/newsfirstlive-kannada/media/media_files/2025/09/18/health-1-2025-09-18-20-16-09.jpg)
ಮುಖ, ದೇಹದ ಸೌಂದರ್ಯ ಜೊತೆಗೆ ಪಾದವೂ ಚೆನ್ನಾಗಿ ಕಾಣಿಸಬೇಕು ಎನ್ನವುದು ಎಲ್ಲರ ಆಶಯ ಆಗಿರುತ್ತದೆ. ಆದರೆ ಏನೇ ಮಾಡಿದರೂ ಪಾದದ ಬಿರುಕುಗಳ ಮಾತ್ರ ಕಡಿಮೆಯಾಗಲ್ಲ. ಜೊತೆಗೆ ನೋವು ಕೂಡ ಕಾಡುತ್ತಿರುತ್ತದೆ. ಪುರುಷ ಮತ್ತು ಸ್ತ್ರೀಯರು ಇಬ್ಬರಲ್ಲೂ ಒಣಗಿರುವ, ಒಡೆದ ಹಾಗೂ ಬಿರುಕು ಬಿಟ್ಟ ಪಾದಗಳು ಬಹುತೇಕರನ್ನು ಕಾಡುವ ಸಾಮಾನ್ಯ ಸಮಸ್ಯೆ ಆಗಿದೆ. ಸದ್ಯ ಈ ಬಗ್ಗೆ ಪರಿಹಾರ ಏನು ಎನ್ನುವ ಮಾಹಿತಿ ಇಲ್ಲಿದೆ.
ಒಣಗಿರುವ, ಒಡೆದ ಹಾಗೂ ಬಿರುಕು ಬಿಟ್ಟ ಪಾದಗಳನ್ನು ಚೆಂದವಾಗಿ, ಅಂದವಾಗಿ ಕಾಣಿಸಬೆಕು ಎಂದರೆ ಪ್ರತಿದಿನ 10 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿಗೆ ಉಪ್ಪನ್ನು ಹಾಕಿ ಅದರೊಳಗೆ ಕಾಲುಗಳನ್ನು ಇಡಿ. ಇದರಿಂದ ಹಿಮ್ಮಡಿಯಲ್ಲಿ ಸೋಂಕಿದ್ದರೇ ಅದನ್ನು ಈ ಉಪ್ಪುನೀರು ನಾಶ ಮಡುತ್ತೆ. ಅಲ್ಲದೇ ಹಿಮ್ಮಡಿ ನೋವು ಕಡಿಮೆ ಆಗುವುದರ ಜೊತೆ ಒಡೆಯುವುದು ಕೂಡ ಕಡಿಮೆ ಆಗುತ್ತದೆ.
ವಾರಕ್ಕೆ ಒಂದು ಬಾರಿ ಉಗುರುಬೆಚ್ಚಗಿನ ನೀರಿನಲ್ಲಿ ಕೆಲ ನಿಮಿಷಗಳ ಕಾಲ ಪಾದಗಳನ್ನು 20 ನಿಮಿಷ ಇರಿಸಿ ನಂತರ ಸ್ಕ್ರಬ್ ಮಾಡಬೇಕು. ಬೇಕಾದರೆ ಮಾಯಿಶ್ಚರ್ ಕ್ರೀಮ್ ಅನ್ನು ಉಪಯೋಗಿಸಬಹುದು. ಸ್ನಾನ ಮಾಡುವಾಗ ಸಮಯ ಸಿಕ್ಕರೇ ಆಗಾಗ ಪಾದಗಳನ್ನು ಉಜ್ಜುತ್ತ ಇರಿ. ಇದರಿಂದ ಪಾದಗಳಲ್ಲಿರುವ ಕೊಳೆ ಹೋಗುತ್ತದೆ.
ಇದನ್ನೂ ಓದಿ: ಪಾಸಿಟೀವ್ ವಿಷಯದೊಂದಿಗೆ ದಿನ ಆರಂಭಿಸಿ.. ಆರೋಗ್ಯಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ..!
ಬಿರುಕು ಬಿಟ್ಟ ಪಾದಗಳ ಆಳಕ್ಕೆ ಹೋಗಿ ವ್ಯಾಸಲಿನ್, ಪೆಟ್ರೋಲಿಯಂ ಜೆಲ್ಲಿಯು ಆರೈಕೆ ಮಾಡುತ್ತವೆ. ಪ್ರಮುಖವಾಗಿ ರಕ್ತಸ್ರಾವವನ್ನು ತಡೆಗಟ್ಟುತ್ತವೆ. ನೀವು ಸ್ನಾನ ಮಾಡಿದ ಬಳಿಕ ವ್ಯಾಸಲಿನ್ ಅನ್ನು ಪಾದಗಳಿಗೆ ಹಚ್ಚಿ ಒಂದು ನಿಮಿಷ ಮಸಾಜು ಮಾಡಿದರೆ ಸಾಕು. ಇನ್ನು ಪಾದಗಳು ಒಡೆಯುವುದನ್ನ ತಪ್ಪಿಸಲು ಕೊಬ್ಬರಿ ಎಣ್ಣೆ, ಎಳ್ಳಿನ ಎಣ್ಣೆ ಬಳಸುವುದ ಉತ್ತಮ. ಈ ಎಣ್ಣೆಗಳಲ್ಲಿ ಹಲವಾರು ಪೋಷಕಾಂಶ ಇರುವುದರಿಂದ ಬಿರುಕು ಮಾಯಾವಾಗುತ್ತವೆ. ಪಾದಗಳು ಉತ್ತಮ ರೀತಿಯಲ್ಲಿ ಕಾಣುತ್ತವೆ ಜೊತೆಗೆ ನೋವು ಕೂಡ ಕಡಿಮೆ ಆಗುತ್ತದೆ.
ಯಾರಿಗೆ ಒಣಚರ್ಮ ಇರುತ್ತೋ ಅಂಥವರಿಗೆ ಹಿಮ್ಮಡಿ ಒಣಗುವ, ಬಿರುಕು ಬಿಡುವ, ಒಡೆಯುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಸೋರಿಯಾಸಿಸ್ ಅಥವಾ ಎಕ್ಜಿಮಾ (Psoriasis or eczema) ಕೂಡ ಕಾರಣವಾಗುವ ಸಾಧ್ಯತೆ ಇರುತ್ತದೆ. ನೀವು ಆರೈಕೆ ಮಾಡಿದರೂ ನಿಮ್ಮ ಪಾದಗಳು ಸರಿ ಹೋಗುತ್ತಿಲ್ಲ ಎಂದರೆ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಸಲಹೆ ಪಡೆದುಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ