ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ
ಯುವಕನನ್ನು ಅರೆಬೆತ್ತಲೆಗೊಳಿಸಿ ಮೂತ್ರ ಕುಡಿಸಿದರು
ದೃಶ್ಯ ವೈರಲ್ ಆದಂತೆ ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು
ಯುವಕನೋರ್ವನನ್ನು ಥಳಿಸಿ, ಅರೆಬೆತ್ತಲೆಗೊಳಿಸಿ, ಮೂತ್ರ ಕುಡಿಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ರಾಜಸ್ಥಾನದ ಬಾರ್ಮರ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವಿಡಿಯೋ ಆಧರಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ದೃಶ್ಯದಲ್ಲಿ ಯವಕನೊಬ್ಬನನ್ನು ಅಮಾನುಷವಾಗಿ ಥಳಿಸಿ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ. ಗುಂಪಿನ ನಡುವೆ ಯುವಕನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಘಟನೆ ಬಗ್ಗೆ ಪೊಲೀಸರು ಏನಂದ್ರು?
ವಿಡಿಯೋ ಬೆಳಕಿಗೆ ಬಂದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ವ್ಯಕ್ತಿ ರಾತ್ರಿ ಯಾರದ್ದೋ ಮನೆಗೆ ನುಗ್ಗಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಧನೌ ಪ್ರದೇಶದಲ್ಲಿ ಮನೆಯಲ್ಲಿದ್ದವರು ಆತನನ್ನು ಹಿಡಿದು ಜಮೀನಿಗೆ ಕರೆದೊಯ್ದು ಥಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ರಕ್ತ ಸೋರಿ ಹುಳ ಆಗಿ ವಾಸನೆ ಬರ್ತಿತ್ತು.. ಫ್ರಿಡ್ಜ್ನಲ್ಲಿ 32 ತುಂಡಾಗಿದ್ದಳು ಮಹಾಲಕ್ಷ್ಮೀ
ಸಂತ್ರಸ್ತನಿಂದ ದೂರು
ಸಂತ್ರಸ್ತ ಧನೌ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೆಪ್ಟೆಂಬರ್ 16ರಂದು ನಡೆದ ಘಟನೆ ಇದಾಗಿದ್ದು, ದೂರಿನಲ್ಲಿ ಯುವಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸೋದರ ಸಂಬಂಧಿಗಳಾದ ಭಗವಾನ ರಾಮ್ ಮತ್ತು ತೇಜರಾಮ್ ಮತ್ತು ಗೆನಾರಾಮ್ ತಡೆದು ಹಲ್ಲೆ ಮಾಡಿದ್ದಾರೆ. ಅರೆಬೆತ್ತಲೆಗೊಳಿಸಿ ಮೂತ್ರ ಕುಡಿಸಿದ್ದಾರೆ.
ಇದನ್ನೂ ಓದಿ: ಲೆಬನಾನ್ ಪೇಜರ್ ಬ್ಲಾಸ್ಟ್‌ಗೂ ಕೇರಳ ಲಿಂಕ್.. ಭಾರತ ಮೂಲದ ಟೆಕ್ಕಿಗೆ ಈಗ ಅಪಾಯ! ಯಾರಿವರು?
ಸದ್ಯ ಸಂತ್ರಸ್ತನ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ. ಆದರೆ ಬಾಟಲಿಯಲ್ಲಿ ಮೂತ್ರವಿತ್ತಾ ಎಂಬುದು ಇನ್ನು ಧೃಢಪಟ್ಟಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ