newsfirstkannada.com

UPI ಮೂಲಕ ತಪ್ಪಾಗಿ ವಹಿವಾಟು ನಡೆಸಿದ್ರೆ ಟೆನ್ಶನ್​ ಮಾಡ್ಬೇಡಿ.. ಈ ಮಾರ್ಗ ಅನುಸರಿಸಿ

Share :

Published August 23, 2024 at 2:44pm

Update August 23, 2024 at 2:45pm

    ಡಿಜಿಟಲ್​ ಯುಗದಲ್ಲಿ ಯುಪಿಐ ವಹಿವಾಟು ಪ್ರಕ್ರಿಯೆ

    ತಪ್ಪಾಗಿ ವಹಿವಾಟು ಮಾಡಿದ್ರೆ ಮೊದಲು ಹೀಗೆ ಮಾಡಿ

    ಹಣ ಹಿಂತಿರುಗಿ ಪಡೆಯಲು ಇದೊಂದು ಸುಲಭ ದಾರಿ

ಹಿಂದೊಂದು ಕಾಲವಿತ್ತು. ಬ್ಯಾಂಕ್​ನಲ್ಲಿ ಗ್ರಾಹಕರು ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಿತ್ತು. ಸರ್ವರ್​ ಡೌನ್​ ಎಂದು ಬ್ಯಾಂಕ್​ ಸಿಬ್ಬಂದಿ ಹೇಳಿದಾಗ ಸಪ್ಪೆ ಮೋರೆ ಹಾಕಿ ಮನೆ ಕಡೆಯ ನಡೆಯಬೇಕಿತ್ತು. ಆದರೀಗ ಕಾಲ ಬದಲಾಗಿದೆ. ನಿಮಿಷಾರ್ಧದಲ್ಲೇ ಅದರಲ್ಲೂ ಕುಳಿತಲ್ಲಿಂದಲೇ ಹಣ ವರ್ಗಾಯಿಸಬಹುದಾಗಿದೆ.

ಇದು ಡಿಜಿಟಲ್​ ಯುಗ. ನಿಮಿಷಾರ್ಧದಲ್ಲೇ ಎಲ್ಲಾ ವಹಿವಾಟು ಮಾಡಬಹುದಾಗಿದೆ. ಅದಕ್ಕಾಗಿ ಯುನಿಫೈಡ್​​ ಪೇಮೆಂಟ್​​​ ಇಂಟರ್ಫೇಸ್​ ಸಹಾಯ ಮಾಡುತ್ತಿದೆ. ಇದರ ಮೂಲಕ ಹಣವನ್ನು ಸುಲಭವಾಗಿ ಕಳುಹಿಸಬಹುದಾಗಿದೆ. ಆದರೆ ಡಿಜಿಟಲ್​ ಯುಗದಲ್ಲಿ ಸರಿಯಾಗಿ ಪರಿಶೀಲಿಸದೆ ವಹಿವಾಟು ಮಾಡಿದರೆ ಎಡವುವ ಸಂಭವವಿದೆ.

ಹೌದು. ಯುಪಿಐ ಬಳಕೆದಾರರು ಕೆಲವೊಮ್ಮೆ ತಪ್ಪಾದ ವಿಳಾಸಕ್ಕೆ ಹಣ ಕಳುಹಿಸಿ ಪೇಚಾಟಕ್ಕೆ ಸಿಲುಕಿಕೊಂಡ ಘಟನೆ ಬಗ್ಗೆ ಕೇಳಿರಬಹುದು. ಮಾತ್ರವಲ್ಲದೆ ಹಣಕಾಸಿನ ನಷ್ಟವನ್ನು ಅನುಭವಿಸಿರಬಹುದು. ಆದರೀಗ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ಯುಪಿಐನಲ್ಲಿ ತಪ್ಪಾದ ವಹಿವಾಟಿನ ಕಳವಳಗಳನ್ನು ಪರಿಹರಿಸಲು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಹೊಸ ನಿಯಮಗಳ ಪ್ರಕಾರ, ಯಾರಾದರೂ ತಪ್ಪಾದ UPI ವಿಳಾಸಕ್ಕೆ ಹಣವನ್ನು ವರ್ಗಾಯಿಸಿದರೆ, ಅವರು 24 ರಿಂದ 48 ಗಂಟೆಗಳ ಒಳಗೆ ಹಣವನ್ನು ಮರಳಿ ಪಡೆಯಬಹುದಾಗಿದೆ. ಅದರಲ್ಲೂ ಪಾವತಿಸುವವರು ಮತ್ತು ಸ್ವೀಕರಿಸುವವರು ಒಂದೇ ಬ್ಯಾಂಕ್ ಅನ್ನು ಬಳಸುತ್ತಿದ್ದರೆ ಮರುಪಾವತಿ ಪ್ರಕ್ರಿಯೆಯು ವೇಗವಾಗಿ ನಡೆಯುತ್ತದೆ. ಆದರೆ ವಹಿವಾಟು ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ನಡೆದರೆ ಮರುಪಾವತಿಯನ್ನು ಪ್ರಕ್ರಿಯೆಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: ಸ್ಮಾರ್ಟ್​ಫೋನ್​ ಚಾರ್ಜಿಂಗ್​ ಪೋರ್ಟ್​ ಬಳಿ ಇರೋ ಸಣ್ಣ ರಂಧ್ರದ ವಿಶೇಷತೆ ಗೊತ್ತಾ? ಸಖತ್​ ಇಂಟ್ರೆಸ್ಟಿಂಗಾಗಿದೆ

ತಪ್ಪಾಗಿ ಹಣವನ್ನು ಕಳುಹಿಸಿದ್ದರೆ ಹಣ ಸ್ವೀಕರಿಸಿದ ವ್ಯಕ್ತಿಯನ್ನು ಸಂಪರ್ಕಿಸಿ ಮರುಪಾವತಿಗೆ ವಿನಂತಿಸಬೇಕು. ಅಗತ್ಯ ವಹಿವಾಟು ವಿವರಗಳನ್ನು ಒದಗಿಸಿ ಮತ್ತು ಹಣವನ್ನು ಮರುಪಾವತಿಸಲು ಅವರ ಸಹಕಾರವನ್ನು ಕೇಳಬೇಕು.

ಇದನ್ನೂ ಓದಿ: ಸುನೀತಾ ವಿಲಿಯಮ್ಸ್​ ಕರೆತರಲು ನಾಸಾಗೆ ಸಹಾಯ ಮಾಡುತ್ತಾ ಇಸ್ರೋ? ಏನಂದ್ರು ಸೋಮನಾಥ್

ಮಾತ್ರವಲ್ಲದೆ, ತಪ್ಪಾದ ವಹಿವಾಟು ಮಾಡಿದ ವ್ಯಕ್ತಿ UPI ಅಪ್ಲಿಕೇಶನ್ ಗ್ರಾಹಕ ಬೆಂಬಲ ತಂಡಕ್ಕೆ ವರದಿ ಮಾಡಬೇಕು. ಎಲ್ಲಾ ಸಂಬಂಧಿತ ಮಾಹಿತಿ ಮತ್ತು ವಹಿವಾಟಿನ ಪುರಾವೆಗಳನ್ನು ಹಂಚಿಕೊಳ್ಳಬೇಕು.

ಇದನ್ನೂ ಓದಿ: ಐಫೋನ್​​ ಬಳಕೆದಾರರೇ ಎಚ್ಚರ! ಈ ನಾಲ್ಕು ಚಿಹ್ನೆಗಳನ್ನು ತಪ್ಪಾಗಿ ಟೈಪ್​ ಮಾಡಿದ್ರೆ ಕ್ರ್ಯಾಶ್​ ಆಗುತ್ತೆ, ಹುಷಾರ್​

ಒಂದು ವೇಳೆ ಅಪ್ಲಿಕೇಶನ್‌ನ ಗ್ರಾಹಕ ಬೆಂಬಲದ ಮೂಲಕ ಸಮಸ್ಯೆಯನ್ನು ಪರಿಹರಿಸದಿದ್ದರೆ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (ಎನ್‌ಪಿಸಿಐ) ದೂರು ಸಲ್ಲಿಸಬೇಕು. ಹೆಚ್ಚಿನ ತನಿಖೆಗಾಗಿ ವಹಿವಾಟಿನ ವಿವರಗಳು ಮತ್ತು ಪೂರಕ ಸಾಕ್ಷ್ಯಗಳನ್ನು ಒದಗಿಸಬೇಕು.

ತಪ್ಪಾಗಿ ನಡೆಸಿದ ವಹಿವಾಟಿನ ಬಗ್ಗೆ ಸ್ವಂತ ಬ್ಯಾಂಕ್‌ಗೆ ತಿಳಿಸಬೇಕು. ಅಗತ್ಯವಿರುವ ಎಲ್ಲಾ ವಿವರಗಳು ಮತ್ತು ದಾಖಲಾತಿಗಳನ್ನು ಬ್ಯಾಂಕ್​ಗೆ ಒದಗಿಸಬೇಕು. ಈ ವೇಳೆ ಹಣವನ್ನು ಮರುಪಡೆಯಲು ಚಾರ್ಜ್‌ಬ್ಯಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅವರು ಸಹಾಯ ಮಾಡಬಹುದು.

ಹಣದ ವಹಿಮಾಡಿನಲ್ಲಿ ಸಮಸ್ಯೆಯಾದಾಗ, ತಪ್ಪಾಗಿ ವಹಿವಾಟು ನಡೆಸಿದಾಗ ಟೋಲ್-ಫ್ರೀ ಸಂಖ್ಯೆಗಳಿಗೆ ಕರೆ ಮಾಡಿ ಕೂಡ ತಿಳಿಸಬಹುದಾಗಿದೆ. 1800-120-1740 ಗೆ ಕರೆ ಮಾಡುವ ಮೂಲಕ ಮಾಹಿತಿ ಹಂಚಿಕೊಳ್ಳಬಹುದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UPI ಮೂಲಕ ತಪ್ಪಾಗಿ ವಹಿವಾಟು ನಡೆಸಿದ್ರೆ ಟೆನ್ಶನ್​ ಮಾಡ್ಬೇಡಿ.. ಈ ಮಾರ್ಗ ಅನುಸರಿಸಿ

https://newsfirstlive.com/wp-content/uploads/2024/08/UPI.webp

Load More