​ ಹಾಗೂ ದಿನೇಶ್​ ಕಾರ್ತಿಕ್​ ನಡುವೆ. ರಿಂಕು ಸಿಂಗ್​ ಈ ಐಪಿಎಲ್​ನಲ್ಲಿ ವಾವ್ಹ್​ ಅನ್ನುವಂತಹ ಪರ್ಫಾಮೆನ್ಸ್​ ನೀಡಿಲ್ಲ. ಪಂತ್​ ಇನ್​​ಕನ್ಸಿಸ್ಟೆನ್ಸಿ ಸಮಸ್ಯೆಗೆ ಸಿಲುಕಿದ್ದಾರೆ. ಇಬ್ಬರಿಗೆ ಹೋಲಿಸಿದ್ರೆ ಫಿಯರ್​ಲೆಸ್ ಆಟವಾಡ್ತಿರೋ ದಿನೇಶ್ ಕಾರ್ತಿಕ್​ ಬೌಲರ್​ಗಳನ್ನ ಚೆಂಡಾಡ್ತಿದ್ದಾರೆ. ಪರ್ಫಾಮೆನ್ಸ್​ ಆಧಾರದಲ್ಲಿ ನೋಡಿದ್ರೆ ರಿಂಕು ಹಾಗೂ ಪಂತ್​ಗಿಂತ ಕಾರ್ತಿಕ್​ ಮೇಲಿದ್ದಾರೆ.

ಇದನ್ನೂ ಓದಿ: ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್, ನಟನ ನೋಡಿ ಅಭಿಮಾನಿಗಳೂ ಭಾವುಕ

ಬ್ಯಾಕ್​ ಅಪ್​ ವಿಕೆಟ್​ ಕೀಪರ್​ ಆಗಿ ಸ್ಥಾನ ಫಿಕ್ಸ್.​.!
ರಿಷಭ್​ ಪಂತ್​ ತಂಡದ ಫಸ್ಟ್​ ಚಾಯ್ಸ್​ ವಿಕೆಟ್​​ ಕೀಪರ್​​ ಬ್ಯಾಟ್ಸ್​ಮನ್​ ಆಯ್ಕೆಯಾಗಿದ್ದಾರೆ. ಪಂತ್​ ಹೊರತುಪಡಿಸಿದ್ರೆ, ಸೆಲೆಕ್ಷನ್ ಕಮಿಟಿ ಹದ್ದಿನ ಕಣ್ಣಿಟ್ಟಿದ್ದ ಜಿತೇಶ್​ ಶರ್ಮಾ, ಕೆ.ಎಲ್​ ರಾಹುಲ್​ ನಿರಾಸೆ ಮೂಡಿಸಿದ್ದಾರೆ. ಇಶಾನ್​ ಕಿಶನ್​, ಸಂಜು ಸ್ಯಾಮ್ಸನ್​ ಬ್ಯಾಟಿಂಗ್​ನಲ್ಲಿ ಇಂಪ್ರೆಸ್​ ಮಾಡಿದ್ದಾರೆ. ಇವರ್ಯಾರೂ ಫಿನಿಷರ್​ ರೋಲ್​ ಪ್ಲೇ ಮಾಡಲ್ಲ. ಹೀಗಾಗಿ ದಿನೇಶ್​ ಕಾರ್ತಿಕ್​ಗೆ ಪಂತ್​ಗೆ ಬ್ಯಾಕ್​ ಅಪ್​ ಪ್ಲೇಯರ್​ ಆಗಿ ಆಯ್ಕೆಯಾದ್ರೂ ಅಚ್ಚರಿ ಪಡಬೇಕಿಲ್ಲ.

ಇದನ್ನೂ ಓದಿ:ಸತತ 17 ವರ್ಷಗಳಿಂದ ಧೋನಿ, ಡಿಕೆ ಸೇವೆ; ‘ಅಂಕಲ್​’ ಎಂದು ಗೇಲಿ ಮಾಡೋರು ಓದಲೇಬೇಕಾದ ಸ್ಟೋರಿ

ಮುಂಬೈ ಹಾಗೂ ಆರ್​​ಸಿಬಿ ನಡುವಿನ ಪಂದ್ಯದ ವೇಳೆ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ, ದಿನೇಶ್​ ಕಾರ್ತಿಕ್​ ಬ್ಯಾಟಿಂಗ್​ ನೋಡಿ ಕಿಚಾಯಿಸಿದ್ರು. ವಿಶ್ವಕಪ್​ ಸೆಲೆಕ್ಷನ್​ ಇದೆ ಅಂತಾ ಹೀಗೆ ಆಡ್ತಿರೋದು ಅಂತಾ ಕಾಲೆಳೆದಿದ್ರು. ಭರ್ಜರಿ ಪ್ರದರ್ಶನ ನೀಡ್ತಿರೋ ಕಾರ್ತಿಕ್​​ ಮನದಾಳದಲ್ಲಿ ವಿಶ್ವಕಪ್​ ಆಡೋ ಆಸೆ ಇದ್ದೇ ಇದೆ. ಮುಂದಿನ ಪಂದ್ಯಗಳಲ್ಲೂ ಹೀಗೆ ಅಬ್ಬರಿಸಿದ್ರೆ ವಿಶ್ವಕಪ್​ ಸಿಗೋದು ಬಹುತೇಕ ಪಕ್ಕಾನೇ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

https://newsfirstlive.com/wp-content/uploads/2024/03/Dinesh_Karthik-1.jpg

Load More