Advertisment

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ತ್ವಚೆ ಫಳಫಳ ಹೊಳೆಯುತ್ತಾ?

author-image
Gopal Kulkarni
Updated On
ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ತ್ವಚೆ ಫಳಫಳ ಹೊಳೆಯುತ್ತಾ?
Advertisment
  • ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹೆಚ್ಚುತ್ತಾ ಚರ್ಮದ ಕಾಂತಿ?
  • ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸಲಹೆ ಎಷ್ಟು ಸತ್ಯ ಗೊತ್ತಾ?
  • ಕೇವಲ ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದಲೇ ಚರ್ಮದ ಕಾಂತಿ ಹೆಚ್ಚುತ್ತಾ?

ಸೋಷಿಯಲ್ ಮಿಡಿಯಾದ ಅನೇಕ ಪೋಸ್ಟ್​ಗಳನ್ನು ನಾವು ನೋಡುತ್ತೇವೆ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಮಾಹಿತಿಗಳು ಅಲ್ಲಿ ನಮಗೆ ಸಿಗುತ್ತವೆ. ಹಲವರು ಹಲವು ರೀತಿಯ ಸಲಹೆಗಳನ್ನು ನೀಡಿರುತ್ತಾರೆ. ಕೆಲವೊಮ್ಮೆ ಅವುಗಳ ಸತ್ಯಾಸತ್ಯತೆಗಳನ್ನು ತಿಳಿಯದೇ ಜನರು ಅದನ್ನು ಪಾಲಿಸುವ ಸಾಧ್ಯತೆಗಳು ಹೆಚ್ಚಿವೆ. ಅದೇ ರೀತಿಯೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವದರಿಂದ ಮುಖದ ಚರ್ಮದ ಕಾಂತಿ ಹೆಚ್ಚುವುದು ಅನ್ನೋ ಒಂದು ಸಲಹೆ

Advertisment

ಇದನ್ನೂ ಓದಿ:ಡಿಜೆ ಸೌಂಡ್​​ ಅಂದ್ರೆ ಅಷ್ಟೊಂದು ಇಷ್ಟಾನಾ? ಚೂರು ಯಾಮಾರಿದ್ರೂ ಕಿವಿ ಹೋಗುತ್ತೆ ಹುಷಾರ್​​..!

ಸದ್ಯ ಸೋಷಿಯಲ್ ಮಿಡಿಯಾ, ರೀಲ್ಸ್ ಹಾಗೂ ಥ್ರೆಡ್ಸ್​ಗಳಲ್ಲಿ ಈ ಒಂದು ಆರೋಗ್ಯ ಸಲಹೆ ಹರಿದಾಡುತ್ತಿದೆ. ಹಾಗಿದ್ದರೆ ಚರ್ಮರೋಗ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ಅಂತ ನೋಡಿದ್ರೆ ಇದರಲ್ಲಿ ಸತ್ಯವಿದ್ದಷ್ಟೇ ಮಿತ್ಯವೂ ಇದೆ ಎಂದು ಹೇಳಲಾಗುತ್ತದೆ. ತ್ವಚೆಯನ್ನು ಹೊಳೆಯುವ ಕನ್ನಡಿಯಂತೆ ಇಟ್ಟುಕೊಳ್ಳಲು ನೀರು ಕುಡಿಯುವುದು ಅಗತ್ಯ, ನಿರ್ಜಲೀಕರಣದಿಂದ ಚರ್ಮದ ಕಾಂತಿ ಕಳೆಗುಂದುತ್ತದೆ. ಹೀಗಾಗಿಯೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ಒಳ್ಳೆಯದೇ ಆದ್ರೆ ಅದೊಂದರಿದ ಮಾತ್ರ ನಿಮ್ಮ ಮುಖದ ಚರ್ಮದ ಕಾಂತಿ ಹೊಳೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಡರ್ಮಟಾಲೋಜಿಸ್ಟ್​​

publive-image

2015ರ ಅಧ್ಯಯನವೊಂದು ಹೇಳುವ ಪ್ರಕಾರ ಅತಿ ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ಕಾಂತಿಗೆ ಉತ್ತಮ. ತ್ವಚೆಯ ಕಾಂತಿಯುಕ್ತವಾಗಿ ಇರಬೇಕು ಅಂದ್ರೆ ದೇಹದಲ್ಲಿ ತೇವಾಂಶದ ಅವಶ್ಯಕತೆ ಇದೆ. ಹೀಗಾಗಿ ನೀರು ಜಾಸ್ತಿ ಕುಡಿಯುವುದರಿಂದ ತ್ವಚೆಯ ಆರೋಗ್ಯವನ್ನು ನಾವು ಇನ್ನುಷ್ಟು ಚೆನ್ನಾಗಿ ಕಾಪಾಡಿಕೊಳ್ಳಬಹುದು.

Advertisment

ಇದನ್ನೂ ಓದಿ:ಹೃದಯಾಘಾತದಿಂದ ಅಸುನೀಗಿದ ವಿಶ್ವದ ದೈತ್ಯ ಬಾಡಿಬಿಲ್ಡರ್​; ಇಂತಹ ಅಪಾಯ ಇವರಲ್ಲಿಯೇ ಹೆಚ್ಚು ಕಾಣ್ತಿರೋದೇಕೆ..?

ಆದ್ರೆ ಕೇವಲ ನೀರು ಕುಡಿಯುವುದರಿಂದ ಕೇವಲ ಖಾಲಿ ಹೊಟ್ಟೆಯಿಂದ ನೀರು ಕುಡಿಯುವುದರಿಂದ ಮಾತ್ರವಲ್ಲ. ಆಹಾರ ಪದ್ಧತಿಯಲ್ಲಿಯೂ ಕೂಡ ಹಲವು ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ. ಆವಾಗ ಮಾತ್ರ ಚರ್ಮದ ಕಾಂತಿಯಲ್ಲಿ ಬದಲಾವಣೆಯನ್ನು ಕಾಣಬಹುದು. ಮಹಾರಾಷ್ಟ್ರದ ರಾಶಿ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ರಾಶಿ ಸೋನಿ ಹೇಳುವ ಪ್ರಕಾರ. ಹೆಚ್ಚು ಹೆಚ್ಚು ನೀರು ಕುಡಿಯುವುದು ಚರ್ಮದ ಜೊತೆಗೆ ಇಡೀ ದೇಹಕ್ಕೂ ಕೂಡ ಒಳ್ಳೆಯದು. ಆದ್ರೆ ಇದೇ ನೇರವಾಗಿ ಚರ್ಮವನ್ನು ಕಾಂತಿಯುಕ್ತ ಮಾಡುವಲ್ಲಿ ಪರಿಣಾಮ ಬೀರುವುದಿಲ್ಲ. ನಿಮ್ಮ ಆಹಾರ ಪದ್ಧತಿ, ಬಿಸಿಲಿನಿಂದ ನೀವು ಪಡೆಯುವ ರಕ್ಷಣೆ ನಿತ್ಯ ಚರ್ಮದ ಕಾಳಜಿ ಮಾಡುವ ರೀತಿಯಲ್ಲಿ ಅದು ಅವಲಂಭಿಸಿದೆ ಎಂದು ಹೇಳಿದ್ದಾರೆ.

publive-image

ಈ ಬಗ್ಗೆ ಮತ್ತೊಬ್ಬ ವೈದ್ಯರಾದ ಸಚಿನ್ ಗುಪ್ತಾ ಹೇಳುವ ಪ್ರಕಾರ ನಿರ್ಜಲೀಕರಣ ಆಗದಂತೆ ತಡೆಯಲು ಹೆಚ್ಚು ಹೆಚ್ಚು ನೀರು ಕುಡಿಯಲೇಬೇಕು. ಆದ್ರೆ ಅದರಿಂದ ಮಾತ್ರ ಚರ್ಮದ ಕಾಂತಿ ಪಳಪಳಿಸುತ್ತದೆ ಅನ್ನೋ ವಾದ ಸುಳ್ಳು ನ್ಯೂಟ್ರಿಷನ್ ಬ್ಯಾಲನ್ಸಿಂಗ್​ನಿಂದ ಹಿಡಿದು ನಿಮ್ಮ ನಿತ್ಯದ ಚಟುವಟಿಕೆಗಳು ಕೂಡ ಚರ್ಮದ ಕಾಂತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment