Advertisment

ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿಯ ಚಂದ್ರಪ್ರಭಾ; ವಧು ಯಾರು ಗೊತ್ತಾ..?

author-image
Ganesh Nachikethu
Updated On
ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿಗಿಲಿಯ ಚಂದ್ರಪ್ರಭಾ; ವಧು ಯಾರು ಗೊತ್ತಾ..?
Advertisment
  • ದಾಂಪತ್ಯ ಜೀವನ ಕಚಗುಳಿ ಇಟ್ರಾ ಚಂದ್ರಪ್ರಭಾ!
  • ಗಿಚ್ಚಿಗಿಲಿಗಿಲಿ ಚಂದ್ರಪ್ರಭಾ ಮನಗೆದ್ದಿದ್ದು ಯಾರು?
  • ಫ್ಯಾನ್ಸ್‌ಗೆ ಶಾಕಿಂಗ್ ನ್ಯೂಸ್‌ ಕೊಟ್ಟ ಚಂದ್ರಪ್ರಭಾ

ಕಿರುತೆರೆ ಜನಪ್ರಿಯ ಶೋ ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭಾ ಅವರು ಮದುವೆ ಮಾಡಿಕೊಂಡಿರೋ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ.

Advertisment


ಹಾಸ್ಯ ಕಲಾವಿದ ಚಂದ್ರಪ್ರಭಾ ಅವರು ಸದ್ಯ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಚಂದ್ರಪ್ರಭಾ ಬ್ಯುಸಿಯಾಗಿದ್ದಾರೆ. ಸದಾ ನಗುಮುಖದಲ್ಲೇ ಸಖತ್​​ ಕಾಮಿಡಿಗಳನ್ನು ಮಾಡುತ್ತಾ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಾ ಇರುತ್ತಾರೆ. ತಮ್ಮ ಅದ್ಭುತ ನಟನೆಯ ಮೂಲಕ ಮನರಂಜನೆ ನೀಡುತ್ತಿದ್ದಾರೆ.


ಇನ್ನು, ಗಿಚ್ಚಿ ಗಿಲಿಗಿಲಿ ಶೋನಲ್ಲಿ ನನಗೆ ಮದುವೆಯಾಗಿಲ್ಲ ಹೆಣ್ಣು ಕೊಡಿ, ಹುಡುಗಿ ಬೇಕು ಎಂದು ಆಗಾಗ ಹೇಳುತ್ತಿದ್ದ ಚಂದ್ರಪ್ರಭಾ ಅವರು ಇದೀಗ ಸದ್ದಿಲ್ಲದೇ ಭಾರತಿ ಪ್ರಿಯಾ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿದ ಫ್ಯಾನ್ಸ್​ಗಳಗೆ ಅಚ್ಚರಿ ಉಂಟಾಗಿದೆ. ಈ ಫೋಟೋ ಹಾಗೂ ವಿಡಿಯೋ ಭಾರತಿ ಪ್ರಿಯಾ ಎಂಬುವವರು ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಈ ಮದುವೆಯ ಬಗ್ಗೆ ಹಾಸ್ಯ ನಟ ಚಂದ್ರಪ್ರಭಾ ಅವರು ಅಧಿಕೃತವಾಗಿ ಮಾಹಿತಿ ನೀಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment