ನಿಮ್ಮ ತುಪ್ಪದ ಪರಿಶುದ್ಧತೆಯ ಬಗ್ಗೆ ಅನುಮಾನವಿದ್ದರೆ ಇಲ್ಲಿವೆ ಟಿಪ್ಸ್
ಬಂಗಾರದ ಹಳದಿ ರಂಗು ಹೊಂದದ ತುಪ್ಪದ ಬಗ್ಗೆ ಇರಲಿ ಅನುಮಾನ
ಕೊಬ್ಬಿನಂಶ ಇರುವ ತುಪ್ಪವು ಎಂದಿಗೂ ಹರಳು ಹರಳಾಗಿರುವುದಿಲ್ಲ
ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ ತುಪ್ಪವೂ ಶುದ್ಧವಿಲ್ವಾ ಅನ್ನೋ ಸಂಶಯಗಳು ತಲೆ ಎತ್ತಿವೆ. ತುಪ್ಪ ಅನ್ನೋದು ಪ್ರತಿ ಭಾರತೀಯರ ಅಡುಗೆಮನೆಯಲ್ಲಿ ತನ್ನದೇ ಒಂದು ಸ್ಥಾನವನ್ನು ಸಹಸ್ರಾರು ವರ್ಷಗಳಿಂದ ಕಾಯ್ದುಕೊಂಡು ಬಂದಿದೆ. ನೈವೇದ್ಯದಿಂದ ಹಿಡಿದು ಮಹಾಯಾಗದವರೆಗೂ ನಮಗೆ ತುಪ್ಪ ಬೇಕೇ ಬೇಕು. ಹೀಗಾಗಿ ಅದು ಅಶುದ್ಧಿಯಿಂದ ಕೂಡಿದ್ದರೆ. ನಾವು ಮಾಡುವ ಎಲ್ಲಾ ಪುಣ್ಯ ಕಾರ್ಯಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆಯೇ. ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ? ಇಲ್ಲವೇ ಕಲಬೆರಕೆಯಿಂದ ಕೂಡಿದೆಯಾ ಅನ್ನೋದನ್ನ ಕಂಡು ಹಿಡಿಯಲು ಇಲ್ಲಿ ಕೆಲವು ಟಿಪ್ಸ್ಗಳಿವೆ.
ಇದನ್ನೂ ಓದಿ: ಒಂದು ಎಕರೆ ಜಮೀನು ಇದ್ಯಾ? ಕೇವಲ 4 ಲಕ್ಷದಲ್ಲಿ ಕೋಟಿ ಕೋಟಿ ದುಡಿಯೋದು ಹೇಗೆ?
ನಿಮ್ಮ ತುಪ್ಪ ಶುದ್ಧವಿದೆಯಾ ಅನ್ನೋದು ತಿಳಿದುಕೊಳ್ಳಬೇಕಾದ ಮೊದಲ ಹೆಜ್ಜೆ ಅದರ ಬಂಗಾರದ ಹಳದಿ ಬಣ್ಣದಿಂದ ಕೂಡಿದೆಯಾ ಇಲ್ವಾ ಅನ್ನೋದು. ಶುದ್ಧ ತುಪ್ಪ ಅಪ್ಪಟ ಬಂಗಾರದ ಹಳದಿ ಬಣ್ಣದಿಂದ ಕೂಡಿರುತ್ತದೆ. ಇದರಾಚೆ ಇರುವ ಮೇಲೆ ಹರಳು ಹರಳು ಇದ್ದರೂ ಬಿಳಿ ಬಣ್ಣದಿಂದ ಕೂಡಿದ್ದರೆ ಅದು ಅಪ್ಪಟ ಕಲಬೆರಕೆ ತುಪ್ಪ ಎಂದು ತಿಳಿದುಕೊಳ್ಳಿ.
ಇನ್ನೊಂದು ವಿಷಯ ಅಂದ್ರೆ ತುಪ್ಪವನ್ನು ಸಿದ್ಧಗೊಳಿಸಿ ಅದನ್ನು ತೆಗೆದಿಟ್ಟಾಗ ಮೇಲೆ ಎಣ್ಣೆಯಂತಹ ಹೊದಿಕೆ ಬಂದಿರುತ್ತದೆ. ಹಾಗಿದ್ದಲ್ಲಿ ಅದು ಪ್ಯೂರ್ ತುಪ್ಪ. ಕೊಬ್ಬಿನ ಅಂಶ ಕೂಡಿದ ತುಪ್ಪಕ್ಕೆ ಹೋಲಿಸಿದರೆ ಪ್ಯೂರ್ ತುಪ್ಪ ಹೆಚ್ಚು ಹರಳು ಹರಳಾಗಿರುತ್ತದೆ. ತುಪ್ಪ ಹರಳುಗಟ್ಟಿರುವುದರುವುದನ್ನ ನೋಡಿದರೆನೇ ಗೊತ್ತಾಗುತ್ತದೆ ಅದರ ಪರಿಶುದ್ಧತೆ. ಇನ್ನೂ ಶುದ್ಧ ತುಪ್ಪದ ಘಮದಲ್ಲಿ ಬೆಣ್ಣೆಯ ಘಮದ ಒಂದು ಸಾಮ್ಯತೆ ಇರುತ್ತದೆ. ಅದು ಇಲ್ಲದೇ ಹೋದಲ್ಲಿ ಅದು ಪರಿಶುದ್ಧ ತುಪ್ಪವಲ್ಲ ಎಂದು ಪರಿಗಣಿಸಬೇಕು.
ಇದನ್ನೂ ಓದಿ: ಕೇವಲ 500 ರೂ ಇಂದ ಫ್ಯಾಶನ್ ಡಿಸೈನಿಂಗ್ ಶುರು ಮಾಡಿದ ಈತ 230 ಕೋಟಿ ಒಡೆಯ; ಬೆಳೆದಿದ್ದೇ ರೋಚಕ!
ಇದೆಲ್ಲದರ ಆಚೆಯೂ ನೀವು ಯಾವುದೋ ಒಂದು ಅಪರಿಚಿತ ಬ್ರ್ಯಾಂಡ್ನ ತುಪ್ಪವನ್ನು ಮನೆಗೆ ತಂದಿದ್ದು ಅದರ ಪರಿಶುದ್ಧತೆ ಬಗ್ಗೆ ಅನುಮಾನ ಇದ್ದಿದ್ದೇ ಆದಲ್ಲಿ, ನೀವು ಒಂದು ಪರೀಕ್ಷೆಯನ್ನು ಮಾಡಬಹುದು. ಒಂದು ಸ್ಪೂನ್ ಆ ತುಪ್ಪವನ್ನು ತೆಗೆದುಕೊಂಡು. ಒಂದು ನೀರಿನ ಗ್ಲಾಸಿನಲ್ಲಿ ಅದನ್ನು ಹಾಕಬೇಕು. ಪರಿಶುದ್ಧ ತುಪ್ಪವಾದ್ರೆ ಮಜ್ಜಿಗೆಯ ಮೇಲೆ ಬೆಣ್ಣೆ ತೇಲಿದಂತೆ ತೇಲುತ್ತದೆ. ಇಲ್ಲವಾದಲ್ಲಿ ಅದು ಕೂಡ ನೀರಿನೊಂದಿಗೆ ಬೆರೆತು ನೀರಿನಲ್ಲಿ ಹರಡಿಕೊಳ್ಳುತ್ತದೆ. ಈ ಎಲ್ಲಾ ಗುಣಲಕ್ಷಣಗಳ ಮೂಲಕ ಹಾಗೂ ಪರೀಕ್ಷೆಯ ಮೂಲಕ ಕಂಡು ಹಿಡಿಯಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ