ಇಂದು ಆರ್ಸಿಬಿ, ಗುಜರಾತ್ ಟೈಟನ್ಸ್ ಮಧ್ಯೆ ರೋಚಕ ಪಂದ್ಯ
ಆರ್ಸಿಬಿಗೆ 148 ರನ್ಗಳ ಸಾಧಾರಣ ಗುರಿ ನೀಡಿದ ಗುಜರಾತ್
ಬೆಂಗಳೂರು ತಂಡದ ಬೌಲರ್ಗಳ ದಾಳಿಗೆ ತತ್ತರಿಸಿದ ಗಿಲ್ ಪಡೆ
ಸದ್ಯ ಎಂ. ಚಿನ್ನಸ್ವಾಮಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಟ್ಟಿ ಹಾಕಿದೆ. 19.3 ಓವರ್ಗಳಲ್ಲಿ 147 ರನ್ಗೆ ಆಲೌಟ್ ಮಾಡಿದೆ.
ಇನ್ನು, ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡವು ಆರ್ಸಿಬಿ ಬೌಲರ್ಗಳ ದಾಳಿಗೆ ತತ್ತರಿಸಿದೆ. ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಕಳೆದುಕೊಂಡು ಗುಜರಾತ್ ಟೈಟನ್ಸ್ ಸಂಕಷ್ಟಕ್ಕೆ ಸಿಲುಕಿತ್ತು. ಸಾಹಾ 1, ಗಿಲ್ 2, ಸಾಯ್ ಸುದರ್ಶನ್ 6 ರನ್ಗಳಿಗೆ ಔಟಾದ್ರು.
ಬಳಿಕ ಬಂದ ಶಾರುಖ್ ಖಾನ್ ಕ್ರೀಸ್ನಲ್ಲೇ ನಿಂತು 1 ಸಿಕ್ಸರ್, 5 ಫೋರ್ ಸಮೇತ 37 ರನ್ ಸಿಡಿಸಿದ್ರು. ಡೇವಿಡ್ ಮಿಲ್ಲರ್ ಕೂಡ ಶಾರುಖ್ಗೆ ಸಾಥ್ ನೀಡಿದ್ದು, 20 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ನೊಂದಿಗೆ 30 ರನ್ ಪೇರಿಸಿದ್ರು.
ರಾಹುಲ್ ತೆವಾಟಿಯಾ ಮತ್ತು ರಶೀದ್ ಖಾನ್ ಭರ್ಜರಿ ಆಟ ಆಡಿದ್ರು. ತೆವಾಟಿಯಾ 21 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 35 ರನ್, ರಶೀದ್ ಖಾನ್ 1 ಸಿಕ್ಸ್, 2 ಫೋರ್ನೊಂದಿಗೆ 18 ರನ್ ಚಚ್ಚಿದ್ರು. ವಿಜಯ್ ಶಂಕರ್ 10 ರನ್ಗೆ ವಿಕೆಟ್ ಒಪ್ಪಿಸಿದ್ರು.
ಆರ್ಸಿಬಿ ಪರ ಸಿರಾಜ್, ಯಶ್ ದಯಾಳ್, ವೈಶಾಕ್ ತಲಾ 2 ವಿಕೆಟ್ ತೆಗೆದ್ರು. ಕ್ಯಾಮೆರಾನ್ ಗ್ರೀನ್ ಮತ್ತು ಕರಣ್ ಶರ್ಮಾ ತಲಾ 1 ವಿಕೆಟ್ ತೆಗೆದ್ರು.
ಇದನ್ನೂ ಓದಿ: ಗುಜರಾತ್ ವಿರುದ್ಧ ಪಂದ್ಯಕ್ಕೆ ಮುನ್ನವೇ ಆರ್ಸಿಬಿಗೆ ಬಿಗ್ ಶಾಕ್.. ವಿಲ್ ಜಾಕ್ಸ್ ಆಡೋದು ಡೌಟ್?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್