newsfirstkannada.com

ಸುನೀತಾ ವಿಲಿಯಮ್ಸ್​ ಕರೆತರಲು ನಾಸಾಗೆ ಸಹಾಯ ಮಾಡುತ್ತಾ ಇಸ್ರೋ? ಏನಂದ್ರು ಸೋಮನಾಥ್

Share :

Published August 23, 2024 at 1:41pm

    ಗಗನಯಾತ್ರಿಗಳನ್ನು ಕರೆತರಲು ಇಸ್ರೋದ ಮೊರೆ ಹೋಗಿದೆಯಾ ನಾಸಾ

    ಬಾಹ್ಯಾಕಾಶದಲ್ಲಿರುವ ಸುನೀತಾ ವಿಲಿಯಮ್ಸ್​ ಬರೋದು ಯಾವಾಗ?

    ನಾಸಾ ಮಾಡಿರುವ ಪ್ಲಾನ್​ ಎಂಥದ್ದು? ಇಸ್ರೋ ಮುಖ್ಯಸ್ಥ ಏನಂದ್ರು?

ಭಾರತ ಮೂಲದ ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ತಾಂತ್ರಿಕ ದೋಷದಿಂದ ಬಾಹ್ಯಾಕಾಶ ಸಿಲುಕಿಹಾಕಿಕೊಂಡಿದ್ದಾರೆ. ಕಳೆದ ಜೂನ್​ ತಿಂಗಳಿನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದು, ಒಂದು ವಾರದ ಯೋಜನೆಯೊಂದಿಗೆ ಹಿಂತಿರುಗಬೇಕಿತ್ತು. ಆದರೀಗ ಸುನೀತಾ ವಿಲಿಯಮ್ಸ್​​ ಹಿಂತಿರುಗಲು ಸಾಧ್ಯವಾಗದೆ 2 ತಿಂಗಳುಗಳು ಕಳೆದಿವೆ.

ನಾಸಾ ಬಾಹ್ಯಾಕಾಶದಲ್ಲಿ ಸಿಲುಕಿರುವ ಸುನೀತಾ ವಿಲಿಯಮ್ಸ್​ ಅವರನ್ನು ಕರೆ ತರಲು ಅನೇಕ ಮಾರ್ಗಗಳನ್ನು ಅನ್ವೇಷಿಸುತ್ತಿದೆ. ಇದೀಗ ಭಾರತ ಕೂಡ ನಾಸಾಗೆ ಸಹಾಯ ಮಾಡುತ್ತಾ ಎಂಬ ಪ್ರಶ್ನೆಯೊಂದು ಮೂಡಿದೆ. ಆದರೆ ಈ ಪ್ರಶ್ನೆಗೆ ಇಸ್ರೋದ ಮುಖ್ಯಸ್ಥ ಎಸ್​ ಸೋಮನಾಥ್​ ಉತ್ತರಿಸಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್​ಫೋನ್​ ಚಾರ್ಜಿಂಗ್​ ಪೋರ್ಟ್​ ಬಳಿ ಇರೋ ಸಣ್ಣ ರಂಧ್ರದ ವಿಶೇಷತೆ ಗೊತ್ತಾ? ಸಖತ್​ ಇಂಟ್ರೆಸ್ಟಿಂಗಾಗಿದೆ

ಸುನೀತಾ ವಿಲಿಯಮ್ಸ್​ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರಲು ರಷ್ಯಾ ಮತ್ತು ಯುಎಸ್​​ಗೆ ಮಾತ್ರ ಸಹಾಯ ಮಾಡಬಹುದಾಗಿದೆ ಎಂದು ಎಸ್​ ಸೋಮನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಐಫೋನ್​​ ಬಳಕೆದಾರರೇ ಎಚ್ಚರ! ಈ ನಾಲ್ಕು ಚಿಹ್ನೆಗಳನ್ನು ತಪ್ಪಾಗಿ ಟೈಪ್​ ಮಾಡಿದ್ರೆ ಕ್ರ್ಯಾಶ್​ ಆಗುತ್ತೆ, ಹುಷಾರ್​

ಈ ಕ್ಷಣದಲ್ಲಿ ಭಾರತದಿಂದ ನೇರವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅವರನ್ನು ರಕ್ಷಿಸಲು ಕ್ರಾಫ್ಟ್​ ಕಳುಹಿಸುವ ಸಾಮರ್ಥ್ಯ ನಮಗಿಲ್ಲ. ಯುನೈಟೆಡ್​ ಮತ್ತು ರಷ್ಯಾ ಮಾತ್ರ ಸಂಭಾವ್ಯ ಪರಿಹಾರಗಳನ್ನು ಒದಗಿಸುತ್ತವೆ. ಯುಎಸ್​​ ಕ್ರೂ ಡ್ರ್ಯಾಗನ್​​ ವಾಹನವನ್ನು ಹೊಂದಿದೆ. ರಷ್ಯಾ ಸೋಯುಜ್​​ ಹೊಂದಿದೆ. ಇದರ ಮೂಲಕ ರಕ್ಷಣಾ ಕಾರ್ಯ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​​ ಶಾಕ್​​ ಕೊಟ್ಟ KL ರಾಹುಲ್​ ನಿವೃತ್ತಿ ಸುದ್ದಿ.. ಇದು ಅಸಲಿಯೇ? ನಕಲಿಯೇ? ಇಲ್ಲಿದೆ ಮಾಹಿತಿ

ಎಲೋನ್​ ಮಸ್ಕ್​ನ ಸ್ಪೇಸ್​​ ಎಕ್ಸ್​​ ಕ್ರ್ಯೂ-9 ಮಿಷನ್​ ಮೂಲಕ ಗಗನಯತ್ರಿಗಳನ್ನು ಮರಳಿ ಭೂಮಿಗೆ ಕರೆತರಲು ನಾಸಾ ಯೋಚಿಸುತ್ತಿದೆ. ಸೆಪ್ಟೆಂಬರ್​ ಅಂತ್ಯಕ್ಕೆ ಈ ಕುರಿತು ನಿಗದಿ ಪಡಿಸಲಾಗಿದೆ. 2025ರಲ್ಲಿ ಕ್ರ್ಯೂ-9ನಲ್ಲಿ ಹಿಂತಿರುಗಲಿದ್ದಾರೆ ಎಂದು ಇಸ್ರೋ ಮುಖ್ಯಸ್ಥ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುನೀತಾ ವಿಲಿಯಮ್ಸ್​ ಕರೆತರಲು ನಾಸಾಗೆ ಸಹಾಯ ಮಾಡುತ್ತಾ ಇಸ್ರೋ? ಏನಂದ್ರು ಸೋಮನಾಥ್

https://newsfirstlive.com/wp-content/uploads/2024/08/S-Somanath.jpg

Load More