newsfirstkannada.com

ಬಿಗ್​​ ಶಾಕ್​​ ಕೊಟ್ಟ KL ರಾಹುಲ್​ ನಿವೃತ್ತಿ ಸುದ್ದಿ.. ಇದು ಅಸಲಿಯೇ? ನಕಲಿಯೇ? ಇಲ್ಲಿದೆ ಮಾಹಿತಿ

Share :

Published August 23, 2024 at 9:36am

Update August 23, 2024 at 9:37am

    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರೋ ಪೋಸ್ಟ್​

    ಕೆ ಎಲ್​ ರಾಹುಲ್ ಕುರಿತಂತೆ ಅಚ್ಚರಿ ಪೋಸ್ಟ್​ ಹಂಚಿಕೆ

    ಕನ್ನಡಿಗರಿಗೆ ಈ ಸುದ್ದಿ ಕೇಳಿ ಶಾಕ್​​! ಅಷ್ಟಕ್ಕೂ ಇದೇನಿದು?

ಟೀಂ ಇಂಡಿಯಾದ ಆಟಗಾರ ಕೆ ಎಲ್​ ರಾಹುಲ್​​ ನಿವೃತ್ತಿ ಘೋಷಿಸಿದ್ದಾರೆ ಎಂಬ ನಕಲಿ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅನೇಕರು ನಿವೃತ್ತಿ ಕುರಿತಿರುವ ಪೋಸ್ಟನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರಂತೂ ಈ ನಕಲಿ ಸುದ್ದಿ ತಿಳಿದು ಶಾಕ್​​ಗೆ ಒಳಗಾಗಿದ್ದಾರೆ.

ಸದ್ಯ ವೈರಲ್​ ಆಗುತ್ತಿರುವ ನಕಲಿ ಪೋಸ್ಟ್​ನಲ್ಲಿ ‘ಹೆಚ್ಚಿನ ಪ್ರತಿಬಿಂಬ ಮತ್ತು ಪರಿಗಣನೆಯ ನಂತರ, ನಾನು ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಏಕೆಂದರೆ ಕ್ರೀಡೆಯು ನನ್ನ ಜೀವನದಲ್ಲಿ ಅನೇಕ ವರ್ಷಗಳಿಂದ ಮಹತ್ವದ ಭಾಗವಾಗಿದೆ’ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಪೀಣ್ಯ ಮೆಟ್ರೋ ನಿಲ್ದಾಣದ ಮುಂದೆ ಭಾರೀ ಜನಸಂದಣಿ.. ಅಷ್ಟಕ್ಕೂ ಆಗಿದ್ದೇನು? ಇಂದು ಮೆಟ್ರೋ ಇಲ್ವಾ?

ಜೊತೆಗೆ ‘ನನ್ನ ವೃತ್ತಿಜೀವನದುದ್ದಕ್ಕೂ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಂದ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನಾನು ಆಳವಾಗಿ ಕೃತಜ್ಞನಾಗಿದ್ದೇನೆ. ಮೈದಾನದಲ್ಲಿ ಮತ್ತು ಹೊರಗೆ ನಾನು ಗಳಿಸಿದ ಅನುಭವಗಳು ಮತ್ತು ನೆನಪುಗಳು ನಿಜವಾಗಿಯೂ ಅಮೂಲ್ಯವಾಗಿವೆ. ನನ್ನ ದೇಶವನ್ನು ಪ್ರತಿನಿಧಿಸಿ ಮತ್ತು ಅನೇಕ ಪ್ರತಿಭಾವಂತ ವ್ಯಕ್ತಿಗಳ ಜೊತೆಗೆ ಆಡಿದ್ದಕ್ಕಾಗಿ ನಾನು ಗೌರವವನ್ನು ಹೊಂದಿದ್ದೇನೆ’.

ಇದನ್ನೂ ಓದಿ: 156 FDC ಔಷಧಿಗಳನ್ನು ಬ್ಯಾನ್​ ಮಾಡಿದ ಕೇಂದ್ರ ಸರ್ಕಾರ! ಹಾಗಿದ್ರೆ ಪ್ಯಾರೆಸಿಟಮಾಲ್ ಇನ್ಮುಂದೆ ಬರಲ್ವಾ?

‘ಮುಂದಿರುವ ಹೊಸ ಅಧ್ಯಾಯದ ಬಗ್ಗೆ ನಾನು ಉತ್ಸುಕನಾಗಿದ್ದರೂ, ಆಟದಲ್ಲಿ ಕಳೆದ ಸಮಯವನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಪೋಸ್ಟ್​ನಲ್ಲಿ ಬರೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​​ ಶಾಕ್​​ ಕೊಟ್ಟ KL ರಾಹುಲ್​ ನಿವೃತ್ತಿ ಸುದ್ದಿ.. ಇದು ಅಸಲಿಯೇ? ನಕಲಿಯೇ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2024/08/KL_RAHUL.jpg

Load More