Advertisment

ಡಿವೋರ್ಸ್​ ಕೊಟ್ಟು ಮತ್ತೆ ಒಂದಾಯ್ತು ಜೋಡಿ.. ಪರಸ್ಪರ ತಬ್ಬಿ ಕಣ್ಣೀರು ಇಡುತ್ತ ಮತ್ತೆ ಸತಿ-ಪತಿ ಆಗಿಬಿಟ್ರು..!

author-image
Ganesh
Updated On
ಇದೆಂಥಾ ಅನಿಷ್ಟ ಪದ್ಧತಿ! ಇಲ್ಲಿ ಬಾಡಿಗೆಗೆ ಸಿಗುತ್ತಾರಂತೆ ಹೆಣ್ಣುಮಕ್ಕಳು! ಏನಿದು ಸ್ಟೋರಿ?
Advertisment
  • ಡಿವೋರ್ಸ್ ಸುದ್ದಿಗಳ ನಡುವೆ ಇಲ್ಲಿ ಮತ್ತೆ ಒಂದಾಗಿದೆ ಜೋಡಿ
  • 12 ವರ್ಷಗಳ ಕಾಲ ದೂರಾಗಿ ಮತ್ತೆ ಒಂದಾದ ಕಪಲ್​ ಯಾರು ಗೊತ್ತಾ?
  • ದಂಪತಿಗೆ ಒಂದಾಗಲು ಸಹಾಯ ಮಾಡಿದ್ದು ಅದೊಂದು ಮದುವೆ

ಸೆಲೆಬ್ರಿಟಿಗಳ ಡಿವೋರ್ಸ್​ ಪ್ರಕರಣಗಳ ಸದ್ದು ಜೋರಾಗಿದೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ಕೇಸ್​ ಬೆನ್ನಲ್ಲೇ ಇದೀಗ ದೊಡ್ಮನೆ ಕುಟುಂಬದ ಯುವ ರಾಜ್ ತಮ್ಮ ಸಂಸಾರಿಕ ಜೀವನಕ್ಕೆ ಗುಡ್​​ಬೈ ಹೇಳಲು ನಿರ್ಧರಿಸಿದ್ದು, ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂಬ ಮಾಹಿತಿ ಇದೆ.

Advertisment

ಈ ಬೆನ್ನಲ್ಲೇ ಉತ್ತರ ಪ್ರದೇಶದ ರಾಮ್​​ಪುರದಿಂದ Happy Ending ಸುದ್ದಿಯೊಂದು ಸಿಕ್ಕಿದೆ. ಅಸಲಿ ವಿಚಾರ ಏನಂದರೆ 12 ವರ್ಷಗಳ ಹಿಂದೆ ಯಾವುದೋ ಒಂದು ಕಾರಣಕ್ಕೆ ವಿಚ್ಛೇದನ ಪಡೆದುಕೊಂಡಿದ್ದ ಜೋಡಿ ಮತ್ತೆ ಒಂದಾಗಿದೆ. ಅವರಿಬ್ಬರ ಪುನರ್ಮಿಲಕ್ಕೆ ಸೇತುವೆಯಾಗಿದ್ದು, ಸಂಬಂಧಿಕರೊಬ್ಬರ ಮದುವೆ ಅನ್ನೋದು ಮತ್ತೊಂದು ವಿಶೇಷ.

ಇದನ್ನೂ ಓದಿ:ಬಾಬರ್​ ಅಜಂ ಕೊಹ್ಲಿಯ ಚಪ್ಪಲಿಗೂ ಸಮವಲ್ಲ -ಮಾಜಿ ಕ್ರಿಕೆಟಿಗನ ಹೇಳಿಕೆಗೆ ಸಂಚಲನ..!

publive-image

ಏನಿದು ಸ್ಟೋರಿ..?
ಅಜಿಂ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ರತಾ ಗ್ರಾಮದ ಅಫ್ಸರ್ ಅಲಿ ಅನ್ನೋರು 2004ರಲ್ಲಿ ರಾಮ್​ಪುರದ ಹುಡುಗಿಯನ್ನು ಮದುವೆ ಆಗಿದ್ದರು. 8 ವರ್ಷಗಳ ಕಾಲ ಸಂಸಾರ ಮಾಡಿದ ಈ ಜೋಡಿ ಮಧ್ಯೆ ಕೆಲವು ವೈಮನಸ್ಸು ಶುರುವಾಗಿತ್ತು. ಇದು ವಿಚ್ಛೇದನಕ್ಕೆ ದಾರಿ ಮಾಡಿಕೊಟ್ಟಿತ್ತು.

Advertisment

ಇಬ್ಬರ ಸಂಸಾರಕ್ಕೆ ಮೂವರು ಹೆಣ್ಮಕ್ಕಳು, ಓರ್ವ ಪುತ್ರ ಕೂಡ ಜನಿಸಿದ್ದ. ವಿಚ್ಛೇದನ ಪಡೆದ ನಂತರ ಅಲಿ ಓರ್ವ ಪುತ್ರಿಯನ್ನು ಮಾತ್ರ ತಮ್ಮ ಬಳಿ ಇಟ್ಟುಕೊಂಡು, ಇನ್ನುಳಿದ ಮೂವರು ಮಕ್ಕಳನ್ನು ಪತ್ನಿಯ ಜೊತೆ ಕಳುಹಿಸಿಕೊಟ್ಟಿದ್ದ. ಡಿವೋರ್ಸ್ ಪಡೆದ ಬಳಿಕ ಇಬ್ಬರು ಬೇರೆ ಮದುವೆ ಆಗಲು ಇಷ್ಟಪಡಲಿಲ್ಲ. ಮಕ್ಕಳೊಂದಿಗೆ ವಾಸವಿದ್ದರು.

ವಿಚಾರ ಹೀಗಿರುವಾಗ ಇಬ್ಬರ ಜೀವನದಲ್ಲಿ ಇದೀಗ ಹೊಸ ತಿರುವು ಸಿಕ್ಕಿದೆ. ಸಂಬಂಧಿಕರ ಮದುವೆ ಸಮಾರಂಭಕ್ಕೆ ಅಲಿ ಹೋಗಿದ್ದ. ಇದೇ ಮದುವೆಗೆ ಅಲಿ ಮಾಜಿ ಪತ್ನಿ ಕೂಡ ಬಂದಿದ್ದರು. ಮದುವೆ ಮನೆಯಲ್ಲಿ ಓಡಾಡುವಾಗ ಇಬ್ಬರ ಕಣ್ಣುಗಳು ಒಬ್ಬರನ್ನೊಬ್ಬರನ್ನು ನೋಡಿಕೊಂಡಿವೆ. ದುಃಖ ಉಮ್ಮಳಿಸಿ ಬಂದಿದೆ. ಅಲ್ಲೇ ಕಣ್ಣೀರಧಾರೆ ಹರಿದಿದೆ. ನಂತರ ಇಬ್ಬರೂ ತಮ್ಮ ಮೊಬೈಲ್ ನಂಬರ್​​ ಬದಲಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ:ಎರಡೂವರೆ ಲಕ್ಷಕ್ಕೆ ಟ್ರ್ಯಾಕ್ಟರ್​ ಮಾರಿ IND-PAK ಪಂದ್ಯ ವೀಕ್ಷಣೆಗೆ ಬಂದ.. ಮೈದಾನದಲ್ಲಿ ದೊಡ್ಡ ಆಘಾತ, ಕಣ್ಣೀರು..!

Advertisment

publive-image

ಮದುವೆ ಮುಗಿಸಿ ಮನೆಗೆ ಬಂದ ಮೇಲೆ ಮೊಬೈಲ್​​ನಲ್ಲಿ ಸಣ್ಣದಾಗಿ ಮಾತುಕತೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಇದು ಇಬ್ಬರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ಕೊನೆಗೊಂದು ದಿನ ಇಬ್ಬರು ಮಕ್ಕಳೊಂದಿಗೆ ಉತ್ತರಾಖಾಂಡ್​ನಲ್ಲಿ ಭೇಟಿಯಾಗಿದ್ದಾರೆ. ವಿಶೇಷ ಅಂದರೆ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರೂ ಪರಸ್ಪರ ಪ್ರೀತಿಸುತ್ತಲೇ ಇದ್ದರು. ಇದೀಗ ಮಕ್ಕಳ ಸಮ್ಮುಖದಲ್ಲಿ ಮತ್ತೆ ಒಂದಾಗಿ ಸುಖ ಸಂಸಾರ ಮಾಡಲು ನಿರ್ಧರಿಸಿದ್ದು, ಕಾನೂನು ಪ್ರಕಾರ ಮತ್ತೆ ಸತಿ-ಪತಿಗಳಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment