ಜೈಲಿನಲ್ಲಿರುವ ದರ್ಶನ್ ಬಗ್ಗೆ ರಚಿತಾ ರಾಮ್ ಇನ್ನೇನು ಹೇಳಿದ್ರು?
ದರ್ಶನ್‌ಗಾಗಿ ಹಣ್ಣು, ಕೆಲ ತಿಂಡಿಗಳನ್ನ ತಗೊಂಡು ಬಂದಿದ್ದ ರಚಿತಾ
ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ, ಕೋರ್ಟ್ ಏನಂತು.?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಡೆವಿಲ್ ಗ್ಯಾಂಗ್ ಜೈಲು ಸೇರಿ 76 ದಿನಗಳಾಗ್ತಿವೆ. ಆದ್ರೆ ಇದುವರೆಗೂ ದರ್ಶನ್ ಸೇರಿ ಯಾರೂ ಕೂಡ ಬಿಡುಗಡೆ ಬಯಸಿ ಜಾಮೀನು ಸಲ್ಲಿಸಿರಲಿಲ್ಲ. ಆದ್ರೆ ಬೇಲ್ಗಾಗಿ ಅರ್ಜಿ ಸಲ್ಲಿಸಿದ್ದ ಪ್ರಕರಣದ ಕೇಂದ್ರ ಬಿಂದು ಪವಿತ್ರಾ ಗೌಡಗೆ ಕೋರ್ಟ್ ಮತ್ತೆ ಶಾಕ್ ಕೊಟ್ಟಿದೆ. ಇದರ ಜೊತೆಗೆ ದಾಸನನ್ನು ಬುಲ್ಬುಲ್ ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಬೆಸ್ಕಾಂ, ಜಲಮಂಡಳಿ ಹೆಸರಲ್ಲಿ ಕಿರಾತಕರ ವಂಚನೆ.. APK ಫೈಲ್ ಡೌನ್ಲೋಡ್ ಮಾಡಿದ್ರೆ ಹಣ ಮಾಯ, ಹೇಗೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಌಂಡ್ ಡೆವಿಲ್ ಗ್ಯಾಂಗ್ ಪರಪ್ಪನ ಮಡಿಲು ಸೇರಿ 76 ದಿನಗಳೇ ಪೂರೈಸಿವೆ. ಅತ್ತ ದರ್ಶನ್ ಜೈಲುವಾಸಕ್ಕೆ ಒಗ್ಗಿಕೊಂಡ್ರೂ ಅಲ್ಲಿನ ಊಟ ಸೇರಲಾರದೇ ಮನೆ ಭೋಜನಕ್ಕೆ ಕೋರ್ಟ್ಗೆ ಮನವಿ ಮಾಡಿ ಮಾಡಿ ಕೊನೆಗೆ ಆ ಊಟಕ್ಕೂ ಒಗ್ಗಿಕೊಂಡಿದ್ದಾರೆ. ದರ್ಶನ್ನಿಂದ ಹಿಡಿದು ಯಾವ ಆರೋಪಿಗೂ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವ ಲಕ್ಷಣವಿಲ್ಲ. ಇತರೆ ಆರೋಪಿಗಳು ದರ್ಶನ್ಗಿಂತಲೂ ಮೊದಲೇ ಹೊರಬರುವ ಕನಸು ಕಾಣ್ತಿದ್ದಾರೆ. ಆದ್ರೆ ಇದರಲ್ಲಿ ಎ1 ಪವಿತ್ರಾ ಗೌಡ ಒಂದು ಹೆಜ್ಜೆ ಮುಂದೆ ಹೋಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ಆ ಅರ್ಜಿ ವಿಚಾರಣೆ ಕೋರ್ಟ್ನಲ್ಲಿ ನಡೆದಿದೆ.
ಇದನ್ನೂ ಓದಿ: ಚನ್ನಪಟ್ಟಣ ಬೈಎಲೆಕ್ಷನ್ಗೆ ರೆಡಿಯಾದ್ರಾ ನಿಖಿಲ್ ಕುಮಾಸ್ವಾಮಿ..? ‘ಸೈನಿಕ’ ಬಿಗಿ ಪಟ್ಟು, ದಳಪತಿ ದಂಡಯಾತ್ರೆ
ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ದರ್ಶನ್ ಸೇರಿ ಇತರೆ ಎಲ್ಲಾ ಆರೋಪಿಗಳು ಜೈಲು ಪಾಲಾಗುವಂತೆ ಮಾಡಿದ ಚೆಲುವೆ, ಕೆಡಿಲೇಡಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಿಂದ ಹೊರಬರಲು ಹಾತೊರೆಯುತ್ತಿದ್ದಾರೆ. ಎಲ್ಲ 17 ಆರೋಪಿಗಳ ಪೈಕಿ ಪವಿತ್ರಾ ಗೌಡ ಮೊದಲಿಗರಾಗಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದ್ರೆ ಕೋರ್ಟ್ ಅವರಿಗೆ ಮತ್ತೆ ಶಾಕ್ ಕೊಟ್ಟಿದೆ. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ನ್ಯಾಯಾಲಯ, ಆಗಸ್ಟ್ 27ಕ್ಕೆ ವಿಚಾರಣೆ ಮುಂದೂಡಿದೆ. ಇದರಿಂದ ದರ್ಶನ್ ಗೆಳತಿಗೆ ಮತ್ತಷ್ಟು ದಿನಗಳ ಕಾಲ ಜೈಲೇ ಗತಿಯಾಗಿದೆ. ಇದರ ಜೊತೆಗೆ ಮತ್ತೊಬ್ಬ ಆರೋಪಿ ಅನು ಕುಮಾರ್ ಅರ್ಜಿ ವಿಚಾರಣೆಯನ್ನೂ ಅಂದೇ ಮೂಂದೂಡಲಾಗಿದೆ.
ಪರಪ್ಪನ ಅಗ್ರಹಾರದ ಜೈಲಿನಲ್ಲಿ ‘ರಚ್ಚು ಮೀಟ್ಸ್ ದಚ್ಚು’
ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್‌ರನ್ನ ಡಿಂಪಲ್ ಕ್ವೀನ್ ರಚಿತಾ ರಾಮ್ 2 ತಿಂಗಳ ಬಳಿಕ ಭೇಟಿಯಾಗಿದ್ದಾರೆ. ದರ್ಶನ್ ಆಪ್ತ ಸಚ್ಚಿದಾನಂದ್ ಜೊತೆಗೆ ಬಂದಿದ್ದ ರಚಿತಾರಾಮ್ ದರ್ಶನ್‌ಗಾಗಿ 3 ಬ್ಯಾಗ್‌ಗಳಲ್ಲಿ ಹಣ್ಣು, ತಿಂಡಿಗಳನ್ನ ತಗೊಂಡು ಬಂದಿದ್ರು. ಕೇಸ್ಗೆ ಸಂಬಂಧಿಸಿದಂತೆ ದರ್ಶನ್ ಜೊತೆ ಕೆಲ ಕಾಲ ಮಾತುಕತೆ ನಡೆಸಿ ವಾಪಸ್ಸಾಗಿದ್ದಾರೆ.
ದರ್ಶನ್‌ರನ್ನ ಆ ತರ ನೋಡೋದಕ್ಕೆ ಕಷ್ಟ ಆಗುತ್ತದೆ. ಎಲ್ಲರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರ ಅಭಿಮಾನಿಗಳು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದರೋ, ನಾನು ಅಷ್ಟೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸರ್ ನಾವೆಲ್ಲ ನಿಮಗಾಗಿ ಕಾಯುತ್ತಿದ್ದೇವೆ. ಬೇಗ ಬನ್ನಿ ಅಂತ ಹೇಳಿ ಬಂದೆ.
ರಚಿತಾ ರಾಮ್, ನಟಿ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಌಂಡ್ ಗ್ಯಾಂಗ್ 76ನೇ ದಿನದತ್ತ ಕಾಲಿಟ್ಟಿದ್ದಾರೆ. ಆದ್ರೆ 17 ಆರೋಪಿಗಳ ಪೈಕಿ ಎಲ್ಲರಿಗಿಂತ ಮೊದಲು ಹೊರಗೆ ಹಾರಿ ಹೋಗಲು ಜೈಲು ಹಕ್ಕಿ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ಕೋರ್ಟ್ ವಿಚಾರಣೆ ಮೂಂದೂಡಿದ್ದು ಮತ್ತಷ್ಟು ದಿನಗಳ ಕಾಲ ಜೈಲುವಾಸಕ್ಕೆ ಕಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ