newsfirstkannada.com

ಕತ್ತೆಗಳ ಹಾಲಿನಿಂದ ಲಕ್ಷ.. ಲಕ್ಷ ಹಣ ಸಂಪಾದನೆ.. ಈ ವ್ಯಕ್ತಿಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಡಿಮ್ಯಾಂಡ್

Share :

Published April 21, 2024 at 1:20pm

Update April 21, 2024 at 1:21pm

    ಹಸುವಿನ ಹಾಲು 1 ಲೀ.ಗೆ 65, ಆದ್ರೆ ಕತ್ತೆ ಹಾಲು ಎಷ್ಟು ಸಾವಿರ ರೂ.?

    ಸರ್ಕಾರಿ ಕೆಲಸಕ್ಕೆ ಅಲೆದು ಅಲೆದು ಕೊನೆಗೆ ಕತ್ತೆಗಳನ್ನು ಸಾಕಿದ ವ್ಯಕ್ತಿ

    ಕತ್ತೆಗಳ ಹಾಲಿನಿಂದ ಲಕ್ಷ, ಲಕ್ಷ ಸಂಪಾದನೆ ಮಾಡ್ತಿರೋ ವ್ಯಕ್ತಿ ಯಾರು?

ಅಹಮದಾಬಾದ್: ದಶಕಗಳೆ ಕಳೆದರೂ ಕೇವಲ ಭಾರ ಹೊತ್ತುಕೊಂಡು ಹೋಗಲು ಮಾತ್ರ ಬಳಕೆ ಮಾಡುತ್ತಿದ್ದ ಕತ್ತೆಗಳು ಇಂದು ಅಮೃತಾ ಧಾರೆಯಾಗಿವೆ. ಸದ್ಯದ ಕಂಪ್ಯೂಟರ್​ ಯುಗದಲ್ಲಿ ಹಸುಗಳ ಹಾಲಿಗೆ ಪೈಪೋಟಿ ನೀಡುತ್ತಿರುವುದು ಕತ್ತೆಗಳ ಹಾಲು ಆಗಿದೆ. ಕತ್ತೆಗಳ ಹಾಲು ಹಸುಗಳ ಹಾಲಿಗಿಂತ ಶೇಕಡಾ 70 ರಷ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಹೀಗಾಗಿ ಇಲ್ಲೊಬ್ಬ ವ್ಯಕ್ತಿ ಆನ್​ಲೈನ್ ಮೂಲಕ ಕತ್ತೆಗಳ ಹಾಲನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ ಬರೋಬ್ಬರಿ 2 ರಿಂದ 3 ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡುತ್ತಿದ್ದಾರೆ. ಸದ್ಯ ಇದರ ಸ್ಟೋರಿ ಎನ್ನುವುದರ ಮಾಹಿತಿ ಇಲ್ಲಿದೆ.

ಕತ್ತೆಗಳಿಂದ ಬದುಕು ಕಟ್ಟಿಕೊಂಡ ವ್ಯಕ್ತಿಯ ರೋಚಕ ಕಹಾನಿ

ಧೀರೇನ್ ಸೋಲಂಕಿ ಸದ್ಯ ಕತ್ತೆಗಳ ಹಾಲನ್ನು ಆನ್​ಲೈನ್​ ಮೂಲಕ ಮಾರಾಟ ಮಾಡುವುದರ ಮೂಲಕ ತಿಂಗಳಿಗೆ ಭಾರೀ ಲಾಭ ಪಡೆದುಕೊಳ್ಳುತ್ತಿದ್ದಾನೆ. ಕೇವಲ 1 ಲೀಟರ್​ ಹಾಲಿಗೆ ಬರೋಬ್ಬರಿ 5 ಸಾವಿರ ರೂಪಾಯಿ ಚಾರ್ಜ್​ ಮಾಡುತ್ತಿದ್ದಾನೆ. ಇದರಿಂದಲೇ ತಿಂಗಳಿಗೆ 2 ರಿಂದ 3 ಲಕ್ಷ ರೂಪಾಯಿಗಳವರೆಗೆ ಗಳಿಕೆ ಮಾಡುತ್ತಿದ್ದಾನೆ. ಒಂದು ಟೈಮ್​ನಲ್ಲಿ ಸರ್ಕಾರಿ ಕೆಲಸಕ್ಕಾಗಿ ಅಲೆದು ಅಲೆದು ಏನೂ ಇಲ್ಲದಾಗ ಕತ್ತೆಗಳಿಂದ ಬದುಕು ಕಟ್ಟಿಕೊಂಡ ವ್ಯಕ್ತಿಯ ರೋಚಕ ಕಹಾನಿ ಇದು.

ಇದನ್ನೂ ಓದಿ: ಕಿಂಗ್​ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್​​ನಲ್ಲಿ ವಿರಾಟ್​ ವಿಶ್ವರೂಪದ ರೆಕಾರ್ಡ್​ ಹೇಗಿದೆ?

ಗುಜರಾತ್‌ನ ಪಟಾನ್ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾಗಿರುವ ಧೀರೇನ್ ಸೋಲಂಕಿ ಅವರು, 42 ಕತ್ತೆಗಳನ್ನು ಸಾಕುತ್ತಿದ್ದು ಅವುಗಳಿಗಾಗಿ ಫಾರ್ಮ್​ ಓಪನ್ ಮಾಡಿದ್ದಾರೆ. ಈ ಕತ್ತೆಗಳ ಹಾಲನ್ನು ಕರ್ನಾಟಕ ಸೇರಿ ದಕ್ಷಿಣ ಭಾರತದ ರಾಜ್ಯಗಳಿಗೆ ಆನ್​ಲೈನ್​ ಮೂಲಕ ಮಾರಾಟ ಮಾಡಿ ಲಕ್ಷ.. ಲಕ್ಷ ರೂಪಾಯಿಗಳನ್ನು ಜೇಬಿಗೆ ಹಾಕಿಕೊಳ್ಳುತ್ತಿದ್ದಾರೆ. ಈ ವ್ಯಕ್ತಿಗೆ ಕರ್ನಾಟಕ, ಕೇರಳ ಸೇರಿ ಹಲವು ರಾಜ್ಯಗಳಿಂದ ಭಾರೀ ಬೇಡಿಕೆ ಇದ್ದು ಹಣ ಎಷ್ಟು ಬೇಕಾದರೂ ತೆಗೆದುಕೊಳ್ಳಿ ಹಾಲು ಸರಬಾರಾಜು ಮಾಡಿ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

ರಾಜ್ಯ ಸರ್ಕಾರದಿಂದ ಯಾವುದೇ ಸಹಾಯ ಪಡೆದಿಲ್ಲ

ಧೀರೇನ್ ಸೋಲಂಕಿ ಸರ್ಕಾರಿ ಕೆಲಸ ಸಿಗುತ್ತದೆ ಎಂದು ಬೇಜಾನು ಓಡಾಡಿದ್ದಾರೆ. ಆದರೆ ಕೆಲಸ ಸಿಗಲಿಲ್ಲ. ಕೊನೆಗೆ ಖಾಸಗಿ ಕೆಲಸಕ್ಕೂ ಹೋಗಿದ್ದಾರೆ. ಆದರೆ ಪ್ರವೇಟ್​ ಕಂಪನಿಗಳು ನೀಡುವ ಸಂಬಳ ಸೋಲಂಕಿ ಕುಟುಂಬವನ್ನು ಸರಿದೂಗಿಸಲು ಆಗುತ್ತಿರಲಿಲ್ಲ. ಹೀಗಾಗಿ ದಕ್ಷಿಣ ಭಾರತದಲ್ಲಿ ಕತ್ತೆಗಳನ್ನು ಸಾಕುವ ಬಗ್ಗೆ ತಿಳಿದುಕೊಂಡರು. ನಂತರ ಕೆಲವು ಜನರನ್ನು ಭೇಟಿ ಮಾಡಿ ಕತ್ತೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಂಡರು. ನಂತರ 8 ತಿಂಗಳ ಹಿಂದೆ 22 ಲಕ್ಷ ಬಂಡವಾಳ ಹೂಡಿ 20 ಕತ್ತೆಗಳ ಜೊತೆಗೆ ಫಾರ್ಮ್ ಅನ್ನು ಪ್ರಾರಂಭಿಸಿದ್ದಾರೆ. ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೆ ಯಾವುದೇ ಸಹಾಯ ಪಡೆದಿಲ್ಲ. ಆರಂಭದಲ್ಲಿ ಇದು ತುಂಬಾ ಕಠಿಣ ಎನಿಸಿತ್ತು. ಆದರೆ ಈಗ ಎಲ್ಲ ರೂಢಿಯಾಗಿದೆ ಎನ್ನುತ್ತಾರೆ ಸೋಲಂಕಿ.

ಇದನ್ನೂ ಓದಿ: IPLನಲ್ಲಿ ಅತ್ಯಂತ ದೊಡ್ಡ ರೆಕಾರ್ಡ್​ಗೆ ಕೈ ಹಾಕಿದ SRH.. ನಂ-3 ಕುರಿತು ಟ್ರಾವಿಸ್ ಹೆಡ್, ಅಭಿಷೇಕ್ ಏನಂದ್ರು ಗೊತ್ತಾ? 

ಇದನ್ನೂ ಓದಿ: ಪೋಷಕರೇ ಎಚ್ಚರ! ಚಾಕೊಲೇಟ್ ತಿಂದು ರಕ್ತ ವಾಂತಿ ಮಾಡಿದ ಒಂದೂವರೆ ವರ್ಷದ ಮಗು; ಆಗಿದ್ದೇನು?

ಗುಜರಾತ್‌ನಲ್ಲಿ ಕತ್ತೆ ಹಾಲಿಗೆ ಅಷ್ಟೇನೂ ಬೇಡಿಕೆಯಿಲ್ಲ. ಹೀಗಾಗಿಯೇ 5 ತಿಂಗಳು ನಾನು ಏನನ್ನೂ ಗಳಿಸಲಿಲ್ಲ. ನಂತರ ದಕ್ಷಿಣ ಭಾರತದಲ್ಲಿ ಇವುಗಳ ಹಾಲಿಗೆ ಹೆಚ್ಚು ಬೇಡಿಕೆ ಇರುವುದು ಗೊತ್ತಾದ ಮೇಲೆ ಕೆಲವು ಕಂಪನಿಗಳನ್ನು ಸಂಪರ್ಕಿಸಿದೆ. ಕರ್ನಾಟಕ ಮತ್ತು ಕೇರಳಕ್ಕೆ ಹಾಲನ್ನು ಸರಬರಾಜು ಮಾಡುತ್ತಿದ್ದು ಕಾಸ್ಮೆಟಿಕ್ ಕಂಪನಿಗಳು ಕೂಡ ಕತ್ತೆ ಹಾಲನ್ನು ಬಳಕೆ ಮಾಡುತ್ತಿವೆ. ಒಂದು ಲೀಟರ್​ ಹಸುವಿನ ಹಾಲು ಕೇವಲ 65 ರೂಪಾಯಿ ಅಷ್ಟೇ. ಅದೇ ಕತ್ತೆಗಳ ಹಾಲು ಒಂದು ಲೀಟರ್​ಗೆ ₹5,000 ರಿಂದ ₹7,000 ಇದೆ. ಕತ್ತೆಗಳ ಹಾಲನ್ನು ಒಣಗಿಸಿ ಪುಡಿ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಕೆಜಿಗೆ ಸುಮಾರು ₹1 ಲಕ್ಷದವರೆಗೆ ಬೆಲೆ ಇದೆ ಎಂದು ಸೋಲಂಕಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕತ್ತೆಗಳ ಹಾಲಿನಿಂದ ಲಕ್ಷ.. ಲಕ್ಷ ಹಣ ಸಂಪಾದನೆ.. ಈ ವ್ಯಕ್ತಿಗೆ ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಡಿಮ್ಯಾಂಡ್

https://newsfirstlive.com/wp-content/uploads/2024/04/GUJ_DONKEYA_1.jpg

Load More