/newsfirstlive-kannada/media/post_attachments/wp-content/uploads/2024/09/Iphone-16-New.jpg)
ಆ್ಯಪಲ್​ ಪ್ರಿಯರ iPhone 16 ಸಿರೀಸ್​ ಈಗಾಗಲೇ ಬಿಡುಗಡೆಗೊಂಡಿದೆ. ಮಾರುಕಟ್ಟೆಗೆ ಬರಲು ಬಾಕಿ ಇದೆ. ಆದರೆ ಅದಕ್ಕೂ ಮುನ್ನವೇ ಫ್ರೀ ಆರ್ಡರ್​ ಮಾಡುವ ಅವಕಾಶವನ್ನು ಕಂಪನಿ ತೆರೆದಿಟ್ಟಿದೆ.
ಭಾರತದಲ್ಲಿ ಆ್ಯಪಲ್​ ಉತ್ಪನ್ನಗಳ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಂತೆಯೇ ಐಫೋನ್​​ 16ಗೂ ವಿಶೇಷ ಬೇಡಿಕೆಯಿದೆ. ಬೇಡಿಕೆಗೆ ಅನುಗುಣವಾಗಿ ಐಫೋನ್​ 16 ಸಿರೀಸ್​​ ಅನ್ನು ಮಾರಾಟ ಮಾಡಲು ಆ್ಯಪಲ್​ ಕಂಪನಿ ಮುಂದಾಗಿದೆ. ಅದಕ್ಕಾಗಿ ಫ್ರೀ- ಆರ್ಡರ್​ ಮಾಡುವ ಅವಕಾಶ ನೀಡಿದೆ.
ಸೆಪ್ಟೆಂಬರ್​​ 20ರಿಂದ ಐಫೋನ್​ 16 ಸಿರೀಸ್​ ಮಾರಾಟಕ್ಕೆ ಲಭ್ಯವಿದೆ. ಆ್ಯಪಲ್​ ಸ್ಟೋರ್​​ ಮತ್ತು ಸ್ಥಳೀಯ ಮಾರುಕಟ್ಟೆಗಳಲ್ಲಿ ನೂತನ ಪ್ರಾಡೆಕ್ಟ್​​​ ಖರೀದಿಸಲು ಸಿಗಲಿದೆ. ಅಂದಹಾಗೆಯೇ ಗ್ರಾಹಕರಿಗೆ ಐಫೋನ್​ 16 ನಾಲ್ಕು ಮಾದರಿಯಲ್ಲಿ ಸಿಗಲಿದೆ.
ಐಫೋನ್​ ಫ್ರೀ-ಆರ್ಡರ್​ ಆಫರ್​
ಐಫೋನ್​ 16 ಸಿರೀಸ್​​ ಅನ್ನು ಗ್ರಾಹಕರು ಮುಂಗಡವಾಗಿ ಬುಕ್ಕಿಂಗ್​​ ಮಾಡಿದರೆ ಕೆಲವು ಆಫರ್​​ ಪಡೆಯಬಹುದಾಗಿದೆ. ಅಮೆರಿಕನ್​​ ಎಕ್ಸ್​​ಪ್ರೆಸ್​​, ಆ್ಯಕ್ಸಿಸ್​​ ಬ್ಯಾಂಕ್​​ ಮತ್ತು ಐಸಿಐಸಿಐ ಬ್ಯಾಂಕ್​ ಸೇರಿ ಆಯ್ದ ಬ್ಯಾಂಕ್​ಗಳ ಮೂಲಕ 5 ಸಾವಿರ ಕ್ಯಾಶ್​ಬ್ಯಾಕ್​ ಸಿಗಲಿದೆ. ಜೊತೆಗೆ ಮೂರು ಮತ್ತು 6 ತಿಂಗಳ ಬಡ್ಡಿರಹಿತ ಮಾಸಿಕ ಕಂತು ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ.
/newsfirstlive-kannada/media/post_attachments/wp-content/uploads/2024/09/iPhone16-1.jpg)
ಇನ್ನು ಹಳೆಯ ಫೋನ್​ ವಿನಿಮಯ ಮಾಡುವ ಆಯ್ಕೆಯಿದೆ. ಗ್ರಾಹಕರು 67,500 ರೂಪಾಯಿವರೆಗೆ ಈ ರಿಯಾಯಿತಿ ಪಡೆಯಬಹುದಾಗಿದೆ. ಇದಲ್ಲದೆ ಗ್ರಾಹಕರಿಗೆ ಹೆಚ್ಚುವರಿ ವೆಚ್ಚವಿಲ್ಲದೆ ಆ್ಯಪಲ್​ ಮ್ಯೂಸಿಕ್​​, ಆ್ಯಪಲ್​ ಟಿವಿ+ ಮತ್ತು ಆ್ಯಪಲ್​​ ಆರ್ಕೆಡ್​​ಗೆ ಮೂರು ತಿಂಗಳ ಚಂದಾದಾರಿಕೆಯನ್ನು ನೀಡಿದೆ.
iPhone 16: ಭಾರತದ ಬೆಲೆ
128GB ಸಂಗ್ರಹ: 79,900 ರೂ
256GB ಸಂಗ್ರಹ: ರೂ 89,900
512GB ಸಂಗ್ರಹ: ರೂ 109,900
iPhone 16 Plus: ಬೆಲೆ
128GB ಸಂಗ್ರಹ: 89,900 ರೂ
256GB ಸಂಗ್ರಹ: ರೂ 99,900
512GB ಸಂಗ್ರಹ: ರೂ 119,900
iPhone 16 Pro: ಬೆಲೆ
128GB ಸಂಗ್ರಹ: ರೂ 119,900
256GB ಸಂಗ್ರಹ: ರೂ 129,900
512GB ಸಂಗ್ರಹ: ರೂ 149,900
1TB ಸಂಗ್ರಹಣೆ: ರೂ 169,900
iPhone 16 Pro Max: ಬೆಲೆ
256GB ಸಂಗ್ರಹ: ರೂ 144,900
512GB ಸಂಗ್ರಹ: ರೂ 164,900
1TB ಸಂಗ್ರಹಣೆ: ರೂ 184,900
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us