ಸಚಿವರ ಆಪ್ತನ ಮನೆಯಲ್ಲಿ ಕಂತೆ ಕಂತೆ ನೋಟುಗಳ ಗುಡ್ಡೆ.. ಈ ಕಾಂಗ್ರೆಸ್ ನಾಯಕನ ಹಿನ್ನೆಲೆ ಏನು?

author-image
Ganesh
Updated On
ಅಬ್ಬಾ.. 12 ಗಂಟೆ, 6 ಮೆಷಿನ್‌ ಎಣಿಸಿದ್ರೂ ಮುಗಿದಿಲ್ಲ; ರಾಂಚಿಯಲ್ಲಿ ಸಿಕ್ಕಿದ್ದು ಎಷ್ಟು ಕೋಟಿ ಗೊತ್ತಾ?
Advertisment
  • ಲೋಕಸಭೆ ಚುನಾವಣೆ ಹೊತ್ತಿನಲ್ಲಿ ED ಭರ್ಜರಿ ಬೇಟೆ
  • ರಾಶಿ ರಾಶಿ ನೋಟುಗಳ ಕಟ್ಟು ಕಂಡು ಬೆಚ್ಚಿಬಿದ್ದ ಅಧಿಕಾರಿಗಳು
  • ಎಣಿಸಲು ಸಾಧ್ಯವಾಗದೇ ಯಂತ್ರಗಳನ್ನು ತರಿಸಿಕೊಳ್ತಿರುವ ಅಧಿಕಾರಿಗಳು

​ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾರ್ಖಂಡ್​ನ ರಾಂಚಿಯ ಹಲವು ಭಾಗಗಳಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲಿನ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತಕಾರ್ಯದರ್ಶಿ ಸಂಜೀವ್ ಲಾಲ್ ಮನೆಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ರಾಶಿ ರಾಶಿ ಹಣವನ್ನು ಕಂಡು ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

ಇದನ್ನೂ ಓದಿ:ರೋಹಿತ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ವಾಚ್​​ಗಳು.. ಮೊನ್ನೆ ಕಟ್ಟಿದ್ದ ವಾಚ್​ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!

publive-image

ಮೂಲಗಳ ಪ್ರಕಾರ ಬರೋಬ್ಬರಿ 30 ಕೋಟಿಗೂ ಅಧಿಕ ಹಣ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ. ಹಣದ ಪರ್ವತವನ್ನೇ ಗುಡ್ಡೆ ಹಾಕಿರುವ ಅಧಿಕಾರಿಗಳು ಅವುಗಳ ಮೊತ್ತವನ್ನು ಎಣಿಸಲು ಯಂತ್ರಗಳನ್ನು ತರಿಸಿಕೊಳ್ಳುತ್ತಿದ್ದಾರೆ. ಜಾರ್ಖಂಡ್​ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್​​ ವೀರೇಂದ್ರ ಕೆ.ವಿರುದ್ಧ 2023ರಲ್ಲಿ ಕೇಸ್ ದಾಖಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆದಿದೆ, ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಮೇರೆಗೆ ಇಡಿ ಅಧಿಕಾರಿಗಳು ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಜೊತೆ ಸಚಿವರಿಗೆ ಸಂಪರ್ಕ ಇದೆ. ಅವರ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಕ್ರಮವಾಗಿ ಸಂಪಾದಿಸಿದ ಹಣ ಅವರ ಆಪ್ತರ ಮನೆಗೆ ಹೋಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.

ಇದೇ ಪ್ರಕರಣದಲ್ಲಿ ಇವತ್ತು ಇಡಿ ಅಧಿಕಾರಿಗಳು ದಾಳಿ ಮಾಡಿತ್ತು. ಅಪಾರ ಪ್ರಮಾಣದ ಈ ಹಣವು ಕಪ್ಪು ಹಣದ ಭಾಗವೆಂದು ಇಡಿ ಅಧಿಕಾರಿಗಳು ನಂಬಿದ್ದಾರೆ. ಅಲಂಗೀರ್ ಆಪ್ತ ಕಾರ್ಯದರ್ಶಿಯ ನಿವಾಸದಲ್ಲಿ ಸಿಕ್ಕಿರುವ ಹಣದ ರಾಶಿಯನ್ನು ಕಂಡು ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

ಇದನ್ನೂ ಓದಿ:ಅನುಷ್ಕಾ ಶರ್ಮಾಗೆ ಇದೆ ಒಂದು ವಿಚಿತ್ರ ಚಾಳಿ.. ಕಳ್ಳತನ ಮಾಡಿದ ಪ್ರಕರಣ ರಿವೀಲ್..!

publive-image

ಅಲಂಗೀರ್​ ಆಲಂ ಯಾರು..?
ಅಲಂಗೀರ್ ಆಲಂ ಅವರು ಪಾಕುರ್ ವಿಧಾನಸಭೆ ಕ್ಷೇತ್ರದ ಶಾಸಕ. ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಆಗಿರುವ ಇವರು, ಜಾರ್ಖಂಡ್ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾರೆ. ಇದಕ್ಕೂ ಮೊದಲು ಅಲಂಗೀರ್​ ಅಲಂ ಅಂದರೆ 2006, ಅಕ್ಟೋಬರ್ 20 ರಿಂದ 2009 ಡಿಸೆಂಬರ್​ ವರೆಗೆ ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ಆಗಿದ್ದರು. 2000ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶ ಮಾಡಿದ್ದರು. ನಂತರ 4 ಬಾರಿ ಶಾಸಕರಾಗಿದ್ದಾರೆ.

ಇದನ್ನೂ ಓದಿ:ಮಧ್ಯರಾತ್ರಿ ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಹಲ್ಲೆ.. ಬೆಚ್ಚಿಬಿದ್ದ ನೆಲಮಂಗಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment