ಇಂದು ಆರ್ಸಿಬಿ, ಗುಜರಾತ್ ಟೈಟನ್ಸ್ ಮಧ್ಯೆ ರೋಚಕ ಪಂದ್ಯ
ಆರ್ಸಿಬಿಗೆ 148 ರನ್ಗಳ ಸಾಧಾರಣ ಗುರಿ ನೀಡಿದ ಗುಜರಾತ್
ಗುಜರಾತ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು!
ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಬೀಗಿದೆ.
ಇನ್ನು, ಗೆದ್ದ ಬಳಿಕ ಮಾತಾಡಿದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್, ಕಳೆದ ಮೂರು ಪಂದ್ಯಗಳಲ್ಲಿ ನಾವು ಅದ್ಭುತ ಪ್ರದರ್ಶನ ನೀಡಿದ್ದೇವೆ. ಬೌಲಿಂಗ್ ಮತ್ತು ಫೀಲ್ಡಿಂಗ್ನಲ್ಲೂ ನಂಬಲು ಸಾಧ್ಯವಾಗದ ರೀತಿಯಲ್ಲಿ ಆಡಿದ್ದೇವೆ ಎಂದರು.
ನಾನು ಇಂದು ಆಡಲೇಬೇಕು ಎಂದು ನಿರ್ಧಾರ ಮಾಡಿದ್ದೆ. ಚೆನ್ನಾಗಿ ಆಡಿದ್ದೀನಿ ಅನ್ನೋ ಖುಷಿ ಇದೆ. ಯಾವಾಗಲೂ ಪಿಚ್ ಬಗ್ಗೆ ಮೊದಲೇ ತಿಳಿದುಕೊಳ್ಳುತ್ತೇವೆ. ನಂತರ ನಮ್ಮ ಬೌಲರ್ಗಳ ಮಾತಾಡುತ್ತೇವೆ. ನಾವು 190 ರನ್ ಟಾರ್ಗೆಟ್ ನೀಡುತ್ತಾರೆ ಎಂದು ಭಾವಿಸಿದ್ದೆವು. ಕೊನೆಗೂ ಬಿರುಸಿನಿಂದಲೇ ಬ್ಯಾಟ್ ಮಾಡಿ ಗೆದ್ದೆವು. ಇನ್ನೂ ಹೆಚ್ಚು ರನ್ ಇದ್ದರೂ ಆರಾಮಾಗಿ ಚೇಸ್ ಮಾಡುತ್ತಿದ್ದೆವು ಎಂದರು.
ಗುಜರಾತ್ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆರ್ಸಿಬಿ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 23 ಬಾಲ್ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್, 10 ಫೋರ್ ಸಮೇತ 64 ರನ್ ಸಿಡಿಸಿದ್ರು. ಫಾಫ್ ಬ್ಯಾಟಿಂಗ್ ಮಾಡುವಾಗ ಸ್ಟ್ರೈಕ್ ರೇಟ್ ಬರೋಬ್ಬರಿ 280 ಇತ್ತು.
ಇದನ್ನೂ ಓದಿ: ಗುಜರಾತ್ ವಿರುದ್ಧ ಗೆದ್ದು ಬೀಗಿದ ಬೆಂಗಳೂರು; ಆರ್ಸಿಬಿ ಪ್ಲೇ ಆಫ್ ಕನಸು ಜೀವಂತ!