/newsfirstlive-kannada/media/post_attachments/wp-content/uploads/2024/06/Marriage.jpg)
ಅಯ್ಯೋ.. ಮದುವೆಯಾಗ್ರಿ.. ಸಂಸಾರ ನಡೆಸ್ರಿ ಅಂತ ಯಾವ ಸರ್ಕಾರ ಹೇಳುತ್ತೆ?. ಲೈಂಗಿಕತೆ ಉತ್ತೇಜಿಸುವ ಬಗ್ಗೆ ಯಾವ ಸರ್ಕಾರ ಗಮನ ಕೊಡುತ್ತೆ?. ಮನೆಯವರೇ ಮಗ-ಮಗಳಿಗೆ ಮದುವೆ ಮಾಡಿಸಲು ಹೋಗಿ ಬೇಸತ್ತ ಅನೇಕ ಘಟನೆಗಳು ಕಣ್ಣ ಮುಂದೆ ಇರುವಾಗ ಸರ್ಕಾರವೊಂದು ಅವಿವಾಹಿತರನ್ನು ಮದುವೆ ಮಾಡಿಸಲು ಮುಂದಾಗಿದೆ ಅಂದ್ರೆ ನೀವು ನಂಬ್ತೀರಾ? ನಂಬಲೇ ಬೇಕು. ಯಾಕಂದ್ರೆ ಈ ಸ್ಟೋರಿ ಪೂರ್ತಿ ಓದಿ.
ಈ ಕಾಲದಲ್ಲಿ ಸಂಗಾತಿ ಹುಡುಕುವುದೇ ಒಂದು ದೊಡ್ಡ ಸರ್ಕಸ್​. ಅಂತದರಲ್ಲಿ ಸರ್ಕಾರವೇ ಡೇಟಿಂಗ್​ ಆ್ಯಪ್​ ನಿರ್ಮಿಸಿ ಲೈಂಗಿಕತೆಗೆ ಉತ್ತೇಜನ ನೀಡುತ್ತೆ ಅಂದ್ರೆ ತಮಾಷೆ ಅಲ್ಲವೇ ಅಲ್ಲ. ಅಂತಹ ಕೆಲಸವನ್ನು ಜಪಾನ್ ಸರ್ಕಾರ​ ಮಾಡುತ್ತಿದೆ. ಅವಿವಾಹಿತರಿಗೆ ಇನ್ನೂ ಕಾಲ ಮಿಂಚಿಲ್ಲ ಗುರೂ.. ಮದುವೆಯಾಗ್ರಿ, ಸಂಸಾರ ನಡೆಸ್ರಿ ಎಂದು ಬೆನ್ನುತಟ್ಟಿ ಹೇಳುತ್ತಿದೆ.
ಪುಟಾರಿ ಸ್ಟೋರಿ
ಜಪಾನ್​ ಮುಂದುವರೆದ ದೇಶ. ತಂತ್ರಜ್ಞಾನ, ಶಿಕ್ಷಣ, ಸಿರಿವಂತಿಕೆ ಇವೆಲ್ಲದರ ವಿಚಾರದಲ್ಲಿ ಒಂದು ಹೆಜ್ಜೆ ಮುಂದೇ ಇದೆ. ಭೂಕಂಪಕ್ಕೆ ನಡುಗಿದರೂ ಮತ್ತೆ ಸೆಟೆದು ನಿಲ್ಲುವ ತಾಕತ್​ ಅದಕ್ಕಿದೆ. ಆದರೆ ಇಷ್ಟೆಲ್ಲಾ ಸಾಮರ್ಥ್ಯವಿರುವ ದೇಶದಲ್ಲಿ ಅವಿವಾಹಿತರ ಸಂಖ್ಯೆ ಹೆಚ್ಚುತ್ತಿದೆಯಾ? ಜನರು ವಿವಾಹವಾಗಲು ಹಿಂದೇಟು ಹಾಕುತ್ತಿದ್ದಾರಾ?. ಜನನ ಪ್ರಮಾಣ ಕುಗ್ಗುತ್ತಿದೆಯಾ?. ಇವೆಲ್ಲ ವಿಚಾರಕ್ಕೆ ಸರ್ಕಾರ ಪ್ಲಾನ್​ ಮಾಡಿದೆ.
[caption id="attachment_68141" align="alignnone" width="800"]
ಪುಟಾರಿ ಸ್ಟೋರಿ[/caption]
ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಗೆ ಎಳೆನೀರು ಕೀಳಲು ಮರವೇರಿದ ಮಗ.. ಕಾಲು ಜಾರಿ ಬಿದ್ದು ಸಾವು
ಜಪಾನ್​ ಸರ್ಕಾರ ಅವಿವಾಹಿತರನ್ನು ವಿವಾಹಿತರನ್ನಾಗಿ ಮಾಡಿಸಲು ಟೊಂಕ ಕಟ್ಟಿ ನಿಂತಿದೆ. ಅದಕ್ಕಾಗಿ ‘ಟೋಕಿಯೋ ಪುಟಾರಿ ಸ್ಟೋರಿ’ ಎಂಬ ಡೇಟಿಂಗ್​​ ಆ್ಯಪ್​ ಪರಿಚಯಿಸಿದೆ. ಅದರ ಮೂಲಕವಾದರು ಪ್ರೀತಿ ಬೀಳಲು, ಮದುವೆಯಾಗಲು, ಸಂಸಾರ ನಡೆಸಲು ಉತ್ತೇಜನ ನೀಡುತ್ತಿದೆ.
ಜಪಾನ್​ ಜನನ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅದಕ್ಕಾಗಿ ಡೇಟಿಂಗ್​ ಆ್ಯಪ್​ ಪರಿಚಯಿಸಿದೆ. ಅಚ್ಚರಿಯ ಸಂಗತಿ ಎಂದರೆ ಜಪಾನ್​ನಲ್ಲಿ 50 ವರ್ಷ ವಯಸ್ಸಿನ ಸುಮಾರು 32 ಪ್ರತಿಶತದಷ್ಟು ಪುರುಷರು ವಿವಾಹವಾಗದೆ ಇದ್ದಾರೆ. 24 ಪ್ರತಿಶತದಷ್ಟು ಮಹಿಳೆಯರು ಮದುವೆ ಬೇಡ ಅಂತ ಸುಮ್ಮನ್ನಿದ್ದಾರೆ. ​ ಇದನ್ನು ಕಂಡು ತಲೆಕೆಡಿಸಿಕೊಂಡ ಸರ್ಕಾರ ಅವಿವಾಹಿತರನ್ನು ಮದುವೆ ಮಾಡಿಸಲು ಮುಂದಾಗಿದೆ ಎಂದರೆ ನಂಬಲು ಅಸಾಧ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us