‘ಡಿಕೆಶಿ​ಗೆ ಸಿಎಂ ಆಗೋ ಯೋಗವಿದೆ..’ ಕುತೂಹಲದ ಜೊತೆಗೆ ಚರ್ಚೆಗೆ ಕಾರಣವಾಯ್ತು ಮತ್ತೊಬ್ಬ ಸ್ವಾಮೀಜಿ ಹೇಳಿಕೆ

author-image
AS Harshith
Updated On
2023ರಲ್ಲಿ ರಾಮನಗರ ಜಿಲ್ಲೆ ಒಂದರಲ್ಲೇ ಬಾಗಿಲು ಮುಚ್ಚಿವೆ 38 ಸರ್ಕಾರಿ ಶಾಲೆಗಳು; DKS ಕ್ಷೇತ್ರದಲ್ಲೇ ಅತ್ಯಧಿಕ..!
Advertisment
  • ರಾಜ್ಯದಲ್ಲಿ ಮತ್ತೆ ಪ್ರತಿಧ್ವನಿಸಿದೆ ಸಿಎಂ ಬದಲಾವಣೆ ಕೂಗು
  • ಸ್ವಾಮೀಜಿಯೊಬ್ರು ಕೊಟ್ಟ ಹೇಳಿಕೆಯಿಂದ ಮತ್ತೆ ಚರ್ಚೆ
  • ಕಾಂಗ್ರೆಸ್​ ಪರಿಸ್ಥಿತಿ ಬಗ್ಗೆ ವ್ಯಂಗ್ಯವಾಡಿದ ಸಿ.ಟಿ ರವಿ

ಸಿಎಂ ಬದಲಾವಣೆ ಕೂಗು ಸದ್ಯ ರಾಜ್ಯದಲ್ಲಿ ಮತ್ತೆ ಪ್ರತಿಧ್ವನಿಸುತ್ತಿದೆ. ಇನ್ನೋರ್ವ ಸ್ವಾಮೀಜಿ ಡಿಕೆಶಿ ಬಗ್ಗೆ ನೀಡಿರೋ ಹೇಳಿಕೆ ಅಚ್ಚರಿಗೆ ಕಾರಣವಾದ್ರೆ, ವಿರೋಧ ಪಕ್ಷಕ್ಕೆ ಸದ್ಯ ಇದೇ ವಿಚಾರ ಪ್ರತ್ಯಾಸ್ತ್ರವಾಗಿದೆ.

ಕಾಂಗ್ರೆಸ್​ನಲ್ಲಿ ಕುರ್ಚಿ ಕದನ ಮುಗಿಯದ ಕತೆಯಾಗಿದೆ. ದೆಹಲಿ ಅಂಗಳ ತಲುಪಿ ಇನ್ನೇನು ತಣ್ಣಗಾಯ್ತು ಅನ್ನೋ ಹೊತ್ತಲ್ಲೇ ಕುರ್ಚಿ ಕದನಕ್ಕೆ ಒಬ್ಬೊಬ್ಬರೇ ಧನಿಗೂಡಿಸುತ್ತಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಕೊಟ್ಟ ಖಡಕ್ ವಾರ್ನಿಂಗ್ ಬಳಿಕವೂ ರಾಜ್ಯದಲ್ಲಿ ಕುರ್ಚಿ ಕುರುಕ್ಷೇತ್ರ ಹೊಸ ಹೊಸ ಮಜಲು ಪಡೆಯುತ್ತಿದೆ. ಸದ್ಯ ಸ್ವಾಮೀಜಿಯೊಬ್ರು ಕೊಟ್ಟ ಹೇಳಿಕೆ ಮತ್ತೆ ಸಿಎಂ ಬದಲಾವಣೆಯ ಬಗ್ಗೆ ಬಿಸಿ ಬಿಸಿ ಚರ್ಚೆಯನ್ನ ಹುಟ್ಟುಹಾಕಿದೆ.

ಇದನ್ನೂ ಓದಿ: ದರ್ಶನ್​ ಬಗ್ಗೆ ಸೆಲೆಬ್ರಿಟಿಗಳ ಮಾತು.. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಇವರೆಲ್ಲಾ ಏನಂದ್ರು ಗೊತ್ತಾ?

ಕುತೂಹಲ ಮೂಡಿಸಿದ ವಚನಾನಂದ ಶ್ರೀಗಳ ಹೇಳಿಕೆ

ಸಿಎಂ ಬದಲಾವಣೆ ಬಗ್ಗೆ ಚಿತ್ರದುರ್ಗದಲ್ಲಿ ಹರಿಹರ ಪೀಠದ ವಚನಾನಂದ ಶ್ರೀ ಅಚ್ಚರಿ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್​ಗೆ ಸಿಎಂ ಆಗೋ ಯೋಗ ಇದೆ ಅಂತ ವಚನಾನಂದ ಶ್ರೀ ತಿಳಿಸಿದ್ದಾರೆ. ಅಲ್ಲದೇ ಡಾ. ಜಿ ಪರಮೇಶ್ವರ್​ ಪರವೂ ವಚನಾನಂದ ಶ್ರೀ ಬ್ಯಾಟಿಂಗ್ ಮಾಡಿದ್ದು, ದಲಿತ ಸಿಎಂ ಬಗ್ಗೆಯೂ ದನಿಯೆತ್ತಿದ್ದಾರೆ.

publive-image

ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋದ ಐವರು.. ವರುಣಾರ್ಭಟಕ್ಕೆ ದೇಶದಲ್ಲಿ ಲೆಕ್ಕವಿಲ್ಲದಷ್ಟು ಸಾವು ನೋವು

‘ಕಾಂಗ್ರೆಸ್​ಗೆ ಬಹುಮತ ಇದೆ. ವಿಶ್ವಾಸ ಮತ ಇಲ್ಲ’!

ಕಾಂಗ್ರೆಸ್​ನಲ್ಲಿ ಉಂಟಾಗಿರೋ ಸಿಎಂ ಬದಲಾವಣೆ ಸರ್ಕಸ್​ ಬಗ್ಗೆ ಬಿಜೆಪಿ ಎಂಎಲ್​ಸಿ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್​ಗೆ ಬಹುಮತ ಇದೆ ವಿಶ್ವಾಸ ಮತ ಇಲ್ಲ, ಜನರ ವಿಶ್ವಾಸವನ್ನೂ ಕಾಂಗ್ರೆಸ್​ ಕಳೆದುಕೊಂಡಿದೆ ಅಂತ ಕಾಲೆಳೆದಿದ್ದಾರೆ.

ಇದನ್ನೂ ಓದಿ: Kalki 2898 AD: ಅಬ್ಬಬ್ಬಾ! ಪ್ರಭಾಸ್​ ಕಲ್ಕಿ ಸಿನಿಮಾದ 3ನೇ ದಿನದ ಕಲೆಕ್ಷನ್​ ಎಷ್ಟು ಕೋಟಿ ಗೊತ್ತಾ?

ಒಟ್ಟಿನಲ್ಲಿ ಸಿಎಂ ಬದಲಾವಣೆ ಜಟಾಪಟಿ ಕಾಂಗ್ರೆಸ್​ ಪಾಲಿಗೆ ನುಂಗಲಾರದ ತುತ್ತಾದ್ರೆ ಇತ್ತ ಬಿಜೆಪಿಗರಿಗೆ ಅದೇ ಬ್ರಹ್ಮಾಸ್ತ್ರವಾಗೋ ಲಕ್ಷಣ ಎದ್ದು ಕಾಣ್ತಿದೆ. ಪ್ರತಿಪಕ್ಷಗಳ ಪಾಲಿಗೆ ಆಹಾರವಾಗೋ ಸಿಎಂ ಬದಲಾವಣೆ ಜಟಾಪಟಿ ವಿಚಾರವನ್ನ ಕಾಂಗ್ರೆಸ್ ಹೈಕಮಾಂಡ್​ ಯಾವ ರೀತಿ ಬಗೆಹರಿಸುತ್ತೆ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment