Advertisment

ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್​; ಇದನ್ನೂ ಮಾಡಲಿಲ್ಲ ಅಂದ್ರೆ ಈ ತಿಂಗಳ ಸಂಬಳ ಕಟ್

author-image
Bheemappa
Updated On
ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್​; ಇದನ್ನೂ ಮಾಡಲಿಲ್ಲ ಅಂದ್ರೆ ಈ ತಿಂಗಳ ಸಂಬಳ ಕಟ್
Advertisment
  • ಎಲ್ಲ ಸರ್ಕಾರಿ ಅಧಿಕಾರಿಗಳು ಸರ್ಕಾರ ಆದೇಶ ಪಾಲಿಸಬೇಕು
  • ಹಲವು ಗಡುವುಗಳನ್ನು ನೀಡಿದರೂ ಸಿಬ್ಬಂದಿ ಮಾತು ಕೇಳಿಲ್ಲ
  • ಸಂಬಳನೂ ಕಡಿತದ ಜೊತೆಗೆ ಬಡ್ತಿಗಳ ಮೇಲೂ ಪರಿಣಾಮ

ಲಕ್ನೋ: ಸರ್ಕಾರಿ ಅಧಿಕಾರಿಗಳು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರವನ್ನು ಮಾನವ ಸಂಪದಾ ಎನ್ನುವ ಸರ್ಕಾರಿ ಪೋರ್ಟಲ್​ನಲ್ಲಿ ಆಗಸ್ಟ್ 31 ರೊಳಗೆ ಘೋಷಣೆ ಮಾಡಿಲ್ಲ ಎಂದರೆ ಈ ತಿಂಗಳ ಸಂಬಳ ಕಳೆದುಕೊಳ್ಳುತ್ತಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ಆದೇಶದಲ್ಲಿ ತಿಳಿಸಿದೆ.

Advertisment

ಇದನ್ನೂ ಓದಿ: ‘ದರ್ಶನ್​ರನ್ನ ಆ ತರ ನೋಡೋದಕ್ಕೆ ಕಷ್ಟ ಆಗ್ತಿದೆ, ನಿಮ್ಮಷ್ಟೇ ಮಿಸ್ ಮಾಡಿಕೊಳ್ತಿದ್ದೇನೆ’.. ನಟಿ ರಚಿತಾ ರಾಮ್

ಸರ್ಕಾರಿ ಅಧಿಕಾರಿಗಳು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳನ್ನು ಮಾನವ ಸಂಪದಾ ಸರ್ಕಾರಿ ಪೋರ್ಟಲ್​ನಲ್ಲಿ ಘೋಷಣೆ ಮಾಡುವಂತೆ ಈ ಮೊದಲು ಸಾಕಷ್ಟು ಬಾರಿ ತಿಳಿಸಲಾಗಿತ್ತು. ಈ ಬಗ್ಗೆ ಸಿಎಂ ಆದಿತ್ಯನಾಥ್​ ಸರ್ಕಾರ ಹಲವು ಬಾರಿ ಗಡುವುಗಳನ್ನು ನಿಗದಿಪಡಿಸಿತ್ತು. ಆದರೂ ಸರ್ಕಾರಿ ಅಧಿಕಾರಿಗಳು ಆ ಗಡುವು ಮೀರಿದರು ತಮ್ಮ ಆಸ್ತಿ ವಿವರ ಘೋಷಣೆ ​ ಮಾಡಿರಲಿಲ್ಲ. ಹೀಗಾಗಿ ಈ ಸಲ ಖಡಕ್ ಆಗಿ ವಾರ್ನ್ ಮಾಡಿರುವ ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರ ಆಗಸ್ಟ್​ 31ರೊಳಗೆ ತಮ್ಮ ಆಸ್ತಿಯ ಮಾಹಿತಿ ಘೋಷಿಸಿಲ್ಲ ಅಂದ್ರೆ ಈ ತಿಂಗಳ ಸಂಬಳ ಕಡಿತ ಮಾಡಲಾಗುವುದು ಎಂದು ಆದೇಶ ಹೊರಡಿಸಿದೆ.

ಇದನ್ನೂ ಓದಿ: ಬೆಸ್ಕಾಂ, ಜಲಮಂಡಳಿ ಹೆಸರಲ್ಲಿ ಕಿರಾತಕರ ವಂಚನೆ.. APK ಫೈಲ್​​ ಡೌನ್​ಲೋಡ್ ಮಾಡಿದ್ರೆ ಹಣ ಮಾಯ, ಹೇಗೆ? 

Advertisment

publive-image

ಇನ್ನು ಸರ್ಕಾರದ ಆದೇಶವನ್ನು ಪಾಲಿಸದಿದ್ದರೇ ಒಟ್ಟು 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಸಂಬಳ ಕಳೆದುಕೊಳ್ಳಲಿದ್ದಾರೆ. ಅಲ್ಲದೇ ಬಡ್ತಿಗಳ (ಪ್ರಮೋಷನ್) ಮೇಲೂ ಇದು ಪರಿಣಾಮ ಬೀರುತ್ತದೆ. ಹೀಗಾಗಿ ಅಧಿಕಾರಿಗಳು ಆಸ್ತಿಯ ವಿವರಗಳನ್ನು ಘೋಷಣೆ ಮಾಡಲೇಬೇಕಾಗಿದೆ. ಯುಪಿಯಲ್ಲಿ ಒಟ್ಟು 17,88,429 ಸರ್ಕಾರಿ ನೌಕರರು ಇದ್ದಾರೆ. ಇದರಲ್ಲಿ ಕೇವಲ ಶೇಕಡಾ 26ರಷ್ಟು ಮಾತ್ರ ಸಿಬ್ಬಂದಿ ಆಸ್ತಿ ಬಗ್ಗೆ ತಿಳಿಸಿದ್ದಾರೆ. ಆದರೆ ಸುಮಾರು 13 ಲಕ್ಷದಷ್ಟು ಅಧಿಕಾರಿಗಳು ಆಸ್ತಿ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರ್ಕಾರವು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಸರ್ಕಾರ ಈ ಪೋರ್ಟಲ್ ಅನ್ನು ಜಾರಿಗೆ ಮಾಡಿದೆ. ಆದರೆ​ ಹಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಡಳಿತ ಸರ್ಕಾರದ ಮೇಲೆ ಪರಿಣಾಮ ಬೀರಿದೆ. ಹಲವು ಬಾರಿ ಗಡುವು ಮೀರಿದ್ದನ್ನ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಹೀಗಾಗಿ ಈ ತಿಂಗಳ ಯಾರು ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೋ ಅವರಿಗೆ ಸ್ಯಾಲರಿ ಹಾಕಲಾಗುತ್ತದೆ. ಯಾರು ಆಸ್ತಿ ವಿವರ ಘೋಷಣೆ ಮಾಡಿಲ್ಲವೋ ಅವರ ಆಸ್ತಿ ಕಡಿತ ಮಾಡಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment