Advertisment

ರೇಣುಕಾಸ್ವಾಮಿ ಕೇಸ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಚಿಕ್ಕಣ್ಣನ ಬೆನ್ನಲ್ಲೇ ‘ಗರಡಿ’ ನಟನಿಗೂ ಸಂಕಷ್ಟ! ಠಾಣೆಗೆ ಬನ್ನಿ ಎಂದ ಪೊಲೀಸರು

author-image
AS Harshith
Updated On
ರೇಣುಕಾಸ್ವಾಮಿ ಕೇಸ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಚಿಕ್ಕಣ್ಣನ ಬೆನ್ನಲ್ಲೇ ‘ಗರಡಿ’ ನಟನಿಗೂ ಸಂಕಷ್ಟ! ಠಾಣೆಗೆ ಬನ್ನಿ ಎಂದ ಪೊಲೀಸರು
Advertisment
  • ‘ಗರಡಿ’ ಚಿತ್ರದ ನಟನಿಗೂ ಹತ್ಯೆ ಕೇಸ್‌ನಿಂದ ಸಂಕಷ್ಟ?
  • ಯಶಸ್ ಸೂರ್ಯ ಕೂಡ ಡಿ ಗ್ಯಾಂಗ್ ಪಾರ್ಟಿಯಲ್ಲಿ ಭಾಗಿ
  • ರೇಣುಕಾಸ್ವಾಮಿ ಕೊಲೆಯಾದ ದಿನ ಯಶಸ್ ಎಲ್ಲಿದ್ದರು ಗೊತ್ತಾ?

ರೇಣುಕಾಸ್ವಾಮಿ ಕೊಲೆ ಕೇಸ್​ನ ಜಾಲಾಡ್ತಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸ್ತಿದ್ದಾರೆ. ಈ ಮಧ್ಯೆ ಚಿಕ್ಕಣ್ಣಗೂ ವಿಚಾರಣೆ ನಡೆಸಿರೋ ಪೊಲೀಸರು ಮತ್ತೊಬ್ಬ ಸೆಲೆಬ್ರೆಟಿಗೆ ನೋಟಿಸ್ ಕೊಟ್ಟಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗಿದ್ದ ಸ್ಯಾಂಡಲ್‌ವುಡ್ ಮತ್ತೊಬ್ಬ ನಟನಿಗೂ ಸಂಕಷ್ಟ ಶುರುವಾಗಿದೆ.

Advertisment

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಪ್ರಮುಖ ಆರೋಪಿಯಾಗಿದ್ದಾರೆ. ಹೀಗಾಗಿ, ಪೊಲೀಸರು ದರ್ಶನ್​ ಬಗೆಗಿನ ಇಂಚಿಂಚೂ ಮಾಹಿತಿಯನ್ನ ಕಲೆ ಹಾಕ್ತಿದ್ದಾರೆ. ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ಬಳಿಕ ದರ್ಶನ್​ ಏನ್ಮಾಡಿದ್ರೂ? ಎಲ್ಲಿಗೆ ಹೋಗಿದ್ರೂ? ಅನ್ನೋ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ ರೇಣುಕಾಸ್ವಾಮಿ ಹತ್ಯೆ ದಿನ ದರ್ಶನ್ ಜೊತೆ ಕಾಣಿಸಿಕೊಂಡಿದ್ದ ಯಶಸ್ ಸೂರ್ಯಗೂ ಸಂಕಷ್ಟ ಎದುರಾಗಿದೆ.

publive-image

ಯಶಸ್ ಸೂರ್ಯಗೆ ಪೊಲೀಸರ ನೋಟಿಸ್ ಸಾಧ್ಯತೆ

ರಾಜ್ಯವೇ ಬೆಚ್ಚಿ ಬಿದ್ದ ಕೇಸ್.. ದರ್ಶನ್​ ಗ್ಯಾಂಗ್​ನಿಂದ ಹತ್ಯೆಯಾದ ರೇಣುಕಾಸ್ವಾಮಿ ಕೇಸ್​ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಿದೆ. ಈ ಮಧ್ಯೆ ಸ್ಯಾಂಡಲ್​ವುಡ್​ ಹಾಸ್ಯ ನಟ ಚಿಕ್ಕಣ್ಣನಿಗೂ ವಿಚಾರಣೆ ನಡಿದಿದೆ. ರೆಸ್ಟೋ ಬಾರ್‌ನಲ್ಲಿ ದರ್ಶನ್ ಜೊತೆ ಇದ್ದ ಸಂದರ್ಭದಲ್ಲಿ ಆಗಿರೋ ಸನ್ನಿವೇಶಗಳ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದೀಗ ಚಿಕ್ಕಣ್ಣ, ದರ್ಶನ್ ಜೊತೆಗಿದ್ದ ನಟ ಯಶಸ್ ಸೂರ್ಯಗೂ ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ.

ಸ್ಟೋನಿ ಬ್ರೂಕ್‌ನಲ್ಲಿ ಚಿಕ್ಕಣ್ಣ ಜೊತೆಗಿದ್ದ ನಟ ಯಶಸ್ ಸೂರ್ಯ

ಗರಡಿ ಚಿತ್ರದ ನಟ ಯಶಸ್ ಸೂರ್ಯನಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಯಶಸ್ ಸೂರ್ಯಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಕೊಲೆಯಾದ ದಿನ ಸ್ಟೋನಿ ಬ್ರೂಕ್‌ ರೆಸ್ಟೋ ಬಾರ್‌ನಲ್ಲಿ ಚಿಕ್ಕಣ್ಣ ಜೊತೆಗೆ ನಟ ಯಶಸ್ ಸೂರ್ಯ ಕೂಡಾ ಇದ್ರು. ಡಿ ಗ್ಯಾಂಗ್ ಮಾಡ್ತಿದ್ದ ಪಾರ್ಟಿಯಲ್ಲಿ ಭಾಗಿಯಾಗಿದ್ರು ಎಂಬ ಅಂಶ ತಿಳಿದುಬಂದಿದೆೆ. ಹೀಗಾಗಿ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

Advertisment

publive-image

ಇದನ್ನೂ ಓದಿ: ಚಿಕ್ಕಣ್ಣರನ್ನೂ ಫಜೀತಿಗೆ ಸಿಲುಕಿಸಿದ ದರ್ಶನ್.. ಪೊಲೀಸರು ಹಾಸ್ಯ ನಟನಿಗೆ ಕೇಳಿದ ಖಡಕ್ ಪ್ರಶ್ನೆಗಳೇನು?

ಇದಿಷ್ಟು ನಟರ ವಿಚಾರಣೆ ಮಾಹಿತಿಯಾದ್ರೆ, ಇತ್ತ ಬಂಧಿತ ಆರೋಪಿಗಳನ್ನ ಕರೆದೊಯ್ದು ಸ್ಥಳ ಮಹಜರು ನಡೆಸೋ ಪ್ರಕ್ರಿಯೆ ನಡೆಯುತ್ತಿದೆ. ಈ ಹೊತ್ತಲ್ಲಿ ಬಂಧಿತ ಡಿ ಗ್ಯಾಂಗ್‌ನ ಆರೋಪಿಗಳು ಕೊಲೆಯ ಬಳಿಕ ಟೆಂಪಲ್ ರನ್ ಮಾಡಿದ್ರಂತೆ..ಅಲ್ಲದೇ ಯಾವುದೇ ಪಶ್ಚಾತ್ತಾಪ ಇಲ್ಲದೇ ಬಟ್ಟೆ ಶಾಪಿಂಗ್ ಮಾಡಿದ್ರು ಅಂತ ತಿಳಿದುಬಂದಿದೆ. ಹೀಗಾಗಿ ಬೆಂಗಳೂರಿನ ಆರ್‌ಆರ್ ನಗರದ ಬಟ್ಟೆ ಅಂಗಡಿಗೆ ಆರೋಪಿಗಳನ್ನ ಕರೆದೊಯ್ದು ನಿನ್ನೆ ಸ್ಥಳ ಮಹಜರು ಮಾಡಿದ್ದಾರೆ. ಡಿ ಗ್ಯಾಂಗ್‌ನ ಸದಸ್ಯರಾದ ಲಕ್ಷಣ್ ಹಾಗೂ ನಾಗರಾಜ್‌ನ ಕರೆದೊಯ್ದು ಸ್ಪಾಟ್ ವೆರಿಫಿಕೇಷನ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್​ ಗ್ಯಾಂಗ್​ಗೆ ರೇಣುಕಾಸ್ವಾಮಿ ಸಿಕ್ಕಿಬಿದ್ದಿದ್ದು ಹೇಗೆ? ಪವಿತ್ರಾ ಗೌಡಗೆ ಏನ್​ ಮೆಸೇಜ್​ ಕಳಿಸಿದ್ರು?

Advertisment

ಇದಷ್ಟೇ ಅಲ್ಲ. ಹೊಸ ಬಟ್ಟೆ ಧರಿಸಿದವರು ನೇರವಾಗಿ ಆರ್‌ಆರ್ ನಗರದ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿದ್ರಂತೆ. ಹೀಗಾಗಿ ದೇವಸ್ಥಾನದ ಬಳಿಯೂ ಆರೋಪಿಗಳನ್ನ ಕರೆ ತಂದು ಮಹಜರು ಮಾಡಿಸಿದ್ದಾರೆ. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳನ್ನ ಪರಿಶೀಲನೆ ಮಾಡಿದ್ದಾರೆ.

publive-image

ಇದನ್ನೂ ಓದಿ: ’ನನ್ನ ಹೆಂಡತಿ ಗರ್ಭಿಣಿ ಬಿಟ್ಬಿಡಿ ಅಕ್ಕ‘ ಎಳೆ ಎಳೆಯಾಗಿ ಬೇಡಿಕೊಂಡಿದ್ದ ರೇಣುಕಾಸ್ವಾಮಿ.. ಆದರೂ ಬಿಡಲೇ ಇಲ್ಲ..

ಒಟ್ಟಾರೆ, ಇನ್ನು, ಪಬ್​ನಲ್ಲಿ ದರ್ಶನ್, ಚಿಕ್ಕಣ್ಣ, ಯಶಸ್ ಸೂರ್ಯ ಜೊತೆ ಓರ್ವ ನಿರ್ಮಾಪಕರು ಕೂಡ ಇದ್ದರು ಎನ್ನಲಾಗ್ತಿದೆ. ಆದ್ರೆ, ಅವರ ಕುರಿತು ಮಾಹಿತಿ ಹೊರಬಿದ್ದಿಲ್ಲ. ಅದೇನೆ ಹೇಳಿ, ಇದನ್ನೆಲ್ಲಾ ಗಮನಿಸ್ತಾ ಇದ್ರೆ, ದರ್ಶನ್ ಸಹವಾಸ ಮಾಡಿದವರು ಯಾರೇ ಇರಲಿ ಅವರಿಗೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತೋದು ತಪ್ಪೋದಿಲ್ಲ ಅನ್ಸುತ್ತೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment