newsfirstkannada.com

ಓವರ್​ ಟೇಕ್ ಮಾಡಲು ಹೋಗಿ ಸ್ಕಾರ್ಪಿಯೋ ಭೀಕರ ಅಪಘಾತ.. ಸ್ಥಳದಲ್ಲೇ ನಾಲ್ವರು ಸಾವು

Share :

Published June 1, 2024 at 2:56pm

  ಲಾರಿ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ

  ದುರ್ಘಟನೆಯಲ್ಲಿ ಮೂವರು ಗಂಭೀರ, ಆಸ್ಪತ್ರೆಯಲ್ಲಿ ಚಿಕಿತ್ಸೆ

  ಪೊಲೀಸರಿಂದ ಪ್ರಕರಣ ದಾಖಲು, ತನಿಖೆ ಆರಂಭಿಸಿದ್ದಾರೆ

ತೆಲಂಗಾಣದ ಯೆರವಳ್ಳಿ ಮಂಡಳ್ ಜಂಕ್ಷನ್​ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು-ಲಾರಿಗೆ ಗುದ್ದಿದ ಪರಿಣಾಮ ದುರಂತ ಸಂಭವಿಸಿದೆ.

ಆಂಧ್ರಪ್ರದೇಶದಿಂದ ಹೈದರಾಬಾದ್​​ಗೆ ಸ್ಕಾರ್ಪಿಯೋ ಕಾರು ಪ್ರಯಾಣಿಸುತ್ತಿತ್ತು. ಕಾರಿನಲ್ಲಿ ಒಟ್ಟು 7 ಪ್ರಯಾಣಿಕರಿದ್ದರು. ಯೆರವಳ್ಳಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕಾರಿನ ಡ್ರೈವರ್ ತುಂಬಾ ಸ್ಪೀಡ್​ನಿಂದ ಬರುತ್ತಿದ್ದರು. ವೇಗವಾಗಿ ಹಿಂದಿನಿಂದ ಬಂದ ಸ್ಕಾರ್ಪಿಯೋ ಡ್ರೈವರ್​, ಲಾರಿಯನ್ನು ಓವರ್​ ಟೇಕ್ ಮಾಡಲು ಯತ್ನಿಸಿದಾಗ ಅಪಘಾತ ಸಂಭವಿಸಿದೆ.

ಇದನ್ನೂ ಓದಿ:ವಿಶ್ವಕಪ್​ಗೂ ಮುನ್ನವೇ ಟೀಂ ಇಂಡಿಯಾದಲ್ಲಿ ಅಪಸ್ವರ.. ರೋಹಿತ್, ದ್ರಾವಿಡ್​ರಿಂದ ಭಾರೀ ಆಕ್ರೋಶ..!

ಇಬ್ಬರು ಮಹಿಳೆಯರು, ಒಂದು ಮಗು ಹಾಗೂ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ.. ಆದರೆ ಈ ಗ್ರಾಹಕರಿಗೆ ಮೂರು ತಿಂಗಳಿನಿಂದ ರಿಲೀಫ್ ಸಿಕ್ಕಿಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓವರ್​ ಟೇಕ್ ಮಾಡಲು ಹೋಗಿ ಸ್ಕಾರ್ಪಿಯೋ ಭೀಕರ ಅಪಘಾತ.. ಸ್ಥಳದಲ್ಲೇ ನಾಲ್ವರು ಸಾವು

https://newsfirstlive.com/wp-content/uploads/2024/06/SCORPIO.jpg

Load More