newsfirstkannada.com

ಸೋರುವ ಬಿಡಾರ, ನೆನೆದು ಹೋಗ್ತಿದ್ದ ಪುಸ್ತಕಗಳು.. ಛಲ ಬಿಡದೇ UPSC ಬೆನ್ನೇರಿ ಸಾಧಿಸಿದ ಛಲಗಾರ..!

Share :

Published April 17, 2024 at 1:21pm

    ‘ಕಷ್ಟಪಟ್ಟು ದುಡಿಯುವ ಜನ ತಮ್ಮ ಭವಿಷ್ಯ ಬರೆಯುತ್ತಾರೆ’

    ಕೋಚಿಂಗ್ ಹೋಗಲು ಆಗಲಿಲ್ಲ, YouTube ಬೆಳಕು ಬೆಳಗಿಸಿತು

    ಬಡ ರೈತನ ಮಗನ ಸ್ಫೂರ್ತಿದಾಯಕ, ರೋಚಕ ಸ್ಟೋರಿ ಇದು

UPSC ಕನಸು ಸುಲಭ, ಸಾಕಾರಗೊಳಿಸುವುದು ಸುಲಭದ ಕೆಲಸವಲ್ಲ. ದೇಶದಲ್ಲಿ ನಡೆಯುವ ಅತ್ಯಂತ ಕಠಿಣ ಪರೀಕ್ಷೆ ಅಂದರೆ ಅದು UPSC ಮಾತ್ರ! ದೇಶ ಸೇವೆ ಮಾಡುವ ಮಹಾದಾಸೆ ಅನೇಕ ಯುವಕರದ್ದು, ಅಂತೆಯೇ ಕನಸುಗಳ ಬೆನ್ನೇರಿ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಲಕ್ಷ, ಲಕ್ಷ ಆಕಾಂಕ್ಷಿಗಳಲ್ಲಿ ಕೆಲವೇ ಕೆಲವರು ಮಾತ್ರ ಸಕ್ಸಸ್ ಆಗುತ್ತಾರೆ. ಅದರಂತೆ ಬಡತನದಲ್ಲಿ ಅರಳಿದ ಅಭ್ಯರ್ಥಿಗಳಲ್ಲಿ ಪವನ್‌ ಕುಮಾರ್ ಕೂಡ ಒಬ್ಬರು. ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ಪವನ್ ಅವರ ಹೆಸರಿದೆ. UPSC ಪರೀಕ್ಷೆಯಲ್ಲಿ 239ನೇ ರ್ಯಾಂಕ್ ಗಳಿಸಿದ್ದು, ಅವರ ಕುರಿತ ಸ್ಫೂರ್ತಿದಾಯಕ ಸ್ಟೋರಿ ಇಲ್ಲಿದೆ..!

ಯಾರು ಈ ಪವನ್ ಕುಮಾರ್..?
ಉತ್ತರ ಪ್ರದೇಶದ ಬುಲಂದ್​ಶಹರ್‌ನಲ್ಲಿ ಬರುವ ಉಂಚಾ ಡೆವಲೆಪ್​ಮೆಂಟ್ ಬ್ಲಾಕ್​ನ ರಘುನಾಥಪುರ ಗ್ರಾಮದವರು. ಇವರ ತಂದೆಯ ಹೆಸರು ಮುಖೇಶ್ ಕುಮಾ‌ರ್. ಅಪ್ಪ ಕೃಷಿಕರಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಸುಮನಾ, ಗೃಹಿಣಿ. ಪವನ್ ಕುಮಾರ್ ಅವರಿಗೆ ನಾಲ್ವರು ಸಹೋದರಿಯರು, ಒಬ್ಬ ಸಹೋದರ. ಹಿರಿಯ ಸಹೋದರಿ ಗೋಲ್ಡಿ, ಪದವಿ ಮುಗಿಸಿ ಖಾಸಗಿ ಶಾಲೆಯಲ್ಲಿ ಟೀಚರ್. ಇನ್ನೊಬ್ಬ ಸಹೋದರಿ ಸೃಷ್ಠಿ, ಉನ್ನತ ವ್ಯಾಸಂಗದಲ್ಲಿದ್ದಾರೆ. ಕಿರಿಯ ಸಹೋದರಿ ಸೋನಿಯಾ, ಪಿಯುಸಿ ಓದುತ್ತಿದ್ದಾಳೆ.

ಇದನ್ನೂ ಓದಿ:UPSC Exam: ಅಪ್ಪ ಇಲ್ಲ, ಸಂತೋಷ ಹೇಳಿಕೊಳ್ಳಲು ಅಮ್ಮನು ಇಲ್ಲ.. ಮೊದಲ ಪ್ರಯತ್ನದಲ್ಲೇ 2ನೇ Rank​ ಬಂದ 24ರ ಯುವಕ

ಪವನ್ ಕುಮಾರ್​ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ನವೋದಯ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಅಲಹಾಬಾದ್‌ನಲ್ಲಿ ಪದವಿ ಪಡೆದುಕೊಂಡು, ದೆಹಲಿಯ ಕೋಚಿಂಗ್ ಸೆಂಟರ್‌ ಒಂದರಲ್ಲಿ ಸಿವಿಲ್ ಸರ್ವೀಸಸ್‌ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು.

ಹೇಗಿತ್ತು UPSC ಪ್ರಯಾಣ?
ಪವನ್ ಕುಮಾರ್ ಕೆಲವು ತಿಂಗಳುಗಳ ಕಾಲ ಮಾತ್ರ ಕೋಚಿಂಗ್​ ಸೆಂಟರ್​ನಲ್ಲಿ ಟ್ರೈನಿಂಗ್ ಪಡೆದುಕೊಂಡರು. ಯಾಕೆಂದರೆ, ಅವರ ಮನೆಯ ಆದಾಯವು ಕೃಷಿಯ ಮೇಲೆ ಅವಲಂಬಿತವಾಗಿತ್ತು. ಫೀಸ್ ಕಟ್ಟುವುದು ಸವಾಲಿನ ಕೆಲಸವಾದ ಹಿನ್ನೆಲೆಯಲ್ಲಿ, ನಂತರದ ದಿನಗಳಲ್ಲಿ ಕೋಚಿಂಗ್ ಸೆಂಟರ್​ಗೆ ಹೋಗಲಿಲ್ಲ. ಬದಲಾಗಿ ತಾವೇ ಸ್ವಂತ ಪ್ರಯತ್ನದ ಮೇಲೆ ಪರೀಕ್ಷೆ ಬರೆಯಲು ನಿರ್ಧರಿಸಿದರು. ಹಗಲು-ರಾತ್ರಿ ಓದುತ್ತಿದ್ದ ಪವನ್, UPSC ಪರೀಕ್ಷೆಯಲ್ಲಿ ಎರಡು ಬಾರಿ ಸೋಲನ್ನು ಕಂಡರು. ನಿರಾಶೆ ಮತ್ತು ಹತಾಶೆ ಎದುರಾಗಿದ್ದರೂ ಛಲ ಮಾತ್ರ ಬಿಡಲಿಲ್ಲ. ಮರಳಿ ಯತ್ನವ ಮಾಡು ಎಂಬ ಗಾದೆ ಮಾತಿನಂತೆ, ಮೂರನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

ಇದನ್ನೂ ಓದಿ: ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್, ನಟನ ನೋಡಿ ಅಭಿಮಾನಿಗಳೂ ಭಾವುಕ

ಈ ಯಶಸ್ಸಿನ ಬೆನ್ನಲ್ಲೇ ಅವರ ಕುಟುಂಬದ ಹಿನ್ನೆಲೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಚರ್ಚೆ ಆಗ್ತಿದೆ. ಕೃಷಿಯನ್ನ ಅವಲಂಬಿಸಿದ್ದ ಕುಟುಂಬಕ್ಕೆ ಮಲಗಲು ಸರಿಯಾದ ಮನೆ ಇರಲಿಲ್ಲ. ಹರಕು-ಮುರುಕು ಮನೆಯಲ್ಲೇ ಸಂಸಾರ ನಡೆಸುತ್ತಿದ್ದ ಕುಟುಂಬದ ಸದಸ್ಯನೊಬ್ಬ ದೇಶದ ಅತ್ಯುನ್ನತ ನಾಗರಿಕ ಪರೀಕ್ಷೆ ಪಾಸ್ ಮಾಡುತ್ತಾನೆ ಎಂದು ನಿಜಕ್ಕೂ ಸಲಾಂ ಹೇಳಲೇಕು ಎಂದು ಜನ ಬಣ್ಣಿಸುತ್ತಿದ್ದಾರೆ. ಅದರಂತೆ 2009ರ ಬ್ಯಾಚ್​ನ ಐಎಎಸ್​ ಅಧಿಕಾರಿ ಅವ್ನಿಶ್ ಶರಣ್​, ಟ್ವೀಟ್​ನಲ್ಲಿ​ ಮಾಡಿ ಪವನ್ ಕುಮಾರ್​ ಅವರ ಮನೆಯ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಆ ವಿಡಿಯೋಗೆ ‘ಪವನ್ ಅವರ ಮನೆ. ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ 239ನೇ ಱಂಕ್ ಬಂದಿದ್ದಾರೆ. ಕಷ್ಟಪಟ್ಟು ದುಡಿಯುವ ಜನರು ತಮ್ಮ ಭವಿಷ್ಯವನ್ನು ಬರೆಯುತ್ತಾರೆ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಪವನ್​ಗೆ ಇತ್ತು ಕುಟುಂಬದ ಸಹಕಾರ..!
ಪವನ್ ಮನೆ ಕೃಷಿಯನ್ನೇ ಅಲಂಭಿಸಿದ್ದರೂ, ಪೋಷಕರು ಮಾತ್ರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಹಣಕಾಸಿನ ತೊಂದರೆ ಹಿನ್ನೆಲೆಯಲ್ಲಿ ಕುಟುಂಬ ತಾತ್ಕಾಲಿಕ ಮನೆಯಲ್ಲಿ ವಾಸಿಸುತ್ತಿದೆ. ಮನೆಯ ಮೇಲ್ಛಾವಣಿಗೆ ಪ್ಲಾಸ್ಟಿಕ್ ಶೀಟ್ಸ್​ ಹಾಕಿಸಿಕೊಂಡಿದ್ದಾರೆ. ಜೋರಾಗಿ ಮಳೆ ಬಂದರೆ ಮೇಲ್ಛಾವಣಿ ಮಳೆ ನೀರು ಬೀಳುತ್ತದೆ. ಮಳೆಗಾಲದಲ್ಲಿ ಅದೆಷ್ಟೋ ದಿನ ಪವನ್ ಅವರ ಪುಸ್ತಕಗಳು ನೆನೆದು ಹೋಗಿರೋದು ಇದೆಯಂತೆ.

ಎರಡು ಬಾರಿ ಫೇಲ್ ಆದ ನಂತರ ಕೋಂಚಿಂಗ್​ಗೆ ಹೋಗೋದನ್ನು ನಿಲ್ಲಿಸಿಬಿಟ್ಟಿದ್ದೆ. ಆದರೆ ಓದು ನಿಲ್ಲಿಸಿರಲಿಲ್ಲ. YouTube ಹಾಗೂ ಅದಕ್ಕೆ ಸಂಬಂಧಿಸಿದ ಕೆಲವು ವೆಬ್​ಸೈಟ್​​ಗಳನ್ನು ನೆಚ್ಚಿಕೊಂಡು ಓದುತ್ತಿದ್ದೆ. ಕೊನೆಗೂ UPSC CSE 2023 ಪರೀಕ್ಷೆಯಲ್ಲಿ ಯಶಸ್ವಿಯಾದೆ. ಇಂದು ಸಂತೋಷಕ್ಕೆ ಮಿತಿಯೇ ಇಲ್ಲ ಎನ್ನುತ್ತಾರೆ ಪವನ್ ಕುಮಾರ್.

ಕುಟುಂಬದ ಭರವಸೆ..!
ಪವನ್ ಸಾಧನೆಗೆ ಕಾರಣವಾಗಿದ್ದು ಮನೆಯವರು ಇಟ್ಟಿದ್ದ ನಂಬಿಕೆ ಮತ್ತು ಎದುರಾದ ಸಂಕಷ್ಟಗಳು. ಎರಡು ಬಾರಿ ಱಂಕ್ ಬರಲು ಸಾಧ್ಯವಾಗದಿದ್ದರೂ, ಮಗನ ಓದಿಗೆ ಪೋಷಕರು ನಿತ್ಯವೂ ಪ್ರೋತ್ಸಾಹಿಸುತ್ತ ಬಂದಿದ್ದರು. ಮಗನ ಮೇಲೆ ಯಾವತ್ತೂ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ತಂದೆ-ತಾಯಿ ಮತ್ತು ಒಡಹುಟ್ಟಿದವರ ಅವಿರತ ಬೆಂಬಲವೇ ಪವನ್ ಯಶಸ್ಸಿಗೆ ಕಾರಣವಾಗಿದೆ. ಈಗ, ‘ನನ್ನ ಯಶಸ್ಸು ಕೇವಲ ಕನಸನ್ನು ನನಸಾಗಿಸಲು ಮಾತ್ರವಲ್ಲ, ಕಷ್ಟಗಳನ್ನು ಸಹಿಸಿಕೊಂಡು ಬಂದ ಕುಟುಂಬಕ್ಕೆ ಉತ್ತಮ ಜೀವನ ನೀಡುವುದೂ ಆಗಿದೆ’ ಎಂಬುವುದು ಪವನ್ ಕುಮಾರ್​ ಥೇರಿ ಮಾತು.

ವಿಶೇಷ ವರದಿ: ಗಣೇಶ ಕೆರೆಕುಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೋರುವ ಬಿಡಾರ, ನೆನೆದು ಹೋಗ್ತಿದ್ದ ಪುಸ್ತಕಗಳು.. ಛಲ ಬಿಡದೇ UPSC ಬೆನ್ನೇರಿ ಸಾಧಿಸಿದ ಛಲಗಾರ..!

https://newsfirstlive.com/wp-content/uploads/2024/04/PAWAN-KUMAR.jpg

Load More