newsfirstkannada.com

ಗಿಲ್​ ಪಡೆಗೂ ಇದು ಡು ಆರ್​​ ಡೈ ಪಂದ್ಯ.. ಗೆಲುವಿನ ಉತ್ಸಾಹದಲ್ಲಿರೋ RCB ಮುಂದಿದೆ ಬಿಗ್​ ಚಾಲೆಂಜ್

Share :

Published April 28, 2024 at 11:16am

    ಕೊಹ್ಲಿ ಸಲಹೆ-ಸೂಚನೆ ಪಡೆದ್ರೆ ತಂಡದ ಹಿತದೃಷ್ಟಿಗೆ ಒಳ್ಳೆಯದು

    ಸ್ಪಿನ್​ ಮಾಂತ್ರಿಕ ಸಾಯಿ ಕಿಶೋರ್​ ದಾಳಿ ಮೆಟ್ಟಿ ನಿಲ್ಲಬೇಕಿದೆ

    ಮೊದಲ ಪಂದ್ಯದಿಂದಲೂ ಎಡವುತ್ತಿರೋ ಕ್ಯಾಪ್ಟನ್​ ಡುಪ್ಲೆಸಿ

ಮತ್ತೊಂದು ಮೆಗಾ ಫೈಟ್​ಗೆ ಐಪಿಎಲ್​ ಅಖಾಡದಲ್ಲಿ ವೇದಿಕೆ ಸಜ್ಜಾಗಿದೆ. ಗೆಲುವಿನ ಓಟ ಮುಂದುವರೆಸೋ ತವಕದಲ್ಲಿರೋ ಆರ್​​ಸಿಬಿಗೆ, ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರೋ ಗುಜರಾತ್​ ಟೈಟನ್ಸ್​ನ ಸವಾಲು ಎದುರಾಗಲಿದೆ. ಹೈದ್ರಾಬಾದ್​ ಮಣಿಸಿದ ವಿಶ್ವಾಸದಲ್ಲಿರೋ ಆರ್​​ಸಿಬಿಗೆ, ಗುಜರಾತ್​ ವಿರುದ್ಧ ಗೆಲ್ಲೋದು ಸುಲಭದ ವಿಚಾರವಲ್ಲ. ಆರ್​​ಸಿಬಿ ಮುಂದಿರೋ ಸವಾಲೇನು?.

ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್​​ಸಿಬಿ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಹೈದ್ರಾಬಾದ್​ ವಿರುದ್ಧ ಅವರದೇ ಅಂಗಳದಲ್ಲಿ ದಿಗ್ವಿಜಯ ಸಾಧಿಸಿರೋ ಡುಪ್ಲೆಸಿ ಪಡೆ ಇಂದು ಅಹ್ಮದಾಬಾದ್​ನಲ್ಲಿ ಗುಜರಾತ್​ ಸವಾಲನ್ನ ಎದುರಿಸಲಿದೆ. ಗೆಲುವಿನ ಉತ್ಸಾಹದಲ್ಲಿರೋ ಆರ್​​ಸಿಬಿ ಮುಂದೆ ಇಂದು ಬಿಗ್​ ಚಾಲೆಂಜ್ ಇದೆ. ಸ್ವಲ್ಪ ಯಾಮಾರಿದ್ರೆ, ಮತ್ತೆ ಸೋಲಿನ ಪ್ರಪಾತಕ್ಕೆ ಬೀಳ ಬೇಕಾಗುತ್ತೆ.

ಇದನ್ನೂ ಓದಿ: ಪಕ್ಕದ ಮನೆಯ ಕಾರಿನ ಗ್ಲಾಸ್​ಗಳನ್ನ ಒಡೆದು ಹಾಕಿದ ಸ್ಕೂಲ್ ಟೀಚರ್​.. ಕಾರಣವೇನು?

ಇದನ್ನೂ ಓದಿ: IPLನಲ್ಲಿ ಮೊಟ್ಟ ಮೊದಲ ಹಾಫ್​ಸೆಂಚುರಿ.. ಫ್ಯಾಮಿಲಿ ಜೊತೆ ಸಂಭ್ರಮಿಸಿದ ರಾಯಲ್ಸ್​ ಪ್ಲೇಯರ್​!

ಕಳೆದ 3 ಪಂದ್ಯಗಳಲ್ಲಿ ಆರ್​​ಸಿಬಿ ಬ್ಯಾಟರ್ಸ್​ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದಾರೆ. ಕನ್ಸಿಸ್ಟೆಂಟ್​ ಆಗಿ 200+ ರನ್​ ಗಡಿ ದಾಟಿದ್ದಾರೆ. ಆದ್ರೆ, ಇಂದು ಅದೇ ಅಬ್ಬರದ ಬ್ಯಾಟಿಂಗ್​ ನಡೆಸೋದು ಸವಾಲಿನ ವಿಚಾರ. ಯಾಕಂದ್ರೆ, ಗುಜರಾತ್​ ತಂಡದಲ್ಲಿ ವರ್ಲ್ಡ್​ ಕ್ಲಾಸ್​ ಸ್ಪಿನ್ನರ್​ಗಳಿದ್ದಾರೆ. ಹೇಳಿ-ಕೇಳಿ ಆರ್​​ಸಿಬಿ ಬ್ಯಾಟರ್ಸ್​​ ಸ್ಪಿನ್ನರ್​ಗಳ ಎದುರು ತಡಬಡಾಯಿಸ್ತಿದ್ದಾರೆ. ಈ ವೀಕ್​ನೆಸ್​​ ಇಟ್ಟುಕೊಂಡು ರಶೀದ್​ ಖಾನ್​​, ನೂರ್​ ಅಹ್ಮದ್​, ಸಾಯಿ ಕಿಶೋರ್​ರಂತಾ ಸ್ಪಿನ್​ ಮಾಂತ್ರಿಕರ ದಾಳಿ ಮೆಟ್ಟಿ ನಿಲ್ಲೋದು ಸುಲಭದ ವಿಚಾರವಲ್ಲ.

ಕ್ಯಾಪ್ಟನ್​ ಡುಪ್ಲೆಸಿಗೆ ಬೇಕಿದೆ ವಿರಾಟ್​ ಕೊಹ್ಲಿ ಸಹಾಯ.!

ಇಂಪ್ಯಾಕ್ಟ್​ ಪ್ಲೇಯರ್​ ಆಯ್ಕೆ, ಬೌಲರ್ಸ್​​​​ ರೊಟೇಶನ್​, ಫೀಲ್ಡ್​ ಪ್ಲೇಸ್​ಮೆಂಟ್​​.. ಈ ಮೂರೂ ವಿಚಾರದಲ್ಲಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿ ಮೊದಲ ಪಂದ್ಯದಿಂದಲೂ ಎಡವಿದ್ದಾರೆ. ಕಳೆದ ಪಂದ್ಯದ ಗೆಲುವಿನ ಟ್ರ್ಯಾಕ್​ ಮುಂದುವರೆಸಬೇಕಂದ್ರೆ ಡುಪ್ಲೆಸಿ ಇಂದು ಅಳೆದು ತೂಗಿ ಲೆಕ್ಕಾಚಾರ ಹಾಕಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಮಾಜಿ ನಾಯಕ ವಿರಾಟ್​ ಕೊಹ್ಲಿ ಸಲಹೆ-ಸೂಚನೆ ಪಡೆದ್ರೆ ತಂಡದ ಹಿತದೃಷ್ಟಿಯಿಂದ ಒಳ್ಳೆಯದೇ.!

ರಾಯಲ್​ ಚಾಲೆಂಜರ್ಸ್​ಗೆ ಬೌಲಿಂಗ್​ನದ್ದೇ ಟೆನ್ಶನ್​..!

ಕಳೆದ 3 ಪಂದ್ಯದಲ್ಲಿ ಆರ್​​ಸಿಬಿ ಬ್ಯಾಟರ್ಸ್​ ಅಬ್ಬರಿಸಿದ್ದಾರೆ ನಿಜ. ಇದೇ ವೇಳೆ ಬೌಲರ್ಸ್​ ​ಫ್ಲಾಪ್​ ಪ್ರದರ್ಶನ ನೀಡಿದ್ದಾರೆ. ಎದುರಾಳಿ ಬ್ಯಾಟ್ಸ್​ಮನ್​ಗಳ ಪಾಲಿಗೆ ಸುಲಭದ ತುತ್ತಾಗಿದ್ದಾರೆ. ಬೌಲರ್​​ಗಳ ಈ ಕಳಪೆ ಪರ್ಫಾಮೆನ್ಸ್​ ತಂಡಕ್ಕೆ ದೊಡ್ಡ ಟೆನ್ಶನ್​ ತಂದಿಟ್ಟಿದೆ. ಅಹ್ಮದಾಬಾದ್​ ಕೂಡ ಹೈ ಸ್ಕೋರಿಂಗ್​ ಪಿಚ್​ ಆಗಿದ್ದು, ಇಲ್ಲಿ ಆರ್​​ಸಿಬಿ ಬೌಲರ್ಸ್​ ಲೈನ್​ & ಲೆಂಥ್​ ಕಂಡುಕೊಳ್ತಾರಾ ಅನ್ನೋ ಪ್ರಶ್ನೆ ಕಾಡ್ತಿದೆ.

ಬಲಿಷ್ಠ​ ಪ್ಲೇಯಿಂಗ್​-XI ಆಯ್ಕೆಯೇ ಕಗ್ಗಂಟು.!

ಈವರೆಗೆ ಆರ್​​ಸಿಬಿ 9 ಪಂದ್ಯ ಆಡಿದೆ. ಆದ್ರೂ, ಪರ್ಫೆಕ್ಟ್​ ಪ್ಲೇಯಿಂಗ್​ ಇಲೆವೆನ್​ ಆಯ್ಕೆ ಮಾಡೋದೆ ಸವಾಲಾಗಿದೆ. ಈವರೆಗೆ ಬರೋಬ್ಬರಿ 16 ಬದಲಾವಣೆಗಳನ್ನ ಕ್ಯಾಪ್ಟನ್ ಫಾಫ್​​ ಡುಪ್ಲೆಸಿ ಮಾಡಿದ್ದಾರೆ. ಇಂದಿನ ಪಂದ್ಯದಲ್ಲೂ ಕೂಡ ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆಯಾಗೋ ಸಾಧ್ಯತೆ ದಟ್ಟವಾಗಿದೆ. ಯಾರು ಔಟ್​, ಯಾರು ಇನ್​​ ಎಂಬ ಲೆಕ್ಕಾಚಾರ ಜೋರಾಗಿದೆ.

ಇದನ್ನೂ ಓದಿ: Lok Sabha; ‘ಲೋಕ’ ಅಖಾಡದಲ್ಲಿ PM, CM ಅಬ್ಬರ.. ಮಗಳಿಗಾಗಿ ತಂದೆ, ಮಗನಿಗಾಗಿ ತಾಯಿ ಭರ್ಜರಿ ಕ್ಯಾಂಪೇನ್

ಕರಣ್​ ಶರ್ಮಾಗೆ ಬೇಕಿದೆ ಪರ್ಫೆಕ್ಟ್​ ಪಾರ್ಟನರ್​.!

ಸ್ಪಿನ್ ವಿಭಾಗದಲ್ಲಿ ಗುಜರಾತ್​ ಬಲಿಷ್ಟವಾಗಿದ್ರೆ, ಆರ್​​ಸಿಬಿಯ ಕತೆ ಅದಕ್ಕೆ ತದ್ವಿರುದ್ಧವಾಗಿದೆ. ಕರಣ್​ ಶರ್ಮಾ ಉತ್ತಮ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಇವ್ರಿಗೆ ಸಾಥ್​ ಕೊಡೋದ್ಯಾರು ಎಂಬ ಪ್ರಶ್ನೆಯಿದೆ. ಕಳೆದ ಪಂದ್ಯದಲ್ಲಿ ಸ್ವಪ್ನಿಲ್​ ಸಿಂಗ್​, ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂದಿನ ಪಂದ್ಯದಲ್ಲೂ ಸ್ವಪ್ನಿಲ್​ ಚಾನ್ಸ್​ ನೀಡೋದು ಉತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಹನಿ ನೀರಿಗೂ ಹಾಹಾಕಾರ.. ರೊಚ್ಚಿಗೆದ್ದ ಮಹಿಳೆಯರಿಂದ ಗ್ರಾಮ ಪಂಚಾಯತಿಗೆ ಬೀಗ ಜಡಿದು ಆಕ್ರೋಶ

ಗುಜರಾತ್​ ಟೈಟನ್ಸ್​ನ ಕಥೆ ಆರ್​ಸಿಬಿಗಿಂತ ಭಿನ್ನವಾಗಿಲ್ಲ. ಆರ್​​ಸಿಬಿ 9ರಲ್ಲಿ 2 ಪಂದ್ಯ ಗೆದ್ದಿದ್ರೆ, ಗುಜರಾತ್​ 9ರಲ್ಲಿ 4 ಪಂದ್ಯ ಗೆದ್ದಿದೆ. ಆದ್ರೆ, ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಇನ್​​​ಕನ್ಸಿಸ್ಟೆನ್ಸಿ ಸಮಸ್ಯೆಯನ್ನ ಗಿಲ್​ ಪಡೆ​ ಎದುರಿಸ್ತಾ ಇದೆ. ಫ್ಲೇ ಆಫ್​ ದೃಷ್ಟಿಯಿಂದ ಇಂದಿನ ಪಂದ್ಯದಲ್ಲಿ ಗುಜರಾತ್​ಗೆ ಗೆಲುವು ಅನಿವಾರ್ಯವಾಗಿದೆ. ಡು ಆರ್​​ ಡೈ ಫೈಟ್​ನಲ್ಲಿ ಗುಜರಾತ್​ ಗೆಲ್ಲುತ್ತಾ.? ಆರ್​​ಸಿಬಿ ಗೆಲುವಿನ ಓಟ ಮುಂದುವರೆಸುತ್ತಾ.? ಕಾದು ನೋಡೋಣ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಗಿಲ್​ ಪಡೆಗೂ ಇದು ಡು ಆರ್​​ ಡೈ ಪಂದ್ಯ.. ಗೆಲುವಿನ ಉತ್ಸಾಹದಲ್ಲಿರೋ RCB ಮುಂದಿದೆ ಬಿಗ್​ ಚಾಲೆಂಜ್

https://newsfirstlive.com/wp-content/uploads/2024/04/VIRAT_KOHLI_GILL.jpg

Load More