/newsfirstlive-kannada/media/post_attachments/wp-content/uploads/2024/09/HANGOVER-TREATMENT.jpg)
ಬೆಳಗ್ಗೆ ಶುರುವಾಗುವ ತಲೆನೋವು, ಮೈಭಾರ ಇದೆಲ್ಲವೂ ಸಾಕಷ್ಟು ನೀರು ಕುಡಿಯುವುದರಿಂದ ಹೊರಟು ಹೋಗುತ್ತೆ ಅನ್ನೋ ನಂಬಿಕೆ ಇದೆ. ಹ್ಯಾಂಗೋವರ್​ಗೆ ದೊಡ್ಡ ಮದ್ದು ಅಂದ್ರೆ ಅದು ನೀರು ಕುಡಿಯುವುದು. ನಾವು ಮದ್ಯಪಾನ ಮಾಡಿದ ಬಳಿಕ ಒಂದಷ್ಟು ನೀರು ಕುಡಿಯುವುದರಿಂದ ಅದನ್ನು ಆದಷ್ಟು ಹೋಗಲಾಡಿಸಬಹುದು ಎಂಬ ನಂಬಿಕೆ ಬಹಳ ಜನರಲ್ಲಿ ಬಹಳ ಕಾಲದಿಂದಲೂ ರೂಢಿಯಲ್ಲಿದೆ. ಆದ್ರೆ ಹೊಸ ಅಧ್ಯಯನ ಹೇಳುವ ಪ್ರಕಾರ ಈ ಒಂದು ನಂಬಿಕೆ ಅಷ್ಟೊಂದು ಸತ್ಯವಲ್ಲ.
ನೀರು ಕುಡಿಯುವುದರಿಂದ ಹ್ಯಾಂಗೋವರ್ ಹೋಗುತ್ತದೆಯೇ..?
ಇಲ್ಲ, ಇದು ಶುದ್ಧ ಅಪನಂಬಿಕೆಯ ವ್ಯಾಖ್ಯಾನ. ಹ್ಯಾಂಗೋವರ್​ಗೂ ಹಾಗೂ ಡಿಹೈಡ್ರೇಷನ್ (ನಿರ್ಜಲೀಕರಣ)ಕ್ಕೂ ಇರುವ ಒಂದು ಸಂಬಂಧವನ್ನು ನಾವು ಮೊದಲು ಗಮನಿಸಬೇಕು ನೆದರ್​ಲ್ಯಾಂಡ್​​ನ ಯುಟ್ರಕ್ಟ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಮದ್ಯಪ್ರಿಯರನ್ನು ಎರಡು ಗುಂಪುಗಳನ್ನಾಗಿ ಮಾಡಿ ಅಧ್ಯಯನ ನಡೆಸಿದೆ. ಅದರಲ್ಲಿ ಒಂದು ಪ್ರಕಾರ ಅಲ್ಕೋಹಾಲ್ ಸೇವಿಸಿದ ಬಳಿಕ ಸಾಕಷ್ಟು ನೀರು ಕುಡಿದು ಮಲಗುವವರು ಮತ್ತು ನೀರು ಕುಡಿಯದೇ ಮಲಗುವವರು.
ಇದನ್ನೂ ಓದಿ:​​‘ಮ್ಯಾರಿ ಮಿ ಚಿಕನ್’ ತಿಂದಿದ್ದೀರಾ? ಭಾನುವಾರದ ಬಾಡೂಟಕ್ಕೆ ಮನೆಯಲ್ಲೇ ಮಾಡಿ ನೋಡಿ
ಹೀಗೆ ಮಲಗುವ ಇಬ್ಬರಲ್ಲೂ ಕೂಡ ಬೆಳಗ್ಗೆ ಸಾಮಾನ್ಯವಾಗಿ ಹ್ಯಾಂಗೋವರ್​ನಲ್ಲಿ ಕಾಣುವ ಲಕ್ಷಣಗಳು ಕಂಡು ಬಂದಿವೆ. ತಲೆನೋವು, ವಾಕರಿಕೆ ಹಾಗೂ ಸುಸ್ತು ರೀತಿಯ ಲಕ್ಷಣಗಳು ಕಂಡು ಬಂದಿದ್ದು. ಈ ಒಂದು ಅಧ್ಯಯನದಿಂದ ಕುಡಿದ ಮೇಲೆ ಸಾಕಷ್ಟು ನೀರು ಕುಡಿಯುವುದರಿಂದ ಹ್ಯಾಂಗೋವರ್​ ಆಗುವುದಿಲ್ಲ ಅನ್ನೋದು ಮಿತ್ಯ ಎಂಬುದು ಸಾಬೀತಾಗಿದೆ. ಹೀಗೆ ನೀರು ಕುಡಿದು ಮಲಗಿದವರಲ್ಲಿ ನೀರಡಿಕೆಯಂತ ಲಕ್ಷಣಗಳು ಕಡಿಮೆಯಾಗುವುದೇ ಹೊರತು, ಹ್ಯಾಂಗೋವರ್​ ಲಕ್ಷಣಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಹಾಗಿದ್ದರೆ ಹ್ಯಾಂಗೋವರ್ ಕಡಿಮೆ ಮಾಡಲು ಇರುವ ಔಷಧಿಯೇನು ಅಂತ ನೋಡುವುದಾದ್ರೆ ಅದು ಕೇವಲ ಕಡಿಮೆ ಕುಡಿಯುವುದು ಮಾತ್ರ. ಬೆಳಗ್ಗೆ ಎದ್ದು ಬ್ಲ್ಯಾಕ್ ಕಾಫಿ ಸೇವನೆ, ತಣ್ಣೀರು ಸ್ನಾನದಂತಹ ಸಲಹೆಗಳು ಕೇವಲ ತಾತ್ಕಾಲಿಕ ರಿಲೀಫ್ ಮಾತ್ರ ನೀಡಬಲ್ಲವು. ಆದ್ರೆ ಹ್ಯಾಂಗೋವರ್​ನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ, ನೀವು ಮತ್ತೆ ತಲೆನೋವು ಹಾಗೂ ವಾಕರಿಕೆ ಕಡಿಮೆಯಾಗುವಂತಹ ಮಾತ್ರೆಗಳ ಮೊರೆ ಹೋಗಬೇಕು ವಿನಃ ಬೇರೆ ಮಾರ್ಗವಿಲ್ಲ ಹೀಗಾಗಿ ಕುಡಿಯುವ ನಿಮ್ಮ ಮಿತಿಯನ್ನು ಮೀರದೆ ಒಂದು ನಿಮ್ಮ ದೇಹ ತಡೆಯುವಷ್ಟು ಮತ್ತು ಸಹಕರಿಸುವಷ್ಟು ಕುಡಿದರೆ ಮಾತ್ರ ಹ್ಯಾಂಗೋವರ್​ನ್ನು ಕಡಿಮೆ ಮಾಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ